ಫೈನಲ್ ನಲ್ಲಿ ಆರ್ ಸಿಬಿ ಎದುರಾಳಿ ಯಾರು? – 18ರ ನಂಟು.. ಈ ಸಲ ಕಪ್ ನಮ್ದು?

ಸದ್ಯ 18ನೇ ಸೀಸನ್ ಐಪಿಎಲ್ನ ಮೊದಲನೇ ಫೈನಲಿಸ್ಟ್ ಆಗಿ ಆರ್ಸಿಬಿ ಟಿಕೆಟ್ ಪಡೆದಿದೆ. ಬಟ್ ಇನ್ನೊಂದು ತಂಡ ಯಾವ್ದು ಅನ್ನೋದು ಇಂಪಾರ್ಟೆಂಟ್ ಆಗುತ್ತೆ. ಸದ್ಯ ಪ್ಲೇಆಫ್ಗೆ ಸೆಲೆಕ್ಟ್ ಆಗಿದ್ದ ಉಳಿದ ಮೂರೂ ತಂಡಗಳಿಗೂ ಅವಕಾಶ ಇದೆ. ಜೂನ್ 30ಕ್ಕೆ ಗುಜರಾತ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಎಲಿಮಿನೇಟರ್ ಮ್ಯಾಚ್ ನಡೆಯುತ್ತೆ. ಇಲ್ಲಿ ಗೆದ್ದವ್ರು ಸೆಕೆಂಡ್ ಕ್ವಾಲಿಫೈಯರ್ಗೆ ಸೆಲೆಕ್ಟ್ ಆಗ್ತಾರೆ. ಸದ್ಯ ಆರ್ಸಿಬಿ ವಿರುದ್ಧ ಸೋತಿರೋ ಪಂಜಾಬ್ಗೆ ಇನ್ನೊಂದು ಚಾನ್ಸ್ ಇದ್ದು ಎಲಿಮಿನೇಟರ್ನಲ್ಲಿ ಗೆದ್ದವ್ರ ವಿರುದ್ಧ ಕಣಕ್ಕಿಳೀತಾರೆ. ಸೋ ಇಲ್ಲಿ ವಿನ್ ಆದವ್ರು ಫೈನಲಿಸ್ಟ್ ಆಗ್ತಾರೆ.
ಇದನ್ನೂ ಓದಿ: ಪಂಜಾಬ್ಗೆ ಪಂಚ್ ಕೊಟ್ಟ ಆರ್ಸಿಬಿ – 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆೆ ಕ್ವಾಲಿಫೈ
ಫೈನಲ್ ಗೆದ್ದ ಮೇಲೇ ಸೆಲೆಬ್ರೇಷನ್!
ಇನ್ನು ಲಕ್ನೋ ವಿರುದ್ಧ ಗೆದ್ದು ಕ್ವಾಲಿಫೈಯರ್ 1ಗೆ ಕಾಲಿಟ್ಟಾಗ ಇಡೀ ಟೀಂ ಸೆಲೆಬ್ರೇಟ್ ಮಾಡಿತ್ತು. ಬಟ್ ಈ ಮ್ಯಾಚಲ್ಲಿ ಫ್ಯಾನ್ಸ್ ಸಂಭ್ರಮಿಸಿದ್ರೂ ಆಟಗಾರರು ಹೆಚ್ಚೇನು ಸೆಲೆಬ್ರೇಟ್ ಮಾಡ್ಲಿಲ್ಲ. ಅದಕ್ಕೆ ಕಾರಣ ಕಪ್ ಜೊತೆ ಕುಣಿದು ಕುಪ್ಪಳಿಸಬೇಕು ಅನ್ನೋದು. ಅದನ್ನ ಸ್ವತಃ ಆಟಗಾರರು ಕೂಡ ಹೇಳ್ಕೊಂಡಿದ್ದಾರೆ. ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಕ್ಯಾಪ್ಟನ್ ರಜತ್ ಪಾಟಿದಾರ್ ಮಾತನಾಡಿ ಜೂನ್ 3ಕ್ಕೆ ಕಪ್ ಗೆದ್ದು ಎರಡನ್ನೂ ಒಟ್ಟಿಗೆ ಸಂಭ್ರಮಿಸ್ತೇವೆ ಅಂದ್ರು. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಸುಯಾಶ್ ಶರ್ಮಾ ಕೂಡ ಇದನ್ನೇ ಹೇಳಿದ್ರು. ಸೋ ಈ ಪಂದ್ಯದ ಎನರ್ಜಿಯನ್ನೂ ಉಳುಸ್ಕೊಂಡು ಫುಲ್ ಕಾನ್ಫಿಡೆಂಟಾಗೇ ಫೈನಲ್ಗೆ ಕಾಲಿಡ್ತಿದ್ದಾರೆ.
ಒಟ್ನಲ್ಲಿ ಆರ್ಸಿಬಿ ಅಂದ್ರೇನೇ ಜೋಶ್. ಕಪ್ ಗೆಲ್ಲದೇ ಇದ್ದಾಗ್ಲೇ ತಲೆಮೇಲೆ ಹೊತ್ತು ಮೆರೆಸಿದ್ದೇವೆ. ಈಗ ಟ್ರೋಫಿ ಹೊಸ್ತಿಲಲ್ಲಿ ಇದ್ದಾಗ ಬಿಡ್ತಾರಾ. ಹೀಗಾಗೇ ಆಲ್ರೆಡಿ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಫ್ಯಾನ್ಸ್ ಹಾವಳಿ ಇಡ್ತಿದ್ದಾರೆ. 18ನೇ ಸೀಸನ್ ತುಂಬಾನೇ ಸ್ಪೆಷಲ್ ಆಗಿದ್ದು ಕಪ್ ಕೂಡ ನಮ್ದೇ ಆಗೋದ್ರಲ್ಲಿ ಅನುಮಾನವೇ ಇಲ್ಲ.