ಮನೆ ಕ್ಲೀನ್ ಮಾಡುವಾಗ ಸಿಕ್ತು ಅಪ್ಪನ ಪಾಸ್‌ಬುಕ್ – ಕೋಟ್ಯಾಧಿಪತಿಯಾದ ಮಗ..!

ಮನೆ ಕ್ಲೀನ್ ಮಾಡುವಾಗ ಸಿಕ್ತು ಅಪ್ಪನ ಪಾಸ್‌ಬುಕ್ – ಕೋಟ್ಯಾಧಿಪತಿಯಾದ ಮಗ..!

ಮನೆ ಸ್ವಚ್ಛಗೊಳಿಸುವಾಗ ಹಳೇ ವಸ್ತುಗಳು ಸಿಗುವುದು ಸಾಮಾನ್ಯ. ಆ ಹಳೇ ವಸ್ತುಗಳು ಹಿರಿಯರ ನೆನಪುಗಳನ್ನು ಕಟ್ಟಿಕೊಡುತ್ತವೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಮನೆ ಸ್ವಚ್ಛಗೊಳಿಸಿದ್ದಾನೆ. ಇದರಲ್ಲಿ ತಂದೆಯ ಕೆಲ ವಸ್ತುಗಳು ಸಿಕ್ಕಿವೆ. ಇದನ್ನು ಕೂಡಾ ಜೋಪಾನವಾಗಿ ಇಡುತ್ತಿದ್ದಾಗ ಅದೊಂದು ವಸ್ತು ಕಣ್ಣಿಗೆ ಬಿದ್ದಿದೆ. ತಂದೆ ಬಿಟ್ಟು ಹೋದ ಆ ವಸ್ತು ಮಗನನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ.

ಇದನ್ನೂ ಓದಿ: ಮಗಳನ್ನು ಹಿಂಬಾಲಿಸಿದ್ದಕ್ಕೆ ಪೊಲೀಸರಿಗೆ ದೂರು ಕೊಟ್ಟ ತಂದೆ -ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಹುಡುಗಿ ಮನೆಯೊಳಗೆ ಹಾವು ಬಿಟ್ಟ ಪಾಪಿ..!

ಚಿಲಿಯ ನಿವಾಸಿ ಎಕ್ವಿಲ್ ಹಿನೋಜೋಸಾ ಅವರು ಮನೆಯನ್ನು ಕ್ಲೀನ್ ಮಾಡುತ್ತಿದ್ದರು. ಇದೇ ವೇಳೆ ಅವರ ಕಣ್ಣಿಗೆ ಅಪ್ಪನ ಪೆಟ್ಟಿಗೆ ಕಂಡಿದೆ. ಇದನ್ನು ಓಪನ್ ಮಾಡಿದ್ದಾರೆ. ಆಗ ಚಿಕ್ಕ ಪುಸ್ತಕ ಸಿಕ್ಕಿದೆ. ಏನಿರಬಹುದು ಎಂದು ಆ ಪುಸ್ತಕವನ್ನು ತೆರೆದು ನೋಡಿದ್ದಾರೆ. ಅದು ತನ್ನ ತಂದೆಯ 60 ವರ್ಷದ ಬ್ಯಾಂಕ್ ಪಾಸ್ ಬುಕ್ ಎಂಬುದು ಅರಿವಾಗಿದೆ. ಈ ಬ್ಯಾಂಕ್ ಖಾತೆಯ ಬಗ್ಗೆ ಅವರ ತಂದೆಯನ್ನು ಹೊರತುಪಡಿಸಿ ಯಾರಿಗೂ ತಿಳಿದಿರಲಿಲ್ಲ. ಆದರೆ ದಶಕದ ಹಿಂದೆ ಅವರ ತಂದೆಯೂ ತೀರಿಕೊಂಡಿದ್ದರು. ಎಕ್ವಿಲ್ ಹಿನೋಜೋಸಾ ಅವರ ತಂದೆ 1960-70ರಲ್ಲಿ ಮನೆ ಖರೀದಿಸಲು ಸುಮಾರು 1.40 ಲಕ್ಷ ಪೆಸೊಗಳನ್ನು (ಚಿಲಿ ಕರೆನ್ಸಿ) ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಅದರ ಅಂದಿನ ಬೆಲೆ ಡಾಲರ್‌ಗಳಲ್ಲಿ 163 ಮತ್ತು ಭಾರತೀಯ ರೂಪಾಯಿಗಳಲ್ಲಿ 13,480 ಆಗಿತ್ತು. ಆದರೆ ಆ ಕಾಲಕ್ಕೆ ಹೋಲಿಸಿದರೆ,ದೊಡ್ಡ ಮೊತ್ತವೇ ಆಗಿತ್ತು. ಅಂದರೆ, ಒಂದು ವೇಳೆ ಬ್ಯಾಂಕ್ ಹಣ ನೀಡಲು ವಿಫಲವಾದರೆ ಆ ಹಣವನ್ನು ಸರ್ಕಾರ ಪಾವತಿಸುತ್ತದೆ. ಆದರೆ ಈಗಿನ ಸರ್ಕಾರದ ಬಳಿ ಹಣ ಕೇಳಿದಾಗ ಸರ್ಕಾರ ಹಣ ನೀಡಲು ನಿರಾಕರಿಸಿದೆ. ಹಿನೋಜೋಸಾ ಕೊನೆಗೆ ತನ್ನ ತಂದೆಯ ಹಣವನ್ನು ಕಾನೂನು ಹೋರಾಟ ಮಾಡಿ ತೆಗೆದುಕೊಳ್ಳದ ಹೊರೆತು ಬೇರೆ ಆಯ್ಕೆ ಇರಲಿಲ್ಲ. ಹಾಗಾಗಿ ಸರ್ಕಾರದ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಆ ಹಣ ತನ್ನ ತಂದೆಯ ದುಡಿಮೆಯ ಹಣವಾಗಿದ್ದು, ಸರ್ಕಾರ ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಲಯವು 1 ಬಿಲಿಯನ್ ಪೆಸೊಗಳನ್ನು ಅಂದರೆ 1.2 ಮಿಲಿಯನ್ ಡಾಲರ್ಗಳನ್ನು(ಸುಮಾರು 10 ಕೋಟಿ ರೂ) ಬಡ್ಡಿ ಮತ್ತು ತುಟ್ಟಿ ಭತ್ಯೆಯೊಂದಿಗೆ ಹಿನೋಜೋಸಾರಿಗೆ ಹಿಂದಿರುಗಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಆದರೆ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದೆ ಎನ್ನಲಾಗಿದೆ. ಕೆಲವರು ವರದಿಗಳ ಪ್ರಕಾರ 1 ಬಿಲಿಯನ್ ಪೆಸೋವನ್ನು ನೀಡುವಂತೆ ಸುಪ್ರಿಂಕೋರ್ಟ್ ಆದೇಶಿಸಿದೆ ಎನ್ನಲಾಗಿದೆ. ಆದರೆ ತೀರ್ಪು ಹಿನೋಜೋಸಾ ಪರ ಬಂದರೆ ಆತ 10 ಕೋಟಿ ಹಣ ಪಡೆಯಲಿದ್ದಾನೆ.

suddiyaana