ಫಿಫಾ ವಿಶ್ವಕಪ್‌ ಸೆಮಿಫೈನಲ್ ಫೈಟ್ – ಗೆಲುವಿಗಾಗಿ ಬದ್ಧವೈರಿಗಳ ನಡುವೆ ಕಾದಾಟ

ಫಿಫಾ ವಿಶ್ವಕಪ್‌ ಸೆಮಿಫೈನಲ್ ಫೈಟ್ – ಗೆಲುವಿಗಾಗಿ ಬದ್ಧವೈರಿಗಳ ನಡುವೆ ಕಾದಾಟ

ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ಫೈಟ್ ಜೋರಾಗಿದ್ದು, ಬದ್ಧವೈರಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡುವ ನಿರೀಕ್ಷೆ ಮೂಡಿಸಿದೆ. ಮೊದಲ ಸೆಮೀಸ್‌ನಲ್ಲಿ ಫ್ರಾನ್ಸ್‌ ಹಾಗೂ ಸ್ಪೇನ್‌ ಎದುರಾದರೆ, 2ನೇ ಸೆಮೀಸ್‌ನಲ್ಲಿ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ ಮುಖಾಮುಖಿ ಆಗಲಿವೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-4 ಸ್ಥಾನಗಳಲ್ಲಿರುವ ತಂಡಗಳೇ ಸೆಮೀಸ್‌ಗೇರಿರುವುದು ಸಹ ವಿಶೇಷ. ಅಲ್ಲದೇ, ಈ ನಾಲ್ಕೂ ತಂಡಗಳು ಮಾಜಿ ಚಾಂಪಿಯನ್‌ಗಳೇ. ಹೀಗಾಗಿ, ಯಾರಿಗೆ ಮತ್ತೊಮ್ಮೆ ಟ್ರೋಫಿ ಒಲಿಯಲಿದೆ ಎನ್ನುವ ಕುತೂಹಲವೂ ಇದೆ. ನಾಳೆ ಮೊದಲ ಸೆಮಿಫೈನಲ್ ನಡೆದ್ರೆ, 16 ರಂದು  2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ 20ಕ್ಕೆ ನಡೆಯಲಿದೆ.

ಇದನ್ನೂ ಓದಿ: ಲಾರ್ಡ್ಸ್‌ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯ ಗೆದ್ದ ಭಾರತ ಮಹಿಳಾ ತಂಡ

ಈ ಎರಡು ದೇಶಗಳ ವಿರುದ್ಧದ ಪಂದ್ಯವನ್ನು ಶೇ.100ರಷ್ಟು, ಬದ್ಧವೈರಿಗಳ ನಡುವಿನ ಕಾದಾಟ ಎಂದು ಕರೆಯಬಹುದು. ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ 1982ರಲ್ಲಿ ಫಾಲ್ಕ್‌ಲ್ಯಾಂಡ್ಸ್‌ ಯುದ್ಧದಲ್ಲಿ ಸೆಣಸಿದ್ದವು. ಆ ಬಳಿಕ 1986ರ ಫುಟ್ಬಾಲ್‌ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಉಭಯ ದೇಶಗಳ ಎದುರಾದಾಗ, ಡಿಯಾಗೋ ಮರಡೋನಾರ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ದಾಖಲಾಗಿತ್ತು. ಅದೇ ಪಂದ್ಯದಲ್ಲಿ ಮರಡೋನಾ, ಶತಮಾನದ ಶ್ರೇಷ್ಠ ಗೋಲು ಎಂದು ಕರೆಸಿಕೊಳ್ಳುವಂತಹ ಗೋಲು ಬಾರಿಸಿ, ಇಂಗ್ಲೆಂಡನ್ನು ವಿಶ್ವಕಪ್‌ನಿಂದ ಹೊರದಬ್ಬಿದ್ದರು.

1998ರ ವಿಶ್ವಕಪ್‌ನಲ್ಲೂ ಈ ಎರಡು ದೇಶಗಳ ನಡುವೆ ಕಿತ್ತಾಟ ನಡೆದಿತ್ತು. ಇಂಗ್ಲೆಂಡ್‌ನ ಡೇವಿಡ್‌ ಬೆಕ್‌ಹ್ಯಾಮ್‌, ಅರ್ಜೆಂಟೀನಾದ ಡಿಯಾಗೋ ಸಿಮಿಯೋನಿಗೆ ಕಾಲಿನಿಂದ ಒದ್ದು ರೆಡ್‌ಕಾರ್ಡ್‌ಗೆ ಗುರಿಯಾಗಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್‌ ಪೆನಾಲ್ಟಿಯಲ್ಲಿ ಸೋತಿತ್ತು. ಬಳಿಕ 2002ರ ವಿಶ್ವಕಪ್‌ನಲ್ಲಿ ಬೆಕ್‌ಹ್ಯಾಮ್‌ ಬಾರಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ವಿರುದ್ಧ ಇಂಗ್ಲೆಂಡ್‌ ಗುಂಪು ಹಂತದ ಪಂದ್ಯವನ್ನು ಗೆದ್ದಿತ್ತು.

ಸೆಮಿಫೈನಲ್‌ಗಳಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ನಡುವಿನ ಪೈಪೋಟಿಯೂ ಕುತೂಹಲಕ್ಕೆ ಕಾರಣವಾಗಿದೆ. ಫ್ರಾನ್ಸ್‌ ಹಾಗೂ ಸ್ಪೇನ್‌ ನಡುವಿನ ಪಂದ್ಯದಲ್ಲಿ ಕೀಲಿಯನ್‌ ಎಂಬಾಪೆ ಹಾಗೂ ಲ್ಯಾಮಿನೆ ಯಮಾಲ್‌ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ. ಎಂಬಾಪೆ ಈಗಾಗಲೇ 8 ಗೋಲು ಬಾರಿಸಿ ಅತ್ಯುತ್ತಮ ಲಯದಲ್ಲಿದ್ದಾರೆ. ಯಮಾಲ್‌ ಗಳಿಸಿರುವುದು ಒಂದೇ ಗೋಲಾದರೂ, ತಂಡದ ಬಹುತೇಕ ಗೋಲುಗಳಲ್ಲಿ ಅವರ ಪಾತ್ರವಿದೆ.

 

Kishor KV

Leave a Reply

Your email address will not be published. Required fields are marked *