ರೋಚಕ ಘಟ್ಟ ತಲುಪಿದ ಫಿಫಾ ವಿಶ್ವಕಪ್ – ಬೆಲ್ವಿಯಂ ಮತ್ತು ಅಮೆರಿಕ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ

ರೋಚಕ ಘಟ್ಟ ತಲುಪಿದ ಫಿಫಾ ವಿಶ್ವಕಪ್ –  ಬೆಲ್ವಿಯಂ ಮತ್ತು ಅಮೆರಿಕ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ

ಫಿಫಾ ವಿಶ್ವಕಪ್ ರೋಚಕತೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈಗ ಮೆಗಾ ಟೂರ್ನಿಯಲ್ಲಿ ರೌಂಡ್ ಆಫ್‌ 32 ಪಂದ್ಯಗಳು ನಡೆಯುತ್ತಿವೆ. ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸೆನೆಗಲ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿದ ಬೆಲ್ವಿಯಂ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ ಅಂದ್ರೆ 16ರ ಘಟ್ಟ  ಪ್ರವೇಶಿಸಿದೆ.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯವು ಹೆಚ್ಚುವರಿ ಸಮಯಕ್ಕೆ ಸಾಕ್ಷಿಯಾಯಿತು. ಸಮಯ ಮುಕ್ತಾಯದ ಕೆಲವೇ ಸೆಕೆಂಡುಗಳ ಮುನ್ನ ಬೆಲ್ವಿಯಂನ ಯೂರಿ ಟೀಲೆಮನ್ಸ್ ಅವರನ್ನು ಸೆನೆಗಲ್ ಆಟಗಾರ ಕೆಳಗೆ ಬೀಳಿಸಿದರು. ಇದರಿಂದ ಬೆಲ್ಲಿಯಂಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಟೀಲೆಮನ್ಸ್, ಚೆಂಡನ್ನು ಗೋಲುಪೆಟ್ಟಿಗೆಗೆ ತಳ್ಳುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಭಾರತದ ಬ್ಯಾಟಿಂಗ್ ಮುಗಿಯುತ್ತಿದ್ದಂತೆ ಮಳೆ ಅಬ್ಬರ – ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ರದ್ದು

ಮತ್ತೊಂದು ಪಂದ್ಯದಲ್ಲಿ ಬೊಸ್ನಿಯಾ ವಿರುದ್ಧ ಗೆದ್ದ ಅಮೆರಿಕ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಬೊಸ್ನಿಯಾ ತಂಡವನ್ನು 2-0 ಗೋಲುಗಳಿಂದ ಸುಲಭವಾಗಿ ಮಣಿಸಿದ ಅಮೆರಿಕ, ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಸಲ ಈ ಹಂತದಲ್ಲಿ ಜಯ ಸಾಧಿಸಿದೆ.

ಪಂದ್ಯದ 45ನೇ ನಿಮಿಷದಲ್ಲಿ ಹಾಗೂ 81ನೇ ನಿಮಿಷದಲ್ಲಿ ಅಮೆರಿಕ ಗೋಲು ದಾಖಲಿಸುವ ಮೂಲಕ ಜಯದ ನಗೆ ಬೀರಿತು. ಆದರೆ ಬೊಸ್ನಿಯಾ ಯಾವುದೇ ಗೋಲು ಗಳಿಸುವಲ್ಲಿ ಸಾಧ್ಯವಾಗಲಿಲ್ಲ. ಜುಲೈ 6ರಂದು ನಡೆಯಲಿರುವ ಹದಿನಾರರ ಘಟ್ಟದ ಪ್ರಮುಖ ಪಂದ್ಯದಲ್ಲಿ ಬೆಲ್ವಿಯಂ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗಲಿವೆ.

 

Kishor KV

Leave a Reply

Your email address will not be published. Required fields are marked *