ಶವಗಳ ನಡುವೆ ಮಿಡಿಯುತ್ತಿತ್ತು ಹೃದಯ.. ತಂದೆಯ ನಂಬಿಕೆ ಹುಸಿಯಾಗಲಿಲ್ಲ – ಪುತ್ರನನ್ನ ಕಾಪಾಡಿದ ಅಪ್ಪ  
ಒಡಿಶಾ ರೈಲು ದುರಂತದಲ್ಲಿ ಪವಾಡದಂತೆ ಬದುಕಿದ ಯುವಕ

ಶವಗಳ ನಡುವೆ ಮಿಡಿಯುತ್ತಿತ್ತು ಹೃದಯ.. ತಂದೆಯ ನಂಬಿಕೆ ಹುಸಿಯಾಗಲಿಲ್ಲ – ಪುತ್ರನನ್ನ ಕಾಪಾಡಿದ ಅಪ್ಪ  ಒಡಿಶಾ ರೈಲು ದುರಂತದಲ್ಲಿ ಪವಾಡದಂತೆ ಬದುಕಿದ ಯುವಕ

ಒಡಿಶಾದಲ್ಲಿ ನಡೆದ ರೈಲು ದುರಂತ ಸಾವಿರಾರು ಕುಟುಂಬಗಳ ನೆಮ್ಮದಿಯನ್ನೇ ಕದಡಿದೆ. ಅದೇ ಭೀಕರ ದುರಂತದಲ್ಲಿ ಪವಾಡವೊಂದು ನಡೆದುಹೋಗಿದೆ. ಮಗನ ಧ್ವನಿ ಕೇಳಿ ಓಡೋಡಿ ಬಂದ ತಂದೆಯ ನಿರೀಕ್ಷೆ ಕೊನೆಗೂ ಹುಸಿಯಾಗಲಿಲ್ಲ. ಅದೃಷ್ಟದಂತೆ ಪುತ್ರ ಬದುಕುಳಿದಿದ್ದಾನೆ.

ಹೌದು. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತವು (Train Accident) ಹಲವು ಘಟನೆಗಳಿಗೆ (Incident) ಸಾಕ್ಷಿಯಾಗಿದೆ. ಹೆಣಗಳ ರಾಶಿ, ಸಂಬಂಧಿಕರ ಆಕ್ರಂದನ, ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವು, ದುಃಖ ಹೃದಯ ಹಿಂಡುತ್ತದೆ. ಕಳೆದುಕೊಂಡವರಿಗಾಗಿ ಹುಡುಕಲು ಪ್ರಯತ್ನಿಸುತ್ತಿರುವ ಜನರು. ಮೃತದೇಹಗಳ ರಾಶಿಯಲ್ಲಿ ಮಕ್ಕಳು, ಸಹೋದರರು ಸ್ನೇಹಿತರಿಗಾಗಿ ಹುಡುಕಾಡುತ್ತಿರುವವರ ಮಧ್ಯೆ ತನ್ನ ಕರುಳ ಕುಡಿ ಬದುಕಿದೆ ಎಂದು ಹುಡುಕಿದ ತಂದೆಯ ಆಶಯ ಬತ್ತಿಲ್ಲ. ಮಗನನ್ನು ಜೀವಂತ ಕಂಡು ಕಣ್ಣೀರಾದ ತಂದೆಯ ಕಥೆ ಇದು. ತನ್ನ ಮಗ ಸತ್ತಿರಬಹುದು ಎಂದು ಎಲ್ಲರೂ ಹೇಳಿದರೂ ಸಹ ಆ ತಂದೆ ಮಾತ್ರ ತನ್ನ ಮಗ ಸತ್ತಿಲ್ಲ, ಜೀವಂತವಾಗಿದ್ದಾನೆ ಎಂಬ ದೃಢ ನಂಬಿಕೆ ಹೊಂದಿದ್ದ. ಕೊನೆಗೂ ಆ ತಂದೆಯ ನಂಬಿಕೆ ಹುಸಿಯಾಗಿಲ್ಲ. ಮಗ ಜೀವಂತವಾಗಿದ್ದಾನೆ. ಇಂಥಹದ್ದೊಂದು ಕರುಣಾಜನಕ ಕಥೆ ಭೀಕರ ರೈಲು ದುರಂತದಲ್ಲಿ ಕಂಡು ಬಂದಿದೆ. ಬಾಲಸೋರ್‌ನ ಶವಾಗಾರದಲ್ಲಿ ತಂದೆಯೊಬ್ಬರು ಮಗನಿಗಾಗಿ ಹುಡುಕಿದಾಗ, ಮಗ ಜೀವಂತವೇ ಇದ್ದ ಘಟನೆ ನಡೆದಿದೆ. ತಂದೆಯ ನಂಬಿಕೆಯೇ ಮಗನನ್ನು ಬದುಕಿಸಿದಂತಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಸ್ವಜಿತ್ ಮಲಿಕ್ 24 ವರ್ಷದ ಯುವಕನಿಗಾಗಿ, ತಂದೆ ಹೆಳರಾಮ್ ಮಲಿಕ್ ಹುಡುಕಾಟ ನಡೆಸಿದ್ದರು. ಆಗ ಅಲ್ಲಿದ್ದವರು ಅಪಘಾತದಲ್ಲಿ ನಿಮ್ಮ ಮಗ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಿದ್ದರು.

ಇದನ್ನೂ ಓದಿ : ಅಮೆರಿಕದಲ್ಲಿ ವಿಮಾನ ಅಪಘಾತದಲ್ಲಿ ನಾಲ್ವರು ಸಾವು

ಆದರೆ ಇದನ್ನು ತಂದೆ ಹೆಳರಾಮ್ ಮಲಿಕ್ ಒಪ್ಪಿರಲಿಲ್ಲ. ತನ್ನ ಮಗ ಜೀವಂತವಾಗಿದ್ದಾನೆ. ಆತ ಸತ್ತಿಲ್ಲ ಎಂದು ಬಲವಾಗಿ ನಂಬಿದ್ದರು. ಹೀಗಾಗಿ ತಂದೆ ತನ್ನ ಮಗ ಬಿಸ್ವಜಿತ್ ನನ್ನು ಹುಡುಕಲು ಕೋಲ್ಕತ್ತಾದಿಂದ ಬಾಲಸೋರ್ ಗೆ 230 ಕಿ.ಮೀ. ಪ್ರಯಾಣ ಮಾಡಿ ಬಂದಿದ್ದರು. ಅಲ್ಲಿ ಮಗನನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಮಗ ಸತ್ತಿದ್ದಾನೆಂದು ಶವಾಗಾರದಲ್ಲಿ ಇರಿಸಲಾಗಿತ್ತು. ಆದರೆ ತಂದೆ ಬಂದು ನೋಡಿದಾಗ ಮಗ ಬದುಕಿರುವುದು ಗೊತ್ತಾಗಿದೆ. ಅಲ್ಲಿಂದ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಕೋಲ್ಕತ್ತಾಗೆ ಕರೆ ತರಲಾಗಿತ್ತು.

ಹೆಳರಾಮ್ ಮಲಿಕ್ ತಮ್ಮ ಮಗನ ಸಾವಿನ ಸುದ್ದಿಯನ್ನು ನಂಬಲಿಲ್ಲ. ಹೀಗಾಗಿಯೇ ಬದುಕಿದ್ದ ಮಗನನ್ನು ಶವಾಗಾರದಿಂದ ವಾಪಸ್ ತರಲಾಗಿದೆ. ಚಿಕಿತ್ಸೆ ಕೊಡಲಾಗಿದೆ. ಅಪಘಾತದಲ್ಲಿ ಬಿಸ್ವಜಿತ್ ಗಾಯಗೊಂಡ ನಂತರ ಎಸ್ ಎಸ್ ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಘಟಕದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದೀಗ ಅವರಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಗಂಭೀರವಾಗಿ ಗಾಯಗೊಂಡಿರುವ ಬಿಸ್ವಜಿತ್ ಆರೋಗ್ಯ ಸದ್ಯ ಸ್ಥಿರವಾಗಿದ್ದಾರೆ.

ಜೂನ್ 2ರಂದು ಬಿಸ್ವಜೀತ್‌ನನ್ನು ಶಾಲಿಮಾರ್ ನಿಲ್ದಾಣದಲ್ಲಿ ಇಳಿಸಿ ತಂದೆ ಹೆಳರಾಮ್ ಹೌರಾದತ್ತ ತೆರಳುವಾಗ, ರೈಲು ಅಪಘಾತದ ಸುದ್ದಿ ಗೊತ್ತಾಗಿತ್ತು. ಸುದ್ದಿ ತಿಳಿದ ಕೂಡಲೇ ಹೆಳರಾಮ್ ಅದೇ ರಾತ್ರಿ ಬಾಲಸೋರ್‌ಗೆ ಹೊರಟಿದ್ದರು. ಸ್ಥಳೀಯ ಆಂಬ್ಯುಲೆನ್ಸ್ ಡ್ರೈವರ್ ಪಲಾಶ್ ಪಂಡಿತ್ ಮತ್ತು ಅವರ ಸೋದರಮಾವ ದೀಪಕ್ ದಾಸ್ ಅವರೊಂದಿಗೆ ರಾತ್ರಿ 230 ಕಿ.ಮೀ ಪ್ರಯಾಣ ಮಾಡಿದ್ದರು. ಆದರೆ ಬಾಲಸೋರ್ ತಲುಪಿದ ನಂತರ ಅವರಿಗೆ ಎಲ್ಲಾ ಆಸ್ಪತ್ರೆ ಹುಡುಕಿದರೂ ಮಗ ಸಿಕ್ಕಿರಲಿಲ್ಲ. ಅಲ್ಲಿದ್ದವರನ್ನು ಹೆಲರಾಮ್ ಕೇಳಿದ್ದರು. ಮಗ ಆಸ್ಪತ್ರೆಯಲ್ಲಿ ಸಿಗದಾದಾಗ ಒಬ್ಬರು ಅವರನ್ನು ಶವಾಗಾರಕ್ಕೆ ಕರೆದೊಯ್ದಿದ್ದರು. ಅಲ್ಲಿ ಶವಗಳ ರಾಶಿಯೇ ಇತ್ತು. ಸ್ವಲ್ಪ ಹೊತ್ತಿನ ನಂತರ ಶವದಲ್ಲಿದ್ದ ಯಾರೋ ಒಬ್ಬರ ಕೈ ಅಲುಗಾಡಿದ್ದು ಕಂಡಿತು. ನೋಡಿದಾಗ ಮಗ ಬಿಸ್ವಜಿತ್ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ. ಕೂಡಲೇ ಬಾಲಸೋರ್ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಲಾಯಿತು ಎಂದಿದ್ದಾರೆ.

suddiyaana