ಫುಟ್‌ಬಾಲ್ ಹಬ್ಬಕ್ಕೆ ಶುರುವಾಗಿದೆ ಕ್ಷಣಗಣನೆ-ಅಭಿಮಾನಿಗಳಿಗೆ ಶುರುವಾಯ್ತು ಫಿಫಾ ಫೀವರ್
ನವೆಂಬರ್ 20ರಿಂದ ಫಿಫಾ ಫುಟ್‌ಬಾಲ್ ವಿಶ್ವಕಪ್ ಆರಂಭ

ಫುಟ್‌ಬಾಲ್  ಹಬ್ಬಕ್ಕೆ ಶುರುವಾಗಿದೆ ಕ್ಷಣಗಣನೆ-ಅಭಿಮಾನಿಗಳಿಗೆ ಶುರುವಾಯ್ತು ಫಿಫಾ ಫೀವರ್ನವೆಂಬರ್ 20ರಿಂದ ಫಿಫಾ ಫುಟ್‌ಬಾಲ್ ವಿಶ್ವಕಪ್ ಆರಂಭ

ದೋಹಾ: ನವೆಂಬರ್ 20ರಿಂದ ಫುಟ್‌ಬಾಲ್ ಫೀವರ್ ಶುರುವಾಗಲಿದೆ. ಅಭಿಮಾನಿಗಳ ಪಾಲಿನ ಫುಟ್‌ಬಾಲ್ ಹಬ್ಬಕ್ಕೆ ದೋಹಾದ ಆಲ್‌ಬೈತ್ ಕ್ರೀಡಾಂಗಣದಲ್ಲಿ ನವೆಂಬರ್ 20ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7.30ಕ್ಕೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ಸಿಗಲಿದೆ. ಅದೇ ದಿನ ರಾತ್ರಿ 9.30ಕ್ಕೆ ಅತಿಥೇಯ ಕತಾರ್ ಮತ್ತು ಈಕ್ವೆಡಾರ್ ಮಧ್ಯೆ ಮೊದಲ ಪಂದ್ಯ ನಡೆಯಲಿದೆ.

ಇದನ್ನೂ ಓದಿ:  ಟಿ20 ವಿಶ್ವಕಪ್‌ಲ್ಲಿ ಹೋದ ಟೀಮ್ ಇಂಡಿಯಾ ಮಾನ ಕಿವೀಸ್‌ಲ್ಲಿ ಬರುತ್ತಾ ?

2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ 32 ತಂಡಗಳು ಸೆಣಸಲಿದ್ದು, ತಲಾ 4 ತಂಡಗಳ 8 ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ. ಹಾಲಿ ಚಾಂಪಿಯನ್ ಫ್ರಾನ್ಸ್ , ಟ್ರೋಫಿಯನ್ನ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ತಂಡದ ಪ್ರಮುಖ ಆಟಗಾರ ಕರೀಂ ಬೆಂಜಿಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಿಫಾ ವಿಶ್ವಕಪ್ ಗೆ ದಿನ ಸಮೀಪಿಸುತ್ತಿದ್ದಂತೆ ಫುಟ್‌ಬಾಲ್ ಕಾವು ಜೋರಾಗಿದ್ದು, ಹಲವು ನಗರಗಳಲ್ಲಿ ಮೆಸ್ಸಿ, ರೊನಾಲ್ಡೋ ಸೇರಿದಂತೆ ಫುಟ್‌ಬಾಲ್ ತಾರೆಗಳ ಕಟೌಟ್ ರಾರಾಜಿಸುತ್ತಿದೆ.

suddiyaana