ಫಿಫಾ ವಿಶ್ವಕಪ್ 2026ರ ಪವರ್ ರ್ಯಾಕಿಂಗ್ ಬಿಡುಗಡೆ – ಕೊನೆಯಲ್ಲಿ ರೊನಾಲ್ಡೊ , ಮೆಸ್ಸಿಗೆ 2ನೇ ಸ್ಥಾನ

ಫಿಫಾ ವಿಶ್ವಕಪ್ 2026ರ ಪವರ್ ಯಾಂಕಿಂಗ್ ಪಟ್ಟಿಯನ್ನು ಫಿಫಾ ಪ್ರಕಟಿಸಿದೆ. ಇದು 2026ರ ಫಿಫಾ ವಿಶ್ವಕಪ್ಗಾಗಿ ಪರಿಚಯಿಸಲಾದ ದತ್ತಾಂಶ ಆಧಾರಿತ ವೈಯಕ್ತಿಕ ಆಟಗಾರರ ರೇಟಿಂಗ್ ವ್ಯವಸ್ಥೆಯಾಗಿದೆ. ಇವು ಲೈವ್ ಪಂದ್ಯದ ದತ್ತಾಂಶ ಮತ್ತು ಎಐ ಆಧಾರಿತ ವಿಶ್ಲೇಷಣೆಯ ಮೂಲಕ ಪಂದ್ಯಾವಳಿಯ ಅಗ್ರ 100 ವೈಯಕ್ತಿಕ ಆಟಗಾರರನ್ನು ಮೌಲ್ಯಮಾಪನ ಮಾಡಿ ಶ್ರೇಯಾಂಕ ನೀಡುತ್ತವೆ.
ಜರ್ಮನಿಯ ಡೆನಿಝ್ ಉಂದಾವ್ ನಂ.1 ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಲಿಯೋನೆಲ್ ಮೆಸ್ಸಿ ನಂ. 2 ಸ್ಥಾನದಲ್ಲಿದ್ದರೆ, ಕಿಲಿಯನ್ ಎಂಬಾಪೆ ನಂ. 3 ಸ್ಥಾನ ಪಡೆದಿದ್ದಾರೆ. ಅಚ್ಚರಿಯೆಂದರೆ ಕ್ರಿಸ್ಟಿಯಾನೋ ರೊನಾಲ್ಡೊ 79ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಬ್ರೆಝಿಲ್ ಭರ್ಜರಿ ಕಂಬ್ಯಾಕ್ – ಜಪಾನ್ ವಿರುದ್ಧ ಕೊನೇ ಕ್ಷಣದಲ್ಲಿ ರೋಚಕ ಜಯ
ಪ್ರತಿಯೊಬ್ಬ ಆಟಗಾರನು ಪ್ರತಿ ಪಂದ್ಯಕ್ಕೆ ಮತ್ತು ಪಂದ್ಯಾವಳಿಯಲ್ಲಿನ ಅವರ ಒಟ್ಟಾರೆ ಪ್ರದರ್ಶನಕ್ಕಾಗಿ ಅಂಕಗಳನ್ನು ಪಡೆಯುತ್ತಾನೆ. ಎಲ್ಲಾ ಔಟ್ಫೀಲ್ಡ್ ಆಟಗಾರರು ಆಕ್ರಮಣಕಾರಿ, ಸೃಜನಶೀಲತೆ ಮತ್ತು ರಕ್ಷಣಾತ್ಮಕ ಎಂಬ ಮೂರು ವಿಭಾಗಗಳಲ್ಲಿ 0-10ರ ನಡುವೆ ಅಂಕಗಳನ್ನು ಪಡೆಯುತ್ತಾರೆ. ಗೋಲ್ಕೀಪರ್ಗಳಿಗೆ ಬಾಲ್ ನಿಯಂತ್ರಣ ಮತ್ತು ಗೋಲು ರಕ್ಷಿಸುವ ವಿಭಾಗಗಳಲ್ಲಿ ಅಂಕಗಳನ್ನು ನೀಡಲಾಗುತ್ತದೆ.
ಈ ವಿಶ್ವಕಪ್ನ ಅಚ್ಚರಿಯ ತಾರೆಗಳಲ್ಲಿ ಒಬ್ಬರಾದ ಡೆನಿಜ್ ಉಂದಾವ್, ಬಲಿಷ್ಠ ಜರ್ಮನಿ ತಂಡದ ಪರವಾಗಿ ಆಡುತ್ತಿದ್ದಾರೆ. 29 ವರ್ಷದ ಈ ಸ್ಟೈಕರ್ ಆಕ್ರಮಣಕಾರಿಯಲ್ಲಿ 8.36, ಸೃಜನಶೀಲತೆಯಲ್ಲಿ 6.78 ಮತ್ತು ರಕ್ಷಣಾತ್ಮಕವಾಗಿ 4.7 ಅಂಕಗಳನ್ನು ಪಡೆದಿದ್ದಾರೆ. ಮೆಸ್ಸಿ ಅವರು ಆಕ್ರಮಣಕಾರಿಯಲ್ಲಿ 8.34, ಸೃಜನಶೀಲತೆಯಲ್ಲಿ 6.43 ಮತ್ತು ರಕ್ಷಣಾತ್ಮಕವಾಗಿ 5.14 ಅಂಕಗಳೊಂದಿಗೆ ನಂ. 2 ಆಟಗಾರನಾಗಿದ್ದಾರೆ.. ಪೋರ್ಚುಗಲ್ನ ರೊನಾಲ್ಡೊ (5.72, 4.98, 4.74) ಅಂಕಗಳೊಂದಿಗೆ 79ನೇ ಸ್ಥಾನದಲ್ಲಿದ್ದಾರೆ.

ನೋಡಿರಿ

