ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಟಿಕೆಟ್ , ಪಾರ್ಕಿಂಗ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ

ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಟಿಕೆಟ್ , ಪಾರ್ಕಿಂಗ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ

2026ರ ಜೂನ್‌-ಜುಲೈನಲ್ಲಿ ಅಮೆರಿಕ, ಮೆಕ್ಸಿಕೋ, ಕೆನಡಾದಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಟಿಕೆಟ್‌, ಪಾರ್ಕಿಂಗ್ ಪಾಸ್ ಬೆಲೆ ನೋಡಿದರೆ ನೀವು ಶಾಕ್ ಆಗ್ತೀರಾ. ಬಹುತೇಕ ಪಂದ್ಯಗಳ ಟಿಕೆಟ್‌ ಬೆಲೆ ಲಕ್ಷ ದಾಟುತ್ತಿದ್ದು, ಪಾರ್ಕಿಂಗ್‌ ಪಾಸ್‌ ಬೆಲೆ ಕೂಡಾ ಗಗನಕ್ಕೇರಿದೆ.

ಜೂ.11ರ ವಿಶ್ವಕಪ್‌ ಉದ್ಘಾಟನಾ ಪಂದ್ಯದ ಕೆಟಗರಿ-1 ಟಿಕೆಟ್‌ ಬೆಲೆ ₹2.76 ಲಕ್ಷ ಇದೆ. ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಕೆಟಗರಿ-1 ಟಿಕೆಟ್‌ ಮೌಲ್ಯ 10,999 ಅಮೆರಿಕನ್‌ ಡಾಲರ್‌(ಸುಮಾರು 10.18 ಲಕ್ಷ ರು.) ಇದೆ. ಇದೇ ಪಂದ್ಯದ ಕೆಟಗರಿ-2 ಟಿಕೆಟ್‌ಗೆ ₹4.88 ಲಕ್ಷ, ಕೆಟಗರಿ-3 ಟಿಕೆಟ್‌ಗೆ ₹5.35 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 

ಅಮೆರಿಕದ ಕ್ರೀಡಾಂಗಣದಲ್ಲಿ ವಾಹನ ಪಾರ್ಕಿಂಗ್‌ ವೆಚ್ಚ ದುಬಾರಿಯಾಗಿದೆ. ಕ್ಯಾಲಿಫೋರ್ನಿಯಾ ಕ್ರೀಡಾಂಗಣದ ಪಾರ್ಕಿಂಗ್‌ ಪಾಸ್‌ ಬೆಲೆ ₹27,821 ಇದೆ. ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಇದರ ಬೆಲೆ ₹20,866. ಇನ್ನು, ಹಾಸ್ಟನ್‌ ಕ್ರೀಡಾಂಗಣದಲ್ಲಿ ದೊಡ್ಡ ವಾಹನ ಪಾರ್ಕಿಂಗ್‌ ಮಾಡಬೇಕಿದ್ದರೆ ₹64,917 ಪಾವತಿಸಬೇಕಾಗುತ್ತದೆ. ಬಹುತೇಕ ಕ್ರೀಡಾಂಗಣಗಳ ಪಾರ್ಕಿಂಗ್‌ ಬೆಲೆ, ಭಾರತದ ಅಹಮದಾಬಾದ್‌ನಲ್ಲಿ ಐಪಿಎಲ್‌ ಫೈನಲ್‌ ಪಂದ್ಯದ 9 ಸಾಮಾನ್ಯ ಟಿಕೆಟ್‌ಗಳಿಗಿಂತಲೂ ಹೆಚ್ಚಿರುವುದು ಗಮನಾರ್ಹ.

ಅಮೆರಿಕದಲ್ಲಿ ಈ ಬಾರಿ ವಿಶ್ವಕಪ್‌ ಪಂದ್ಯ ವೀಕ್ಷಿಸಬೇಕಿದ್ದರೆ ಕೆಲ ವಿದೇಶಿಗರು ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ಅಲ್ಜೀರಿಯಾ, ಗ್ರೆನಡಾ, ಭೂತಾನ್‌, ಜಿಂಬಾಬ್ವೆ ಸೇರಿ 50 ದೇಶಗಳ ಜನರು ಅಮೆರಿಕ ಪ್ರವೇಶಕ್ಕೆ ಪ್ರವಾಸಿ ವೀಸಾ ಪಡೆಯಲು 15000 ಡಾಲರ್‌ ಅಂದ್ರೆ  ಅಂದಾಜು ₹13.9 ಲಕ್ಷ  ಠೇವಣಿ ಪಾವತಿಸಬೇಕು. ಹೀಗಾಗಿ, ಅಲ್ಜೀರಿಯಾ, ಸೆನೆಗಲ್‌ ಸೇರಿದಂತೆ ಈ ಬಾರಿ ವಿಶ್ವಕಪ್‌ ಆಡುವ ಕೆಲ ತಂಡಗಳ ಅಭಿಮಾನಿಗಳು ಅಮೆರಿಕದಲ್ಲಿ ಪಂದ್ಯ ವೀಕ್ಷಿಸಲು ಸುಮಾರು ₹20 ಲಕ್ಷ  ಹೊಂದಿರಬೇಕಾಗುತ್ತದೆ.

Kishor KV