ಹಾಡುತ್ತಾ ಕುಣಿಯುತ್ತಾ ಕುಸಿದೇ ಬಿಟ್ಟ ಯುವಕ- ಮದುವೆ ಸಮಾರಂಭದಲ್ಲಿ ವಿಧಿಯ ಅಟ್ಟಹಾಸ
ವಿಧಿ ನಿಯಮವೇ ಹಾಗೇ. ಯಾರಿಗೆ ಯಾವ ಸಮಯದಲ್ಲಿ ಸಾವು ಹೇಗೆ ಬರುತ್ತೆ ಅಂತಾ ಹೇಳಲು ಸಾಧ್ಯವೇ ಇಲ್ಲ. ಅದರಲ್ಲೂ ಸಂಭ್ರಮದಲ್ಲಿರುವಾಗ ಸಾವಿನ ಅಟ್ಟಹಾಸ ನಿಜಕ್ಕೂ ಊಹಿಸಲೂ ಕೂಡಾ ಆಗುವುದಿಲ್ಲ. ಇಲ್ಲೂ ಆಗಿರುವುದು ಅದೇ. ಒಬ್ಬ ಯುವಕ ಮದುವೆ ಮನೆಯಲ್ಲಿ ಸಂಭ್ರಮದಿಂದ ಡ್ಯಾನ್ಸ್ ಮಾಡುತ್ತಿದ್ದ. ಯುವಕನ ಸಂಭ್ರಮದ ನೃತ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಎಷ್ಟು ಚೆನ್ನಾಗಿ ಸ್ಟೆಪ್ಸ್ ಹಾಕ್ತಿದ್ದಾನೆ ಅಂತಾ ಹುರಿದುಂಬಿಸುತ್ತಿದ್ದರು. ಆತನ ಸಂಭ್ರಮದ ನರ್ತನ ಸಾವಿನ ನರ್ತನವಾಗುತ್ತೆ ಅಂತಾ ಹೇಗೆ ಗೊತ್ತಾಗಬೇಕಿದ್ದು. ಕುಣಿಯುತ್ತಲೇ ಆ ಯುವಕ ಕುಸಿದುಬಿದ್ದಿದ್ದ. ಕೆಲವೇ ಕ್ಷಣಗಳಲ್ಲಿ ಎಲ್ಲವೂ ಮುಗಿದುಹೋಗಿತ್ತು. ಇಂಥಾ ಒಂದು ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇದನ್ನೂ ಓದಿ: ವಿವಾಹಿತನ ಜೊತೆ ಪತ್ನಿ ಪರಾರಿ – ಆತನ ಹೆಂಡ್ತಿಯನ್ನೇ ಮದುವೆಯಾದ ಭೂಪ..!
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯವನಾದ 19 ವರ್ಷದ ಯುವಕ, ತೆಲಂಗಾಣದಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದ. ಡಿಜೆಯಲ್ಲಿ ಹಾಡಿ ಕುಣಿಯುತ್ತಿದ್ದ. ನಗ್ತಾ ನಗ್ತಾ ಕುಣಿಯುತ್ತಿದ್ದ ಯುವಕ ದಿಢೀರ್ ಅಂತಾ ಕುಸಿದು ಬಿದ್ದೇಬಿಟ್ಟಿದ್ದಾನೆ.
A Young Man Died on the Spot of a Heart Attack While Dancing at a Wedding Reception in Barat in kubeer mandal of Nirmal District,
Telangana. pic.twitter.com/bq5acaQdNz— Mohammed Zeeshan Ali Zahed (@zeeshan_zahed) February 26, 2023
ತಕ್ಷಣವೇ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷೆ ಮಾಡಿದ ನಂತರ ಯುವಕ ಬದುಕಿಲ್ಲ ಎಂದು ಹೇಳಿದ್ದಾರೆ. ಆತ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ಶೋಕ ಮಡುಗಟ್ಟಿತ್ತು.