ಫಿಫಾ ವಿಶ್ವಕಪ್‍ನಲ್ಲಿ ಮೆಸ್ಸಿ ಹವಾ – 6 ಗೋಲು ಭಾರಿಸಿ ರೆಕಾರ್ಡ್ ಬ್ರೇಕ್

ಫಿಫಾ ವಿಶ್ವಕಪ್‍ನಲ್ಲಿ ಮೆಸ್ಸಿ ಹವಾ – 6 ಗೋಲು ಭಾರಿಸಿ ರೆಕಾರ್ಡ್ ಬ್ರೇಕ್

ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಹವಾ ಜೋರಾಗಿದೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್‍ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.  ನಿನ್ನೆ ನಡೆದ ಜೋರ್ಡಾನ್ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಪೆನಾಲ್ಟಿ ಬಾಕ್ಸ್ ಹೊರಗಿನಿಂದ ಆರನೇ ಗೋಲು ದಾಖಲಿಸಿದರು. ವಿಶ್ವಕಪ್‍ನಲ್ಲಿ ಪೆನಾಲ್ಟಿ ಬಾಕ್ಸ್ ಹೊರಗಿನಿಂದ ಐದು ಗೋಲುಗಳನ್ನು ಬಾರಿಸಿ ಬ್ರೆಜಿಲ್‍ನ ರಿವೆಲಿನೊ ಸ್ಥಾಪಿಸಿದ್ದ ದಾಖಲೆಯನ್ನು ಮೆಸ್ಸಿ ಮುರಿದರು. ಜೆ ಗುಂಪಿನ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಜೋರ್ಡನ್ ತಂಡವನ್ನು 3-1 ಅಂತರದಿಂದ ಸೋಲಿಸಿತು.

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಸರಣಿ ಗೆದ್ದ ಕ್ರಿಕೆಟ್ ಶಿಶುಗಳು – ಭಾರತದ ಸೊಕ್ಕು ಮುರಿದ ಐರ್ಲೆಂಡ್

ಫುಟ್ಬಾಲ್‌ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಬಲಾನ್ ಡಿ ಓ‌ರ್ ಪ್ರಶಸ್ತಿಯನ್ನು ಎಂಟು ಬಾರಿ ಗೆದ್ದಿರುವ ಮೆಸ್ಸಿ ಈ ಗೋಲಿನೊಂದಿಗೆ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಪಂದ್ಯದ ಗೋಲಿನೊಂದಿಗೆ 8 ಬಾರಿ ಬ್ಯಾಲನ್ ಡಿ ಒರ್  ಪ್ರಶಸ್ತಿ ವಿಜೇತ ಮೆಸ್ಸಿ ಅವರ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಈ ಮೂಲಕ ಅರ್ಜೆಂಟೀನಾ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ತಮ್ಮ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲೇ ಅವರು ಈಗಾಗಲೇ 6 ಗೋಲುಗಳನ್ನು ಸಿಡಿಸಿದ್ದಾರೆ.

ಹಾಲಿ ಚಾಂಪಿಯನ್ ತಂಡ ಜೆ ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ನಾಕೌಟ್ ಹಂತಕ್ಕೇರಿತು. ಆರಂಭಿಕ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದ್ದ ಮೆಸ್ಸಿ ಆಸ್ಟ್ರಿಯಾ ವಿರುದ್ಧ ಎರಡು ಗೋಲುಗಳಿಸಿದ್ದರು. 39 ವರ್ಷದ ಆಟಗಾರ ಪಂದ್ಯದ 60ನೇ ನಿಮಿಷದಲ್ಲಿ ಫ್ರೀಕಿಕ್ ಮೂಲಕ ಗೋಲು ಗಳಿಸಿದರು. ಸತತ ಏಳು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದು.

ವಿಶ್ವಕಪ್‌ನ ಗುಂಪು ಹಂತದ ಎಲ್ಲ ಪಂದ್ಯಗಳಲ್ಲಿ ಗೋಲು ಗಳಿಸಿದ ನಾಲ್ಕನೇ ಆಟಗಾರ ಎಂಬ ದಾಖಲೆಗೂ ಮೆಸ್ಸಿ ಪಾತ್ರರಾಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಲೊ (2018), ಡೇವಿಡ್ ವಿಲ್ಲಾ (2010) ಮತ್ತು ಫೆನಾರ್‌ಂಡೊ ಟೊರ್ರೆಸ್ (2010) ಮಾತ್ರ ಈ ಮೊದಲು ಈ ಸಾಧನೆ ಮಾಡಿದ್ದರು. ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ 50ನೇ ಜಯ ದಾಖಲಿಸಿ, ಬ್ರೆಜಿಲ್ ಹಾಗೂ ಜರ್ಮನಿ ಬಳಿಕ ಈ ಸಾಧನೆ ಮಾಡಿದ ಮೂರನೇ ತಂಡ ಎನಿಸಿಕೊಂಡಿತು.

Kishor KV

Leave a Reply

Your email address will not be published. Required fields are marked *