ತಂದೆ ಸಿನಿಮಾದಲ್ಲಿ ಮಗನ ನಟನೆ -ಅಲ್ಲು ಅರ್ಜುನ್ ಮಗ ಅಯಾನ್ ಪುಷ್ಪ-2 ಸಿನಿಮಾ ಮೂಲಕ ಭರ್ಜರಿ ಎಂಟ್ರಿ

ತಂದೆ ಸಿನಿಮಾದಲ್ಲಿ ಮಗನ ನಟನೆ -ಅಲ್ಲು ಅರ್ಜುನ್ ಮಗ ಅಯಾನ್ ಪುಷ್ಪ-2 ಸಿನಿಮಾ ಮೂಲಕ ಭರ್ಜರಿ ಎಂಟ್ರಿ

ತೆಲುಗಿನಲ್ಲಿ ಚಿತ್ರರಂಗದ ದೊಡ್ಡ ಮನೆತನ ಅಲ್ಲು ಅರ್ಜುನ್ ಅವರದ್ದು. ಇವರ ಕುಟುಂಬದ ಅನೇಕರು ಸಿನಿಮಾ ರಂಗದ ಶ್ರೀಮಂತಿಕೆಯನ್ನು ಎತ್ತಿಹಿಡಿದಿದ್ದಾರೆ. ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್, ತಂದೆ ಅಲ್ಲು ಅರವಿಂದ್, ಹೀಗೆ ಇವರ ಫ್ಯಾಮಿಲಿಯಲ್ಲಿ ಚಿತ್ರರಂಗದ ನಂಟು ಹೊಂದಿದವರೇ ಜಾಸ್ತಿಯಿದ್ದಾರೆ. ಇದೀಗ ಅಲ್ಲು ಅರ್ಜುನ್ ಮಗ ಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ.

ಇದನ್ನೂ ಓದಿ:ಅತ್ಯುತ್ತಮ ನಟ ಪ್ರಶಸ್ತಿ ಮೂಲಕ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಬರೆದ ಅಲ್ಲು ಅರ್ಜುನ್ – ‘ಗಂಗೋತ್ರಿ’ಯಿಂದ ‘ಪುಷ್ಪ’ರಾಜ್ ವರೆಗಿನ ಸಿನಿಪಯಣವೇ ರೋಚಕ

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮುದ್ದಿನ ಮಗ ಚಿತ್ರರಂಗಕ್ಕೆ ಎಂಟ್ರಿಕೊಡಲು ರೆಡಿಯಾಗಿದ್ದಾರೆ. ಅಲ್ಲು ಅರ್ಜುನ್ರ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಹಿರಿಯ ಮತ್ತು ಯಶಸ್ವಿ ನಿರ್ಮಾಪಕ. ಅಲ್ಲು ಅರ್ಜುನ್ ಪುತ್ರಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ, ಸಮಂತಾ ಜೊತೆಗೆ ಸಿನಿಮಾದಲ್ಲಿ ನಟಿಸಿದ್ದಾರೆ ಕೂಡ. ಈಗ ಅಲ್ಲು ಅರ್ಜುನ್ ಪುತ್ರ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ಅಲ್ಲು ಅರ್ಜುನ್ರ ಪುತ್ರ ಅಲ್ಲು ಅಯಾನ್ ಪುಷ್ಪ 2 ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ‘ಪುಷ್ಪ 2’ ಸಿನಿಮಾದಲ್ಲಿ ಪುಷ್ಪನ ಮಗನ ಪಾತ್ರದಲ್ಲಿ ಅಲ್ಲು ಅಯಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಬರ್ಲಿನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ಅಲ್ಲು ಅರ್ಜುನ್, ‘ಪುಷ್ಪ 3’ ಬರಲಿರುವ ಬಗ್ಗೆ ಮಾತನಾಡಿದ್ದರು. ಈಗ ‘ಪುಷ್ಪ 2’ನಲ್ಲಿ ಅಲ್ಲು ಅಯಾನ್ ಪಾತ್ರವನ್ನು ಇಂಟ್ರೊಡ್ಯೂಸ್ ಮಾಡಿಸಿದ್ದೇ ಆದಲ್ಲಿ, ‘ಪುಷ್ಪ 3’ ಸಿನಿಮಾನಲ್ಲಿ ಸಹಜವಾಗಿಯೇ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಒಂದೊಮ್ಮೆ ‘ಪುಷ್ಪ’ ಸಿನಿಮಾ ಸರಣಿ ಮುಂದುವರೆದಲ್ಲಿ ಅಲ್ಲು ಅಯಾನ್ ನಾಯಕನಾಗಿಯೂ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರು. ಅಲ್ಲು ಅರ್ಹಾ ‘ಅಂಜಲಿ-ಅಂಜಲಿ’ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಮಂತಾ ನಟಿಸಿರುವ ‘ಶಾಕುಂತಲಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಇದೀಗ ಅಲ್ಲು ಅಯಾನ್ ಚಿತ್ರರಂಗಕ್ಕೆ ಬರಲು ಸಜ್ಜಾಗುತ್ತಿದ್ದಾರೆ. ಅಲ್ಲು ಅರ್ಜುನ್ ಪ್ರಸ್ತುತ ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

Sulekha