ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹೆಚ್ಚಾಯ್ತಾ ಹೆಣ್ಣಿನ ಶೋಷಣೆ? – ನಿರ್ದೇಶಕರಿಗೆ ವೀಕ್ಷಕರಿಂದ ಸಿಕ್ಕಾಪಟ್ಟೆ ಕ್ಲಾಸ್

ಲಕ್ಷ್ಮೀ ನಿವಾಸ ಸೀರಿಯಲ್ ನೋಡಿ ಮಹಿಳಾ ವೀಕ್ಷಕರ ಪಿತ್ತ ನೆತ್ತಿಗೇರಿದೆ. ಇಲ್ಲಿ ಸೊಸೆಯನ್ನ ನಿರ್ಲಕ್ಷ್ಯ ಮಾಡುವ ರೀತಿ, ಜೊತೆಗೆ ಹೆಣ್ಣಿನ ಶೋಷಣೆ ವೀಕ್ಷಕರಿಗೆ ಹಿಡಿಸುತ್ತಿಲ್ಲ.
ಇದನ್ನೂ ಓದಿ: ಗಿಲ್ಲಿ ನಟ ಕೊಟ್ಟಿದ್ದು ಒಂದು ಮುತ್ತು – ಗಿಲ್ಲಿಗೆ ಕಾವ್ಯ ಕೊಟ್ಟಿದ್ದು ಮೂರು ಮುತ್ತು..!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಿನ್ನುಮರಿಯದ್ದು ಒಂಥರಾ ಗೋಳು. ಕೊನೆಗೂ ಈಗ ಶ್ರೀಮಂತನ ಪತ್ನಿ ಚಿನ್ನುಮರಿ, ಮನೆಗೆಲಸದವಳಾಗಿ ವಿಶ್ವನ ಮನೆಯಲ್ಲಿ ಇದ್ದಾಳೆ. ಇದು ಕೂಡಾ ಒಂದು ರೀತಿ ಶೋಷಣೆ ರೀತಿಯೇ ಇದೆ. ಇದೀಗ ಸಿದ್ದೇಗೌಡರ ಮನೆಯಲ್ಲಿ ಇನ್ನೊಂದು ರೀತಿ ಟಾರ್ಚರ್. ಇಲ್ಲಿ ಸಿದ್ದೇಗೌಡರ ಪತ್ನಿ ಭಾವನಾ ನಿತ್ಯವೂ ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದಾಳೆ. ಭಾವನಾಳನ್ನು ನೋಡಿದ್ರೆ ಸಾಕು ಅತ್ತೆ, ಮಾವ, ಅಜ್ಜಿ ಎಲ್ಲರೂ ಬಾಯಿಗೆ ಬಂದಂಗೆ ಬೈಯ್ಯುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದ್ಯಾಕೋ ಅತಿಯಾಗಿ ಹೋಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಭಾವನಾ ಗೋಳು ಹೊಯ್ದು ಕೊಳ್ಳುವುದೇ ಈ ಸೀರಿಯಲ್ ಕಥೆಯಾಗಿ ಹೋಗಿದೆ.
ಮೊದಲಿನಿಂದಲೂ ಭಾವನಾ ಕಂಡರೇನೇ ಸಿದ್ದೇಗೌಡನ ಅತ್ತಿಗೆ ನೀಲುಗೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿಯಂತೂ ಮನೆಯಲ್ಲಿ ಈಕೆಯದ್ದೇ ಮೇಲುಗೈ. ಇವಳ ಮಾತು ಕೇಳುತ್ತಾ ಬಂದಿರುವ ಅದೇ ಮನೆಯವರು ಸ್ವಲ್ಪವೂ ವಿವೇಚನೆಯಿಲ್ಲದೆ ಆಕೆ ಹೇಳಿದ ಮಾತು ಕೇಳುತ್ತಾ ಭಾವನಾಳಿಗೆ ವಿವಿಧ ರೀತಿ ಟಾರ್ಚರ್ ಮಾಡುತ್ತಿದ್ದಾರೆ. ಸಿದ್ದೇಗೌಡನ ಅಪ್ಪ ರಾಜಕಾರಣಿ. ದೇವರ ಮೇಲೆ ನಂಬಿಕೆ ಜಾಸ್ತಿ. ಹಿತ್ತಾಳೆ ಕಿವಿ ಬೇರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೊದಲನೇ ಸೊಸೆ ಮಾವನ ಕಿವಿಗೆ ಇಲ್ಲಸಲ್ಲದ್ದನ್ನು ಊದಿದ್ದೇ ಊದಿದ್ದು. ಅದನ್ನ ನಂಬಿ ಈಗ ಭಾವನಾ-ಸಿದ್ದೇಗೌಡರನ್ನು ದೂರ ಮಾಡಿ, ಭಾವನಾಳನ್ನು ಮನೆಯಿಂದ ಆಚೆ ಹಾಕುವ ಪ್ರಯತ್ನ ನಡೆಯುತ್ತಲೇ ಇದೆ. ಇಷ್ಟು ದಿನ ಭಾವನಾಗೆ ಒಂದು ವ್ರತ ಮಾಡುವಂತೆ ಹೇಳಲಾಗಿತ್ತು. ಅವಳ ಕಷ್ಟ ನೋಡಿದ ಸಿದ್ದೇಗೌಡರು ಭಾವನಾಳ ಜೊತೆಯಲ್ಲಿದ್ದುಕೊಂಡೇ ಹೆಲ್ಪ್ ಮಾಡಿದರು. ಈಗ ಮನೆಯಲ್ಲಿ ಪೂಜೆ ಇಟ್ಟುಕೊಳ್ಳಲಾಗಿದೆ. ಆದರೆ ಸಿದ್ದೇಗೌಡ ಬಿಟ್ಟು ಎಲ್ಲರೂ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಭಾವನಾ ಅಕ್ಷತೆ ತಟ್ಟೆಯ ಸಮೇತ ನೆಲದ ಮೇಲೆ ಬೀಳುತ್ತಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಅತ್ತೆ, ಮಾವ, ಅಜ್ಜಿ ಎಲ್ಲರೂ ಭಾವನಾಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ಸರತಿ ಸಾಲಿನಲ್ಲಿ ಬಯ್ಯುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ವೀಕ್ಷಕರ ಪಿತ್ತ ನೆತ್ತಿಗೇರಿದ್ದು, ನಿರ್ದೇಶಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೀರಿಯಲ್‌ನಲ್ಲಿ ಇಷ್ಟೊಂದು ಹೀನಾಯವಾಗಿ ಹೆಣ್ಣಿಗೆ ಬೈಯ್ಯೋದು, ಇಲ್ಲಿ ಅಳುತ್ತಿರುವವರು ನಿತ್ಯವೂ ಅಳುತ್ತಾ ಇರುವುದು, ಇಲ್ಲಿ ಭಾವನಾ ಅಮ್ಮನ ಕಷ್ಟ ಒಂದೆಡೆ, ಸಂತೋಷ್ ಪತ್ನಿಯ ಪರದಾಟ ಮತ್ತೊಂದೆಡೆ, ಚಿನ್ನುಮರಿಯ ಸಂಕಷ್ಟ ಅದೊಂಥರಾ ಟಾರ್ಚರ್. ಒಟ್ನಲ್ಲಿ ಈ ಸೀರಿಯಲ್‌ನಲ್ಲಿ ಹೆಣ್ಣುಮಕ್ಕಳಿಗೆ ನೆಮ್ಮದಿಯಿಲ್ಲ.

ನೋಡಿರಿ

