ಯಾವ ದಿಕ್ಕಿನಲ್ಲಿ ಗಡಿಯಾರ ಇಟ್ರೆ ಸೂಕ್ತ – ಯಾಕೆ ಬಾಗಿಲಿನ ಮೇಲೆ ಹಾಕಬಾರದು ಗೊತ್ತಾ?

ಗಡಿಯಾರವನ್ನ ಜನರು ಸಮಯ ನೋಡೋಕೆ ಮಾತ್ರವಲ್ಲ ಮನೆ ಸೌಂದರ್ಯ ಹೆಚ್ಚಿಸೋಕೆ ಇದನ್ನು ಗೋಡೆಗೆ ನೇತು ಹಾಕ್ತಾರೆ. ಇಂಟಿರಿಯರ್ ಡಿಸೈನ್ ಚೆನ್ನಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಸುಂದರವಾಗಿ ಕಾಣುವ ಜಾಗವನ್ನು ಗಡಿಯಾರ ಅಲಂಕರಿಸುತ್ತೇ ವಿನಃ ಸೂಕ್ತ ಜಾಗವನ್ನಲ್ಲ. ಗಡಿಯಾರ ಗಂಟೆ ತೋರಿಸುವ ಜೊತೆಗೆ ಜೀವನದ ದಾರಿ ತೋರಿಸುತ್ತೆ. ಯಾವ ದಿಕ್ಕಿನಲ್ಲಿ ಗಡಿಯಾರ ಇಟ್ರೆ ಸೂಕ್ತ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಗಡಿಯಾರವನ್ನು ಇಡಬಹುದು. ಹಾಗೆ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿಯಲ್ಲಿ, ಈ ದಿಕ್ಕುಗಳು ಸಮೃದ್ಧಿ, ಬೆಳವಣಿಗೆ ಮತ್ತು ಸಕಾರಾತ್ಮಕ ಶಕ್ತಿ ಜೊತೆ ಸಂಬಂಧ ಹೊಂದಿವೆ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಯಶಸ್ಸಿಗೆ ಕಾರಣವಾಗುತ್ತದೆ
ಗಡಿಯಾರವನ್ನು ಎಂದಿಗೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬಾರದು. ಈ ದಿಕ್ಕಿನಲ್ಲಿ ಗಡಿಯಾರ ಇಟ್ರೆ ನಿಮ್ಮ ಕೆಲ್ಸ ವಿಳಂಬವಾಗುತ್ತದೆ. ಪದೇ ಪದೇ ನಿಮ್ಮ ಕೆಲ್ಸದಲ್ಲಿ ಅಡೆತಡೆ ಬರಲು ಇದು ಕಾರಣವಾಗುತ್ತದೆ. ಇದು ಮನೆಯ ವಾತಾವರಣವನ್ನು ಹದಗೆಡಿಸುತ್ತದೆ. ಮನೆ, ಮನಸ್ಸು ಎರಡೂ ಭಾರವಾಗಿರುತ್ತದೆ. ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಗಡಿಯಾರ ಇಡಬೇಡಿ. ಈಗಾಗಲೇ ಈ ದಿಕ್ಕಿನಲ್ಲಿ ಗಡಿಯಾರ ಇದ್ದಲ್ಲಿ ಅದನ್ನು ಇಂದೇ ಬದಲಿಸಿ. ಗಡಿಯಾರವನ್ನು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಇಡುವುದು ಉತ್ತಮ.
ನೀವು ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಅಥವಾ ಬಿಳಿ ಗೋಲಾಕಾರದ ಗಡಿಯಾರವನ್ನು ಇಡಬೇಕು. ಪೂರ್ವ ದಿಕ್ಕಿನಲ್ಲಿ ರೌಂಡ್ ಗಡಿಯಾರ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಿರುತ್ತದೆ. ನೀವು ಮನೆಯಲ್ಲಿ ಅಷ್ಟಭುಜಾಕೃತಿಯ, ಅಂಡಾಕಾರದ ಅಥವಾ ಲೋಲಕದ ಗಡಿಯಾರವನ್ನು ಸಹ ಇಡಬಹುದು. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.
ಬಾಗಿಲಿಗೆ ಗಡಿಯಾರ ನೇತು ಹಾಕಬೇಡಿ
ಗಡಿಯಾರವನ್ನು ಮುಖ್ಯ ಬಾಗಿಲಿನ ಮೇಲೆ ಅಥವಾ ಯಾವುದೇ ರೂಮಿನ ಬಾಗಿಲಿಗೆ ಎಂದಿಗೂ ನೇತುಹಾಕಬಾರದು. ಗಡಿಯಾರವನ್ನು ನೇರವಾಗಿ ಹಾಸಿಗೆಯ ಮುಂದೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ. ಹಾಗೆ ಮಾಡುವುದರಿಂದ ಕುಟುಂಬ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಅನೇಕ ಬಾರಿ ಗಡಿಯಾರ ನಿಂತ್ರೂ ಅದು ಗೋಡೆ ಮೇಲೆ ನೇತಾಡುತ್ತಿರುತ್ತದೆ. ನಿಂತ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಇದು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಹಾಳಾದ, ನಿಂತ ಗಡಿಯಾರವಿದ್ರೆ ಮೊದಲು ಅದನ್ನು ದುರಸ್ತಿಗೊಳಿಸಿ.

ನೋಡಿರಿ

