ಟಾಲಿವುಡ್‌ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾಗಳ ಹಬ್ಬ – ಆರು ಪ್ರಮುಖ ಸಿನಿಮಾಗಳು ಒಟ್ಟಿಗೆ ರಿಲೀಸ್

ಟಾಲಿವುಡ್‌ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾಗಳ ಹಬ್ಬ – ಆರು ಪ್ರಮುಖ ಸಿನಿಮಾಗಳು ಒಟ್ಟಿಗೆ ರಿಲೀಸ್

ಸಂಕ್ರಾಂತಿ ಸಂದರ್ಭದಲ್ಲಿ ಟಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಫೈಟ್ ಏರ್ಪಡುತ್ತದೆ. 2024ರ ಸಂಕ್ರಾಂತಿಯಲ್ಲಿಯೂ ದೊಡ್ಡ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಆರು ಪ್ರಮುಖ ಸಿನಿಮಾಗಳು ಈ ಸಂದರ್ಭದಲ್ಲಿ ರಿಲೀಸ್ ಆಗುತ್ತಿವೆ.

ಇದನ್ನೂ ಓದಿ: ಸೀರೆ ಉಟ್ಟು ಕಬಡ್ಡಿ ಆಡಿದ ಖ್ಯಾತ ನಟಿ –  ರೋಜಾ ಟ್ಯಾಲೆಂಟ್‌ ಫುಲ್‌ ವೈರಲ್‌!

ಹಬ್ಬಗಳ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವೇಳೆ ಯಾವ ಸಿನಿಮಾ ನೋಡಬೇಕು, ಯಾವ ಸಿನಿಮಾ ಬಿಡಬೇಕು ಎಂಬ ಗೊಂದಲ ಪ್ರೇಕ್ಷಕರಿಗೆ ಮೂಡುತ್ತದೆ. ಅದರಲ್ಲೂ ಸಂಕ್ರಾಂತಿ ಹಿಂದೂಗಳ ಪಾಲಿಗೆ ವಿಶೇಷ ಹಬ್ಬ. ಮುಂದಿನ ವರ್ಷ ಜನವರಿಯಲ್ಲಿ ಬರುವ ಸಂಕ್ರಾಂತಿ ಹಬ್ಬಕ್ಕೆ ‘ಗುಂಟೂರು ಖಾರಂ’, ‘ಈಗಲ್’ ಸೇರಿ ಆರು ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದ ರಿಲೀಸ್ ದಿನಾಂಕ ವಿಳಂಬ ಆಗುತ್ತಲೇ ಇತ್ತು. ಈಗ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ ಎಂದು ತಂಡ ಘೋಷಣೆ ಮಾಡಿ ಆಗಿದೆ. ಮಹೇಶ್ ಬಾಬುಗೆ ಜೊತೆಯಾಗಿ ಶ್ರೀಲೀಲಾ ನಟಿಸಿದ್ದಾರೆ. ಈ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಅವರು ನಿರ್ದೇಶನ ಮಾಡಿದ್ದಾರೆ. ಹೀಗಾಗಿ, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಪೌರಾಣಿಕ ಕಥೆಯ ‘ಹನುಮಾನ್’ ಸಿನಿಮಾ

ಪೌರಾಣಿಕ ಕಥೆ ಆಧರಿಸಿ ಹಲವು ಸಿನಿಮಾ ಮೂಡಿಬಂದಿದೆ. ‘ಹನುಮಾನ್’ ಸಿನಿಮಾ ಕೂಡ ಇದೇ ಮಾದರಿಯ ಚಿತ್ರ. ಹನುಮಂತನಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದಂತಿದೆ. ಅವರು ಕೂಡ ಈ ಹಬ್ಬದ ದಿನಾಂಕವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಗಮನ ಸೆಳೆದಿದೆ. ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ

ವಿಜಯ್ ದೇವರಕೊಂಡ ಅವರು ‘ಲೈಗರ್’ ಸಿನಿಮಾ ಮೂಲಕ ಸೋಲು ಕಂಡಿದ್ದರು. ‘ಖುಷಿ’ ಸಿನಿಮಾದ ಯಶಸ್ಸು ಅವರಿಗೆ ಕೊಂಚ ಖುಷಿ ಕೊಟ್ಟಿದೆ. ಈಗ ಅವರು ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರ ಜನವರಿ 13ರಂದು ರಿಲೀಸ್ ಆಗಲಿದೆ. ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದಿದ್ದಾರೆ.

ದಗ್ಗುಬಾಟಿ ವೆಂಕಟೇಶ್, ಆರ್ಯ, ರುಹಾನಿ ಶರ್ಮಾ ಮೊದಲಾದವರು ನಟಿಸಿರುವ ‘ಸೈಂಧವ’ ಚಿತ್ರ ಕೂಡ ಸಂಕ್ರಾಂತಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರವಿತೇಜ ನಟನೆಯ ‘ಈಗಲ್’ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಅಕ್ಕಿನೇನಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ತಂಡ ಕೂಡ ಸಂಕ್ರಾಂತಿಯನ್ನೇ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಆರು ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಲಿವೆ. ಈ ಮೂಲಕ ಟಾಲಿವುಡ್‌ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾಗಳ ಹಬ್ಬವೂ ಜೋರಾಗಿಯೇ ಇರಲಿದೆ.

Sulekha