ಚೆಪಾಕ್‌ನಲ್ಲಿ ಕಿಂಗ್ಸ್ ನಡುವೆ ಕಾಳಗ – ಧೋನಿ ಆಡ್ತಾರಾ? ಶ್ರೇಯಸ್ ಅಯ್ಯರ್ ಡೌಟ್?

ಚೆಪಾಕ್‌ನಲ್ಲಿ ಕಿಂಗ್ಸ್ ನಡುವೆ ಕಾಳಗ – ಧೋನಿ ಆಡ್ತಾರಾ? ಶ್ರೇಯಸ್ ಅಯ್ಯರ್ ಡೌಟ್?

ಚೆನ್ನೈ ಸೂಪರ್ ಕಿಂಗ್ಸ್  ಮತ್ತು ಪಂಜಾಬ್ ಕಿಂಗ್ಸ್ ನಡುವೆ ಶುಕ್ರವಾರ ರೋಚಕ ಪಂದ್ಯ ನಡೆಯಲಿದೆ. ಕಿಂಗ್ಸ್ ಗಳ ನಡುವಿನ ಕಾದಾಟಕ್ಕೆ ಚೆನ್ನೈನ ಚಿದಂಬರಂ ಸ್ಟೇಡಿಯಂ ರೆಡಿಯಾಗಿದೆ. ತವರಿನಲ್ಲಿ ಧೋನಿ ಕಣಕ್ಕಿಳಿಯಲಿದ್ದಾರೆ ಎಂಬ ಗುಡ್‌ನ್ಯೂಸ್ ಅಭಿಮಾನಿಗಳಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:RCB ಪಂದ್ಯ ನೋಡೋಕೆ ಬರೋ ಮೆಟ್ರೋ ಪ್ರಯಾಣಿಕರ ಗಮನಕ್ಕೆ – ಭಾನುವಾರ ಮಧ್ಯರಾತ್ರಿ 2 ಗಂಟೆವರೆಗೆ ಸಂಚರಿಸಲಿಗೆ ನಮ್ಮ ಮೆಟ್ರೋ

ಚೆನ್ನೈ ತಂಡ ಈ ಬಾರಿ ಮೊದಲ ಪಂದ್ಯದಲ್ಲೇ ಸೋತು ನಿರಾಶೆಗೊಂಡಿದೆ. ಜೊತೆಗೆ ಮೊದಲ ಪಂದ್ಯದಲ್ಲಿ ಚೆನ್ನೈ ಬಲಿಷ್ಠ ಆಟಗಾರರಿಲ್ಲದೇ ಕಣಕ್ಕಿಳಿದಿತ್ತು. ಜೊತೆಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತಿತ್ತು. ಇದೀಗ ಚೆನ್ನೈ ಟೀಮ್ ತನ್ನ ತವರಿನಲ್ಲಿ ಗೆಲುವಿನ ಖಾತೆ ತೆರೆಯಲು ಕಾಯುತ್ತಿದೆ. ಜೊತೆಗೆ ಟೀಮ್ ನ ಬಲ ಎಂ.ಎಸ್ ಧೋನಿ ತಂಡವನ್ನು ಸೇರಿಕೊಂಡಿರುವುದು ಆಟಗಾರರಲ್ಲಿ ಜೋಶ್ ಬಂದಿದೆ. ಜೊತೆಗೆ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಸಂಜು ಸ್ಯಾಮ್ಸನ್ ಮೇಲೆ ಸಿಎಸ್‌ಕೆ ಅಭಿಮಾನಿಗಳು ಬಹಳಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಹೀಗಾಗಿ ಚೆಪಾಕ್ ಮೈದಾನದಲ್ಲಿ ಚೆನ್ನೈ ಟೀಮ್ ಪಂಜಾಬ್ ವಿರುದ್ಧ ಹೇಗೆ ಕಾದಾಟ ನಡೆಸಲಿದೆ ಎಂಬ ಕುತೂಹಲ ಗರಿಗೆದರಿದೆ.

ಮತ್ತೊಂದೆಡೆ ಚೆನ್ನೈ ವಿರುದ್ಧ ಗೆಲ್ಲಲು ಪಂಜಾಬ್ ಕಿಂಗ್ಸ್ ಕೂಡಾ ತಯಾರಿ ನಡೆಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಅವರ ಬಗ್ಗೆ ಅಪ್‌ಡೇಟ್ ನೀಡಿದ ಹ್ಯಾಡಿನ್, ‘ಶ್ರೇಯಸ್ ಅಯ್ಯರ್ ಅವರಿಗೆ ಯಾವುದೇ ಮೂಳೆ ಮುರಿತ ಸಂಭವಿಸಿಲ್ಲ. ಅದು ಒಳ್ಳೆಯದು. ಈಗ ಊತವನ್ನು ಕಡಿಮೆ ಮಾಡುವುದು ಮತ್ತು ಕೈಗೆ ಚಲನೆಯನ್ನು ಮರಳಿ ತರುವುದು ಮಾತ್ರ ಉಳಿದಿದೆ. ಆದ್ದರಿಂದ, ಅವರು ನಾಳೆ ವೇಳೆಗೆ ಸರಿಯಾಗಿರುತ್ತಾರೆ’ ಎಂದು ಹೇಳಿದರು. ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಬ್ರಾಡ್ ಹ್ಯಾಡಿನ್, ಕಳೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಗಾಯವಾಗಿದ್ದು, ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆಗೆ ಅಯ್ಯರ್ ಲಭ್ಯವಿರುತ್ತಾರೆ ಎಂದಿದ್ದಾರೆ.

Sulekha