ದೊಡ್ಮನೆಯಲ್ಲಿ ಮತ್ತೆ ದೊಡ್ಡ ಗಲಾಟೆ – ಟಾಸ್ಕ್‌ ವೇಳೆ ಬಡಿದಾಡಿಕೊಂಡ ಮಂಜು, ಶಿಶಿರ್‌!

ದೊಡ್ಮನೆಯಲ್ಲಿ ಮತ್ತೆ ದೊಡ್ಡ ಗಲಾಟೆ – ಟಾಸ್ಕ್‌ ವೇಳೆ ಬಡಿದಾಡಿಕೊಂಡ ಮಂಜು, ಶಿಶಿರ್‌!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ನಲ್ಲಿ ಬರೀ ರಂಪಾಟವೇ ಹೆಚ್ಚಾಗಿದೆ. ಪ್ರತಿದಿನ ಜಗಳ, ಕಿತ್ತಾಟವೇ ನೋಡೋ ದೌರ್ಭಾಗ್ಯ ಬಂದಿದೆ.. ಮೊನ್ನೆ ಮೊನ್ನೆಯಷ್ಟೇ ಲಾಯರ್‌ ಜಗದೀಶ್‌ ಹಾಗೂ ರಂಜಿತ್‌ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿದ್ರು.. ಇದೀಗ ದೊಡ್ಮನೆಯಲ್ಲಿ ಮತ್ತೆ ದೊಡ್ಡ ಜಗಳ ಆಗಿದೆ.

ಇದನ್ನೂ ಓದಿ: HAPPY RETIREMET ರಾಹುಲ್ – ಸರ್ಫರಾಜ್, ಪಂತ್ ಓಕೆ.. KL ಡ್ರಾಪ್?

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮತ್ತೆ ಅಸಮಧಾನದ ಬೆಂಕಿ ಹೊತ್ತಿಕೊಂಡದೆ. ಬಿಗ್​ಬಾಸ್​ ಮನೆ ಮಂದಿಗೆ ಕ್ಯಾಪ್ಟನ್ಸಿ ಟಾಸ್ಕ್​ ಕೊಟ್ಟಿದ್ದಾರೆ. ಜೋಡಿಗಳು ಸುತ್ತುತ್ತಾ, 17 ನಿಮಿಷಗಳನ್ನು ಎಣಿಸುತ್ತಾ ತಿರುಗಬೇಕು ಅಂತ ಹೇಳಿದ್ದರು. ಈ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಗ್ರಂ ಮಂಜು ಹಾಗೂ ಶಿಶಿರ್​ ನಡುವೆ ದೊಡ್ಡ ಗಲಾಟೆಯಾಗಿದೆ.

ಕ್ಯಾಪ್ಟನ್ಸಿ ಪಟ್ಟ ಸಿಗಬಾರದೆಂದು ಉಗ್ರಂ ಮಂಜು, ಶಿಶರ್​ಗೆ ಡಿಸ್ಟ್ರಾಕ್ಟ್ ಮಾಡಿದ್ದಾರೆ. ಆಗ ಅದೇ ಕೋಪದಲ್ಲಿ ಮಂಜು, ಶಿಶಿರ್​ಗೆ ಹಾಗೂ ಸುರೇಶ್​ಗೆ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯೆ ಮಧ್ಯೆ ಕೋಲನ್ನು ಅಡ್ಡ ತಂದಿದ್ದಾರೆ. ಜೋರಾಗಿ ಕೋಲು ತಳ್ಳಿದ್ದರಿಂದ ಶಿಶಿರ್​ ಕೈಗೆ ಗಾಯವಾಗಿದೆ.

ಇದೇ ಕೋಪದಲ್ಲಿ ಶಿಶಿರ್, ಉಗ್ರಂ ಮಂಜುಗೆ​ ದಿಬ್ಬಿನಿಂದ ಹೊಡೆದಿದ್ದಾರೆ. ಇದನ್ನೂ ನೋಡಿದ ಮನೆಮಂದಿ ಶಾಕ್​ ಆಗಿ ಅವರನ್ನು ತಡೆದಿದ್ದಾರೆ. ಇನ್ನು, ಈ ವಾರದ ​ಕ್ಯಾಪ್ಟನ್ ಪಟ್ಟ ಸಿಗೋದು ಯಾವ ಸ್ಪರ್ಧಿಗೆ ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Shwetha M