ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಶಾಸಕರ ಮಧ್ಯೆ ಗಲಾಟೆ! – ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ಮಾಡಿಕೊಂಡ ಕೈ ನಾಯಕರು!

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಶಾಸಕರ ಮಧ್ಯೆ ಗಲಾಟೆ! – ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ಮಾಡಿಕೊಂಡ ಕೈ ನಾಯಕರು!

ರಾಜ್ಯದಲ್ಲಿ ಕರ್ಚಿ ಕದನ ಇನ್ನೂ ತಣ್ಣಗಾಗಿಲ್ಲ. ಕೈ ನಾಯಕರ ಮಧ್ಯೆ ಅಸಮಧಾನ ಪದೇ ಪದೇ ಮುನ್ನಲೆಗೆ ಬರುತ್ತಿದೆ. ಇವೆಲ್ಲದ್ರ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ಹೋದ ಘಟನೆ ನಡೆದಿದೆ.

ಇದನ್ನೂ ಓದಿ: ಗ್ಯಾಸ್‌ ಸಿಲಿಂಡರ್‌ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ! – ದರ ಹೆಚ್ಚಾಗುತ್ತೆ ಅಂತ ಬಂಕ್‌ಗೆ ನೀರಿನ ಜಾರ್‌ ಹೊತ್ತುಕೊಂಡು ಬಂದ ಸವಾರ!

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದೆ. ಈ ವೇಳೆ ಸಿಎಲ್‌ಪಿ ಸಭೆಯಲ್ಲಿ ಬಂಗಾರ ಪೇಟೆ ಶಾಸಕ ನಾರಾಯಣಸ್ವಾಮಿ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಶಾಸಕಾಂಗ ಪಕ್ಷದ ಸಭೆಯಿಂದಲೇ ಶಾಸಕ ನಾರಾಯಣಸ್ವಾಮಿ ಹೊರನಡೆದರು. ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ನನಗೆ ಉದ್ದೇಶ ಪೂರ್ವಕವಾಗಿ ಟಾರ್ಚರ್ ಮಾಡುತ್ತಿದ್ದಾರೆ. 30-40 ನೋಟಿಸ್ ನೀಡಿದ್ದಾರೆ. ಅಧಿಕಾರಿಯೇ ಪವರ್‌ಫುಲ್ ಎಂದು ನಾರಾಯಣಸ್ವಾಮಿ ಕಿಡಿಕಾರಿದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಆಗ ಆ ಅಧಿಕಾರಿ ಒಳ್ಳೆಯವರು ಎಂದ ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದರು. ಇದಕ್ಕೆ ಕೋಪಗೊಂಡ ನಾರಾಯಣಸ್ವಾಮಿ, ನೋಟಿಸ್ ಕೊಟ್ಟಿದ್ದು ನನಗೆ. ನಿಮ್ಮನ್ನು ಯಾರು ಕೇಳಿದ್ದು? ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಎಂದು ರಾಜೇಗೌಡ ವಿರುದ್ಧ ಗರಂ ಆದರು. ಸಿಟ್ಟಿನಿಂದ ಶಾಸಕಾಂಗ ಪಕ್ಷದ ಸಭೆಯಿಂದಲೇ ಹೊರನಡೆದರು.

ಒಳ್ಳೆ ಬಜೆಟ್ ಕೊಟ್ಟಿದೀರ. ಒಳ್ಳೆ ಬಜೆಟ್ ಕೊಟ್ಟರೂ ನನ್ನ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ, ಇರಲಿ ಬಿಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸಿಎಲ್‌ಪಿಯಲ್ಲಿ ಸಿಎಂ ಕಾಲೆಳೆದರು. ಎಲ್ಲರಿಗೂ, ಎಲ್ಲಾ ಕ್ಷೇತ್ರಕ್ಕೂ ಕೊಟ್ಟಿದ್ದೇನೆ ಎಂದು ಸಿಎಂ ಸಮಜಾಯಿಷಿ ನೀಡಿದರು.

Shwetha M