ಫಿಫಾ ಫುಟ್ಬಾಲ್ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ ಕದನ – 8 ತಂಡಗ ನಡುವೆ ರೋಚಕ ಕಾದಾಟ

ಫಿಫಾ ಫುಟ್ಬಾಲ್ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ ಕದನ – 8 ತಂಡಗ ನಡುವೆ ರೋಚಕ ಕಾದಾಟ

23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. 48 ತಂಡಗಳ ಪೈಕಿ 40 ತಂಡಗಳು ಗುಂಪು ಹಂತ ಹಾಗೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದು, ಉಳಿದ 8 ತಂಡಗಳ ನಡುವೆ ಕ್ವಾರ್ಟರ್ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ.

ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಮಾಜಿ ಚಾಂಪಿಯನ್‌ಗಳಾದ ಫ್ರಾನ್ಸ್‌, ಇಂಗ್ಲೆಂಡ್‌, ಸ್ಪೇನ್‌ ೂಹಾಗ ಚೊಚ್ಚಲ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ಬೆಲ್ಜಿಯಂ, ನಾರ್ವೆ, ಮೊರಾಕ್ಕೊ, ಸ್ವಿಜರ್‌ಲೆಂಡ್‌ ತಂಡಗಳು ಈಗ ಅಂತಿಮ 8ರ ಕಣದಲ್ಲಿವೆ.

ಸತತ 3ನೇ ಫೈನಲ್‌ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್‌ಗೆ ಮೊರಾಕ್ಕೊ ಸವಾಲು ಎದುರಾಗಲಿದೆ. 2010ರ ಚಾಂಪಿಯನ್‌ ಸ್ಪೇನ್‌ ತಂಡ ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ. ಇಂಗ್ಲೆಂಡ್‌ ಹಾಗೂ ನಾರ್ವೆ ತಂಡಗಳ ನಡುವೆ 3ನೇ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಸ್ವಿಜರ್‌ಲೆಂಡ್‌ ಸವಾಲೊಡ್ಡಲಿದೆ.

ಇದನ್ನೂ ಓದಿ:  ಬಾಡಿಗೆದಾರರೇ ಬೇಡ ಆತಂಕ – ಈ ದಾಖಲೆಗಳಿದ್ರೆ ಕಟ್ ಆಗಲ್ಲ ಗೃಹಜ್ಯೋತಿ

ಆದ್ರೆ ಫಿಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯಗಳ ಆರಂಭಕ್ಕೂ ಮುನ್ನವೇ ಮೈದಾನದ ಹೊರಗೆ ಭಾರಿ ವಿವಾದವೊಂದು ಸೃಷ್ಟಿಯಾಗಿದೆ. ಜುಲೈ 9ರಂದು ಬೋಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಬಲಿಷ್ಠ ಫ್ರಾನ್ಸ್ ಮತ್ತು ಮೊರಾಕೊ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಫಿಫಾ ಅರ್ಜೆಂಟೀನಾ ರೆಫರಿಗಳನ್ನೇ ನೇಮಿಸಿದ್ದಾರೆ. ಈ ಒಂದು ನಿರ್ಧಾರ ಇದೀಗ ಜಾಗತಿಕ ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ 2022ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಫ್ರಾನ್ಸ್ ಸೋಲು ಮುಖ್ಯ ಕಾರಣ ರೆಫರಿಗಳು ತೋರಿದ ತಾರತಮ್ಯ ಮತ್ತು ಪಕ್ಷಪಾತದ ತೀರ್ಪುಗಳು ಎಂಬ ಆರೋಪಗಳು ಕೇಳಿ ಬಂದಿದ್ದವು.ಇದಾದ ಬಳಿಕ ಉಭಯ ದೇಶಗಳ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಮೈದಾನದ ಒಳಗೆ ಹಾಗೂ ಹೊರಗೆ ತೀವ್ರ ಪೈಪೋಟಿ ಮತ್ತು ಹಗೆತನ ಮುಂದುವರಿದಿದೆ.ು ಈಗ ಮತ್ತೆ ಅದೇ ಆತಂಕ ಎದುರಾಗಿದೆ.

Kishor KV

Leave a Reply

Your email address will not be published. Required fields are marked *