ಇರುವೆಗೆ ಹೆದರಿ ಮಹಿಳೆ ಆತ್ಮಹ*ತ್ಯೆ! – ಮಹಿಳೆ ಬರೆದ ಪತ್ರದಲ್ಲಿತ್ತು ಶಾಕಿಂಗ್ ವಿಚಾರ!

ಸಾಮಾನ್ಯವಾಗಿ ಮನೆಗಳಲ್ಲಿ ಜಿರಳೆ, ಹಲ್ಲಿ, ಇರುವೆಗಳು ಇರುತ್ತವೆ. ಇದನ್ನ ನೋಡಿ ಹೆದರುವವರು ತುಂಬಾ ಕಡಿಮೆ. ಕೆಲ ಮಕ್ಕಳು, ಯುವತಿಯರು ಇದನ್ನ ಕಂಡು ಭಯಪಡ್ತಾರೆ. ಆದ್ರೆ ಇರುವೆಯನ್ನ ನೋಡಿ ಭಯಪಡುವವರ ಬಗ್ಗೆ ನಾವು ಕೇಳಿಲ್ಲ. ಆದ್ರೀಗ ಇಲ್ಲೊಬ್ಬಳು ಮಹಿಳೆ ಇರುವೆಯ ಭಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ:ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟ ಸಾಮಾನ್ಯ ಜನರು! – ಮಾಳು ಮಾತಿಗೆ ಶಾಕ್ ಆದ ಮನೆಮಂದಿ!
ತೆಲಾಂಗಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಅಮೀನ್‌ಪುರದಲ್ಲಿ ಈ ಘಟನೆ ನಡೆದಿದೆ. ಶ್ರೀಕಾಂತ್ ಮತ್ತು ಮನೀಷಾ (25) ಎಂಬ ದಂಪತಿ ತಮ್ಮ ಮಗಳೊಂದಿಗೆ ಅಮೀನ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಆದರೆ ಮನೀಷಾ ಕೆಲವು ಸಮಯದಿಂದ ಇರುವೆಗಳ ಬಗ್ಗೆ ತೀವ್ರ ಭಯದಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆಯ ಚಿಕಿತ್ಸೆಗಾಗಿ ಮನೀಷಾ ಅವರ ಕುಟುಂಬ ಸದಸ್ಯರು ಅನೇಕ ಆಸ್ಪತ್ರೆಗಳಲ್ಲಿ ತೋರಿಸಿದರು. ಅವರು ಅನೇಕ ಸ್ಥಳಗಳಲ್ಲಿ ಚಿಕಿತ್ಸೆ ಪಡೆದರು. ಕೌನ್ಸೆಲಿಂಗ್ ನೀಡಲಾಯಿತು. ಆದರೆ ಯಾವುದೇ ಫಲಿತಾಂಶ ಬರಲಿಲ್ಲ. ಆದ್ರೆ ಕಳೆದ ಮಂಗಳವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೀಷಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ, ಮಲಗುವ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ ಪತ್ನಿ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ಇರುವೆಗಳ ಭೀತಿಯಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಇರುವೆ ಮೇಲಿನ ಭಯದಿಂದಾಗಿ ತೀವ್ರವಾಗಿ ನೊಂದ ಮನಿಷಾ, ಮಂಗಳವಾರ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್ ಬರೆದಿದ್ದಾರೆ. ಆ ಪತ್ರದಲ್ಲಿ, “ಶ್ರೀ.. ಕ್ಷಮಿಸಿ.. ನಾನು ಈ ಇರುವೆಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ.. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ” ಎಂದು ಬರೆದಿದ್ದಾರೆ. ಎಂದಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಏನಿದು ಮೈರ್ಮೆಕೊಫೋಬಿಯಾ?
ಇರುವೆಗಳ ಬಗ್ಗೆ ವಿವರಿಸಲಾಗದ ಭಯ ಅಥವಾ ದ್ವೇಷ . ಇದು ಒಂದು ರೀತಿಯ ನಿರ್ದಿಷ್ಟ ಭಯ . ಮೈರ್ಮೆಕೊಫೋಬಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಕೀಟಗಳ ಬಗ್ಗೆ ಮತ್ತು ಜೇಡಗಳ ಬಗ್ಗೆ ಹೆಚ್ಚಿನ ಭಯವನ್ನು ಹೊಂದಿರುವುದು ಸಾಮಾನ್ಯವಾಗಿದೆ. ಅಂತಹ ಸಮಸ್ಯೆಯನ್ನ ಎಂಟೊಮೊಫೋಬಿಯಾ (Entomophobia) ಎಂದೂ ಕರೆಯಲಾಗುತ್ತದೆ . ಈ ಭಯವು ಹಲವಾರು ವಿಧಗಳಲ್ಲಿ ಪ್ರಕಟವಾಗಬಹುದು. ಉದಾಹರಣೆಗೆ ಇರುವೆಗಳು ಆ ವ್ಯಕ್ತಿಯ ಆಹಾರವನ್ನ ಕಲುಷಿತಗೊಳಿಸುವ ಭಯ ಅಥವಾ ಹೆಚ್ಚಿನ ಸಂಖ್ಯೆಯ ಇರುವೆಗಳು ಮನೆಯ ಮೇಲೆ ಆಕ್ರಮಣ ಮಾಡುವ ಭಯ. ಹೀಗೆ ಇತ್ಯಾದಿ ಸಮಸ್ಯೆಗಳನ್ನ ಅನುಭವಿಸಬಹುದು.
ಮೈರ್ಮೆಕೊಫೋಬಿಯಾ ಲಕ್ಷಣಗಳು
ಮೈರ್ಮೆಕೊಫೋಬಿಯಾ ಇದ್ದ ಜನರು ಆತಂಕ, ನಿದ್ರಾಹೀನತೆ, ಬೆವರುವುದು, ಹೆಚ್ಚಿದ ಹೃದಯ ಬಡಿತ, ಉಸಿರಾಟದ ತೊಂದರೆ, ಉರುಳುವಿಕೆ, ಗಾಬರಿ, ವಾಕರಿಕೆ, ಒಣ ಬಾಯಿ, ತಲೆತಿರುಗುವಿಕೆ, ತಲೆನೋವು ಮತ್ತು ಮರಗಟ್ಟುವಿಕೆಯಂತಹ ಸಮಸ್ಯೆ ಅನುಭವಿಸಬಹುದು. ಇದಕ್ಕೆ ಚಿಕಿತ್ಸೆ ಸಹ ಇದೆ. ಮೊದಲಿಗೆ ಇರುವೆಗಳ ವಿಡಿಯೋ ತೋರಿಸುವ ಮೂಲಕ ಪ್ರಾರಂಭಿಸಬಹುದು. ನಂತರ ಅಂತಿಮವಾಗಿ ಅವರನ್ನು ನಿಜ ಜೀವನದಲ್ಲಿ ಇರುವೆಗಳ ಬಳಿ ಇರುವಂತೆ ಮಾಡಬಹುದು. ಇರುವೆಗಳು ಮತ್ತು ಕೀಟಗಳ ಭಯವನ್ನು ಕಡಿಮೆ ಮಾಡಲು ಇದು ಹಲವು ಮಾರ್ಗಗಳಲ್ಲಿ ಒಂದಾಗಿರಬಹುದು. ಇದಲ್ಲದೆ, ಇತರ ಚಿಕಿತ್ಸೆಗಳು ಈ ಭಯವನ್ನು ನಿವಾರಿಸುತ್ತದೆ.

ನೋಡಿರಿ

