ಪಾಕ್‌ – ಭಾರತ ಯುದ್ಧ! – ದೇಶದ ಮನರಂಜನಾ ಕ್ಷೇತ್ರದಲ್ಲೂ ಮಹತ್ವದ ಕ್ರಮ!

ಪಾಕ್‌ – ಭಾರತ ಯುದ್ಧ! – ದೇಶದ ಮನರಂಜನಾ ಕ್ಷೇತ್ರದಲ್ಲೂ ಮಹತ್ವದ ಕ್ರಮ!

ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕ್ ನಡುವಿನ ಕಾದಾಟ ಹೆಚ್ಚಾಗುತ್ತಿದೆ. ದೇಶಾದ್ಯಂತ ಕಟ್ಟೆಚರ ವಹಿಸಲಾಗುತ್ತಿದೆ. ಈಗಾಗಲೇ ಐಪಿಎಲ್ ಪಂದ್ಯಗಳನ್ನು ರದ್ದು ಮಾಡಲಾಗಿದೆ.  ಯುದ್ಧದ ಪರಿಣಾಮ ಈಗ ಎಲ್ಲ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದೀಗ ಸಿನಿಮಾರಂಗದಲ್ಲೂ ಕೆಲ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಇದನ್ನೂ ಓದಿ:  ಈ ಸೀಸನ್ ನಲ್ಲಿ 12 + 04 = 16 ಪಂದ್ಯಗಳು ಬಾಕಿ – ಬಿಸಿಸಿಐ ಮುಂದೆ ಹಲವು ಸವಾಲು

ಹೌದು, ಯುದ್ಧದ ಸಂದರ್ಭದಲ್ಲಿ ಜನರ ಮನರಂಜನೆಗಿಂತಲೂ ದೇಶದ ಭದ್ರತೆಯೇ ಮುಖ್ಯ. ಹಾಗಾಗಿ ಒಂದಷ್ಟು ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಸ್ಟಾರ್​ ನಟರ ಸಿನಿಮಾಗಳಿಗೆ ಸಂಬಂಧಿಸಿದ ಇವೆಂಟ್​ಗಳು ನಡೆದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಯುದ್ಧದ ತೀವ್ರತೆ ಕ್ಷಣಕ್ಷಣವೂ ಹೆಚ್ಚುತ್ತಿರುವ ಪರಿಸ್ಥಿತಿ ಇರುವಾಗ ಈ ರೀತಿ ಸಾರ್ವಜನಿಕವಾಗಿ ಜನ ಸೇರುವುದು ಸೂಕ್ತವಲ್ಲ. ಹಾಗಾಗಿ ಚಿತ್ರರಂಗದವರು ಸ್ವತಃ ಪ್ರೇರಿತವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆಡಿಯೋ ಲಾಂಚ್, ಪ್ರೀ-ರಿಲೀಸ್ ಇವೆಂಟ್ ಮುಂತಾದ ಕಾರ್ಯಕ್ರಮಗಳನ್ನು ಸದ್ಯಕ್ಕೆ ಮುಂದೂಡಲಾಗುತ್ತಿದೆ.

ಕಮಲ್ ಹಾಸನ್ ಅವರು ಥಗ್ ಲೈಫ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮೇ 16ರಂದು ಮಾಡಲು ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಸಕಲ ಸಿದ್ಧತೆ ನಡೆದಿತ್ತು. ಆದರೆ ದೇಶದಲ್ಲಿ ಯುದ್ಧದ ಸಂದರ್ಭ ಎದುರಾಗಿರುವುದರಿಂದ ‘ಥಗ್ ಲೈಫ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮಂದೂಡಲಾಗಿದೆ. ಈ ಬಗ್ಗೆ ಕಮಲ್ ಹಾಸನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಮಂತಾ ರುತ್ ಪ್ರಭು ನಿರ್ಮಾಣ ಮಾಡಿದ ‘ಶುಭಂ’ ಸಿನಿಮಾ ಇಂದು (ಮೇ 9) ಬಿಡುಗಡೆ ಆಗಿದೆ. ಇಂದು ಸಂಜೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಬೇಕಿತ್ತು. ಆದರೆ ಅದನ್ನು ಪೋಸ್ಟ್ ಪೋನ್ ಮಾಡಲಾಗಿದೆ. ಮನರಂಜನಾ ಕಾರ್ಯಕ್ರಮಗಳಿಗಿಂತಲೂ ಸುರಕ್ಷತೆಯೇ ಮುಖ್ಯ ಎಂಬ ಕಾರಣಕ್ಕೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಬಹುನಿರೀಕ್ಷಿತ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆದರೂ ಅಚ್ಚರಿ ಏನಿಲ್ಲ. ಒಟ್ಟಿನಲ್ಲಿ ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ರಾಜ್​ಕುಮಾರ್ ರಾವ್ ನಟನೆಯ ‘ಭೂಲ್ ಚುಕ್ ಮಾಫ್’ ಸಿನಿಮಾವನ್ನು ಚಿತ್ರಮಂದಿರದ ಬದಲು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

Shwetha M

Leave a Reply

Your email address will not be published. Required fields are marked *