ಮಗಳು ಅಂಗಡಿಯಲ್ಲಿ ಕ್ಯಾಂಡಿ ಕದ್ದಿದ್ದಕ್ಕೆ ಹೊಡೆದು ಕೊಂದ ಪಾಪಿ ತಂದೆ!

ಮಗಳು ಅಂಗಡಿಯಲ್ಲಿ ಕ್ಯಾಂಡಿ ಕದ್ದಿದ್ದಕ್ಕೆ ಹೊಡೆದು ಕೊಂದ ಪಾಪಿ ತಂದೆ!

ಮನೆಯಲ್ಲಿ ಮಕ್ಕಳಿದ್ರೆ ಸಣ್ಣ ಪುಟ್ಟ ತಪ್ಪು ಮಾಡೋದು ಸಹಜ. ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಬೈದು ಬುದ್ದಿವಾದ ಹೇಳುತ್ತಾರೆ. ಆದ್ರೆ ಇಲ್ಲೊಂದು ಕಡೆ ಮಗಳು ಅಂಗಡಿಯಲ್ಲಿ ಕ್ಯಾಂಡಿ ಕದ್ದಿದ್ದಾಳೆ ಎಂದು ತಂದೆ ಆಕೆಯನ್ನು ಹೊಡೆದು ಕೊಂದಿದ್ದಾನೆ.

ಇದನ್ನೂ ಓದಿ: ಬಲಗೈ ಬದಲು ಬಾಲಕನ ಎಡಗೈ ಆಪರೇಷನ್‌! – ಅಯ್ಯೋ.. ವೈದ್ಯರ ಎಡವಟ್ಟಿಗೆ ಬೆರಳೇ ಕಟ್!‌

ಈ ಘಟನೆ ಉತ್ತರ ಪ್ರದೇಶದ ರತನ್‌ಪುರದ ನರೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಪ್ಪು ಶರ್ಮಾ (12) ಕೊಲೆಯಾದ ಬಾಲಕಿ. ಪುಷ್ಪೇಂದ್ರ ಕೊಲೆ ಆರೋಪಿ.

ಏನಿದು ಘಟನೆ?

ಪೊಲೀಸರ ಮಾಹಿತಿ ಪ್ರಕಾರ, ಪುಷ್ಪೇಂದ್ರ ಮನೆ ಬಳಿಯೊಂದು ಅಂಗಡಿಯಿದೆ. ಈ ಅಂಗಡಿಯ ಮಾಲೀಕರು ನಿನ್ನ ಮಗಳು ನಮ್ಮ ಅಂಗಡಿಯಲ್ಲಿ ಕ್ಯಾಂಡಿ ಕದ್ದಿದ್ದಾಳೆಂದು ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಪುಷ್ಪೇಂದ್ರ ಮನೆಗೆ ಬರುತ್ತಿದ್ದಂತೆ ಬಾಲಕಿಯನ್ನು ವಿಚಾರಿಸದೆ, ಆಕೆಗೆ ಕೋಲಿನಿಂದ ಹೊಡೆದಿದ್ದಾನೆ. ಇದ್ರಿಂದಾಗಿ ಗಂಭೀರ ಗಾಯಗೊಂಡಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಾಲಕಿಯ ತಾಯಿ ಆರತಿ ಪುಷ್ಪೇಂದ್ರ ವಿರುದ್ದ ದೂರು ದಾಖಲಿಸಿದ್ದಾರೆ.  ದೂರಿನನ್ವಯ ನರೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಭಾನುವಾರ (ಮಾ.29) ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಅಪರಾಧಕ್ಕೆ ಬಳಸಲಾದ ಕೋಲನ್ನು ವಶಪಡಿಸಿಕೊಂಡಿದ್ದಾರೆ.

Shwetha M