ಈಜಿಪ್ಟ್ ವಿರುದ್ಧ ಅರ್ಜೆಂಟೀನಾಗೆ ರೋಚಕ ಜಯ – ಜಸ್ಟ್ 11 ನಿಮಿಷದಲ್ಲಿ ಮೆಸ್ಸಿ ಮ್ಯಾಜಿಕ್

ಈಜಿಪ್ಟ್ ವಿರುದ್ಧ ಅರ್ಜೆಂಟೀನಾಗೆ ರೋಚಕ ಜಯ – ಜಸ್ಟ್ 11 ನಿಮಿಷದಲ್ಲಿ ಮೆಸ್ಸಿ ಮ್ಯಾಜಿಕ್

ಫಿಫಾ ವಿಶ್ವಕಪ್ 2026ರ ಪಂದ್ಯದಲ್ಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಮತ್ತೊಮ್ಮೆ ತನ್ನ ತಾಕತ್ತನ್ನ ಜಗತ್ತಿನ ಮುಂದೆ ತೋರಿಸಿದೆ. 2 ಗೋಲುಗಳ ಹಿನ್ನಡೆಯಲ್ಲಿದ್ದರೂ ಧೃತಿಗೆಡದ ಲಿಯೋನೆಲ್ ಮೆಸ್ಸಿ ಪಡೆ, ಕೊನೆಯ 11 ನಿಮಿಷಗಳಲ್ಲಿ ಅದ್ಭುತವಾಗಿ ಕಂಬ್ಯಾಕ್ ಮಾಡಿ ಈಜಿಪ್ಟ್ ವಿರುದ್ಧ 3-2 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ. ಈ ಮೂಲಕ ಅರ್ಜೆಂಟೀನಾ ತಂಡ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಶ್ರೇಯಸ್ ಪಡೆಗೆ ಹೀನಾಯ ಸೋಲು – ಟೀಂ ಇಂಡಿಯಾಗೆ ಕೈ ಕೊಟ್ಟ ಓಪನರ್ಸ್

ಮೆಸ್ಸಿಗೆ ಇದು ಕೊನೆಯ ವಿಶ್ವಕಪ್.. ಈ ಪಂದ್ಯದಲ್ಲಿ ಮೆಸ್ಸಿಗೆ ಮೊದಲಾರ್ಧ ಅತ್ಯಂತ ಕಠಿಣವಾಗಿತ್ತು. ಪಂದ್ಯದ 15ನೇ ನಿಮಿಷದಲ್ಲೇ ಈಜಿಪ್ಟ್ನ ಯಾಸರ್ ಇಬ್ರಾಹಿಂ ಹೆಡರ್  ಮೂಲಕ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಕೆಲವೇ ಕ್ಷಣಗಳಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ಅವಕಾಶ ಸಿಕ್ಕಿತಾದರೂ, ಮೆಸ್ಸಿ ಹೊಡೆದ ಶಾಟ್ ಅನ್ನು ಈಜಿಪ್ಟ್ ಗೋಲ್‌ಕೀಪರ್ ಅದ್ಭುತವಾಗಿ ತಡೆದರು. ಇದು ಈ ಟೂರ್ನಿಯಲ್ಲಿ ಮೆಸ್ಸಿ ಮಿಸ್ ಮಾಡಿದ ಎರಡನೇ ಪೆನಾಲ್ಟಿಯಾಗಿದೆ. ನಂತರ ಮೆಸ್ಸಿ ಹೊಡೆದ ಮತ್ತೊಂದು ಬಾಲ್ ಗೋಲ್ ಪೋಸ್ಟ್‌ಗೆ ಬಡಿದು ವಾಪಸ್ಸಾಯಿತು.

ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಅರ್ಜೆಂಟೀನಾ ತಂಡ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. 79ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಅವರು ಹೆಡರ್ ಮೂಲಕ ಅರ್ಜೆಂಟೀನಾ ಪರ ಮೊದಲ ಗೋಲು ಗಳಿಸಿ ಆಸರೆಯಾದರು. ಈ ಗೋಲು ತಂಡದಲ್ಲಿ ಹೊಸ ಚೈತನ್ಯ ತುಂಬಿತು. ಇದರ ಬೆನ್ನಲ್ಲೇ 83ನೇ ನಿಮಿಷದಲ್ಲಿ ಕಮಾಲ್ ಮಾಡಿದ ಲಿಯೋನೆಲ್ ಮೆಸ್ಸಿ, ಈ ಟೂರ್ನಿಯಲ್ಲಿ ತಮ್ಮ 8ನೇ ಮತ್ತು ಒಟ್ಟಾರೆ ವಿಶ್ವಕಪ್‌ ಇತಿಹಾಸದಲ್ಲಿ ದಾಖಲೆಯ 21ನೇ ಗೋಲು ಬಾರಿಸಿ ಪಂದ್ಯವನ್ನು 2-2 ಗೋಲುಗಳ ಸಮಬಲಕ್ಕೆ ತಂದರು. ಪಂದ್ಯದ ನಿಗದಿತ ಸಮಯ ಮುಗಿದು ಇಂಜುರಿ ಟೈಮ್   ನಡೆಯುತ್ತಿದ್ದಾಗ ಎಂಜೊ ಫೆರ್ನಾಂಡಿಸ್  ವಿಜಯದ ಗೋಲು ಬಾರಿಸಿದ್ರು.

Kishor KV

Leave a Reply

Your email address will not be published. Required fields are marked *