ಮಗನೇ ಇಲ್ಲ ಅಂದ್ಮೇಲೆ ಕಾರು ಯಾಕೆ? – 6 ಕೋಟಿ ಮೌಲ್ಯದ BMW ಕಾರನ್ನ ಸಮಾಧಿ ಮಾಡಿದ ತಂದೆ!

ಮಗನೇ ಇಲ್ಲ ಅಂದ್ಮೇಲೆ ಕಾರು ಯಾಕೆ?  –  6 ಕೋಟಿ ಮೌಲ್ಯದ BMW ಕಾರನ್ನ ಸಮಾಧಿ ಮಾಡಿದ ತಂದೆ!

ತಂದೆ ತಾಯಿಗೆ ಮಕ್ಕಳಂದ್ರೆ ಪ್ರಾಣ. ಅವರ ಖುಷಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ದರಿರುತ್ತಾರೆ. ಆದ್ರೆ ಸಣ್ಣ ವಯಸ್ಸಿನ ಮಕ್ಕಳನ್ನು ಕಳೆದುಕೊಳ್ಳುವ ತಂದೆ, ತಾಯಿ ನೋವು ಯಾರಿಗೂ ಬೇಡ. ಇದೀಗ ಇಲ್ಲೊಂದು ತಂದೆ ಮಗನನ್ನು ಕಳೆದುಕೊಂಡಿದ್ದಾರೆ. ಮಗನ ಸಾವಿನ ಬೆನ್ನಲ್ಲೇ ಆತನ ದುಬಾರಿ ಕಾರನ್ನು ಸಮಾಧಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಮತ್ತೊಂದು ಬಸ್​ ಬೆಂಕಿಗೆ ಆಹುತಿ! – ಹೊಸ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ?

ಈ ಘಟನೆ ಮಾಸ್ಕೋದಲ್ಲಿ ನಡೆದಿದೆ. ತಂದೆ ಮಗನ ಹುಟ್ಟುಹಬ್ಬಕ್ಕೆ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ರು. ದುರಂತ ಅಂದ್ರೆ ಕಾರು ಗಿಫ್ಟ್‌ ಕೊಟ್ಟ ಕೆಲವೇ ದಿನಗಳಲ್ಲಿ ಆ ವ್ಯಕ್ತಿ ಮಗನನ್ನು ಕಳೆದುಕೊಂಡಿದ್ದಾರೆ. ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಆತನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ ಕಾರನ್ನು ಸಮಾಧಿ ಮಾಡಿದ್ದಾರೆ.

ಮಗನನ್ನು ಕಳೆದುಕೊಂಡ ತಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ರು. ಆ ಕಾರು ನೋಡಿದ ಕೂಡಲೇ ಪುತ್ರನ ನೆನಪಾಗುತ್ತಿತ್ತು. ಇದ್ರಿಂದಾಗಿ ಮತ್ತಷ್ಟು ನೋವು ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ಸಮಾಧಿ ಮಾಡಿದ್ದಾರೆ. ಈ ಭಾವನಾತ್ಮಕ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯ ಈ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ.

ಆ ಕಾರನ್ನು ಮಾರಿ ಬಂದ ಹಣವನ್ನು ಯಾವುದಾದರು ದತ್ತಿ ಸಂಸ್ಥೆಗಳಿಗೆ ನೀಡಬಹುದಿತ್ತು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಕಾರನ್ನು ಮಾರಾಟ ಮಾಡಿ ಆ ಹಣವನ್ನು ನಿರ್ಗತಿಕರಿಗೆ ದಾನ ಮಾಡಬಹುದಿತ್ತು ಎಂದು ಇನ್ನೂ ಕೆಲವರು ಕಾಮೆಂಟ್‌ ಮಾಡಿದ್ದಾರೆ.  ಮತ್ತೊಂದಷ್ಟು ಮಂದಿ ಈ ನಿರ್ಧಾರ ಸರಿಯೋ ತಪ್ಪೋ ಎಂಬುದನ್ನು ಚರ್ಚಿಸಬಹುದು. ಆದರೆ, ದುಃಖ ಆ ತಂದೆಗೆ ಮಾತ್ರ ಗೊತ್ತು. ಅದನ್ನು ಅಳೆಯಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆ ವ್ಯಕ್ತಿಯ ನಡೆ ತಪ್ಪಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

Shwetha M