ಠಾಣೆಗಳಲ್ಲಿ ದಾಖಲಾಗುತ್ತಿವೆ ಸಾಲು ಸಾಲು ದೂರು – ವನ್ಷಿಕಾ ಹೆಸರಲ್ಲಿ ನಿಶಾ ನರಸಪ್ಪ ವಂಚಿಸಿದ್ದೆಷ್ಟು..?

ಠಾಣೆಗಳಲ್ಲಿ ದಾಖಲಾಗುತ್ತಿವೆ ಸಾಲು ಸಾಲು ದೂರು – ವನ್ಷಿಕಾ ಹೆಸರಲ್ಲಿ ನಿಶಾ ನರಸಪ್ಪ ವಂಚಿಸಿದ್ದೆಷ್ಟು..?

ಕಿರುತೆರೆ ರಿಯಾಲಿಟಿ ಶೋ ಹಾಗೂ ಶಾರ್ಟ್ ಮೂವಿಗಳಲ್ಲಿ ನಟನೆ ಮಾಡುತ್ತಾ ಜನಮನ ಗೆದ್ದಿರುವ ಬಾಲನಟಿ ವನ್ಷಿಕಾ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದೆ. ನಿಮ್ಮ ಮಕ್ಕಳಿಗೆ ನಟನೆಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದು ಶನಿವಾರವೂ ಕೂಡ ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆರೋಪಿ ನಿಶಾ ನರಸಪ್ಪ ಎಷ್ಟು ಜನರಿಗೆ ವಂಚನೆ ಮಾಡಿರಬಹುದು ಅನ್ನೋದೇ ಆತಂಕ ಮೂಡಿಸಿದೆ.

ಇದನ್ನೂ ಓದಿ : RSSಗೆ 35 ಎಕರೆ ಭೂಮಿ ಹಸ್ತಾಂತರಕ್ಕೆ ಸರ್ಕಾರ ತಡೆ – ಸದನದಲ್ಲೂ ಲಿಖಿತ ಉತ್ತರ ನೀಡಿದ ಸಚಿವ

ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಹೆಸರಲ್ಲಿ ಜನರಿಗೆ ವಂಚನೆ ಎಸಗಿದ್ದ ಆರೋಪಿ ನಿಶಾ ನರಸಪ್ಪ (Nisha Narsappa) 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಕಡೆ ಅವರ ಮೇಲೆ ದೂರುಗಳ ಮೇಲೆ ದೂರು (Complaint)ಬರುತ್ತಿವೆ. ಶನಿವಾರ ಮಧ್ಯಾಹ್ನದ ವೇಳೆ 20ಕ್ಕೂ ಹೆಚ್ಚು ಕುಟುಂಬಗಳು ನಿಶಾ ವಿರುದ್ಧ ದೂರು ದಾಖಲಿಸಿವೆ. ಸದಾಶಿವನಗರ ಪೊಲೀಸ್ ಅಧಿಕಾರಿಗಳು ಸೂಚಿಸಿದಂತೆ ವಂಚನೆಗೆ ಒಳಗಾದ ಕುಟುಂಬಗಳು ತಾವು ವಾಸಿಸುವ ಮನೆಯ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳಿಗೆ ಫೋಟೋ ಶೂಟ್, ಆಲ್ಬಂ ಶೂಟ್, ಅವಕಾಶ ಕೊಡುವ ನೆಪದಲ್ಲಿ ಹಲವರಿಗೆ ನಿಶಾ ವಂಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆರೋಪಿ ನಿಶಾ ಈ ಹಿಂದೆ ತಾರಾ ಎಂಬುವವರಿಗೆ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ಮಾಡಿದ್ದರು ಎನ್ನುವ ಆರೋಪ ಕೂಡ ಇದೆ. ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ನಿಶಾ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರಂತೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿ ನಿಶಾ ವಿರುದ್ದ ವಂಚನೆ ದೂರುಗಳು ದಾಖಲಾಗಿವೆ.  ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್ ನಲ್ಲಿ ಬರೋಬ್ಬರಿ 35 ಲಕ್ಷ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಹೂಡಿಕೆ ಮಾಡಿದ್ರೆ ಲಾಭಾಂಶ ನೀಡುವುದಾಗಿ ನಿಶಾ ವಂಚನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

suddiyaana