350 ರೂಪಾಯಿಗಾಗಿ 60 ಬಾರಿ ಚುಚ್ಚಿ ಕೊಂದ ಅಪ್ರಾಪ್ತ! – ಹೆಣದ ಮೇಲೆ ಕುಣಿದು ವಿಕೃತಿ!
ಜಗಳ, ಮನಸ್ತಾಪಕ್ಕೆ ಇಂತಹದ್ದೇ ಕಾರಣ ಬೇಕು ಅಂತಾ ಇಲ್ಲ. ಸಣ್ಣ ಪುಟ್ಟ ವಿಚಾರಕ್ಕೂ ದೊಡ್ಡ ಜಗಳ ಆರಂಭವಾಗಬಹುದು ಕೊನೆಗೆ ಇದು ಜೀವ ತೆಗೆಯವ ಮಟ್ಟಕ್ಕೆ ಬರುತ್ತೆ. ಇಂತಹ ಅದೆಷ್ಟೋ ಘಟನೆಗಳು ನಡೆದಿವೆ. ಹಣ, ಆಸ್ತಿ ವಿಷಯಗಳಿಗೆ ಅಪ್ಪ-ಮಗನ ನಡುವೆ, ಅಮ್ಮ-ಮಗ ನಡುವೆ, ಸ್ನೇಹಿತರ ನಡುವೆ, ಅಣ್ಣ-ತಮ್ಮಂದಿರ ನಡುವೆ ದೊಡ್ಡ ದೊಡ್ಡ ಜಗಳಗಳು ನಡೆಯುತ್ತವೆ. ಕೆಲವೊಮ್ಮೆ ಈ ಜಗಳಗಳು ಅತಿರೇಖಕ್ಕೆ ಹೋದಾಗ ಕೊಲೆಯಲ್ಲಿ ಅಂತ್ಯ ಕಾಣುತ್ತವೆ. ಇಂತಹದ್ದೇ ಒಂದು ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಇದನ್ನೂ ಓದಿ: ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ವಿಳಂಬ – ಕದನ ವಿರಾಮ ಪಕ್ರಿಯೆಯೂ ಮುಂದೂಡಿದ ಇಸ್ರೇಲ್!
ಏನಿದು ಘಟನೆ?
ಈಶಾನ್ಯ ದೆಹಲಿಯಲ್ಲಿ ಭೀಕರ ಕೊಲಡಯೊಂದು ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕ 17 ವರ್ಷದ ಬಾಲಕನ್ನು ಬರೋಬ್ಬರಿ 60 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ತಲೆ, ಕತ್ತು ಮತ್ತು ಕಿವಿ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ನೋಡಿ ಪೊಲೀಸರೇ ದಂಗಾಗಿದ್ದಾರೆ.
350 ರೂಪಾಯಿಗಾಗಿ ಕೊಲೆ!
ಕೊಲೆ ಮಾಡಿದವನು & ಕೊಲೆಯಾದವರು ಇಬ್ಬರೂ ಸಹ ಅಪ್ರಾಪ್ತರು ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ 11.15 ಕ್ಕೆ ಈ ಘಟನೆ ಕುರಿತಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. 17 ವರ್ಷದ ಬಾಲಕನ ಬಳಿ ಇದ್ದ ಹಣವನ್ನು ಕೊಲೆ ಮಾಡಿದ ಬಾಲಕ ತನೆಗೆ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಬಾಲಕ ಹಣ ಕೊಡಲು ನಿರಾಕರಿಸಿದ್ದಾನೆ. ಈ ವೇಳೆ ಕೊಲೆ ಮಾಡಿದ ಬಾಲಕ ಹಣವನ್ನು ಆತನಿಂದ ಕಿತ್ತುಕೊಳ್ಳಲು ಪ್ರಯತ್ನಿಸುತ್ತಾನೆ. ಈ ವೇಳೆ ಕೊಲೆಯಾದ ಬಾಲಕ ಹಣ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ 16 ವರ್ಷದ ಬಾಲಕ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಹೆಣದ ಮೇಲೆ ಡ್ಯಾನ್ಸ್ ಮಾಡಿದ !
ಕೊಲೆಯ ಆರೋಪಿ 17 ವರ್ಷದ ಹುಡುಗನನ್ನು ಉಸಿರುಗಟ್ಟಿಸಿ, ತಲೆ ಭಾಗಕ್ಕೆ ಚಾಕುವಿನಿಂದ ಇರಿದು ಸಾಯಿಸಿದ್ದಾನೆ. ಆತನನ್ನು ಸಾಯಿಸಿದ ಬಳಿಕ ಹೆಣದ ಮೇಲೆ ಡ್ಯಾನ್ಸ್ ಕೂಡ ಮಾಡಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಂಠಪೂರ್ತಿ ಕುಡಿಯುತ್ತಿದ್ದ ಆರೋಪಿ ಬಾಲಕ!
ತನಿಖೆ ವೇಳೆ ಆರೋಪಿಯ ಬಗ್ಗೆ ಮತ್ತಷ್ಟು ವಿಚಾರಗಳನ್ನು ಬೆಳಕಿಗೆ ಬಂದಿವೆ. ಆತ ಜಾಫ್ರಾಬಾದ್ ನಿವಾಸಿಯಾಗಿದ್ದು, ಶಾಲೆಯನ್ನು ಬಿಟ್ಟು ತುಂಬಾ ದಿನಗಳಾಗಿತ್ತು. ಜೊತೆಗೆ ಕೊಲೆ ಮಾಡಿದಾಗ ಆತ ಕಂಠ ಪೂರ್ತಿ ಕುಡಿದಿದ್ದ ಎಂದು ತಿಳಿದು ಬಂದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದವನು ಅಪ್ರಾಪ್ತನಾಗಿದ್ದು, ಪೊಲೀಸರು ಆತನ ಗುರುತನ್ನು ಬಹಿರಂಗಪಡಿಸಿಲ್ಲ.