Sha’Carri ಚೆಂದಕ್ಕೆ ಜಲಸ್ ಯಾಕೆ..?  – ನೈಲ್ ಆರ್ಟ್, ಟ್ಯಾಟೂ, ಹೇರ್‌ ಸ್ಟೈಲ್
ಶರವೇಗ ರಿಚರ್ಡ್‌ಸನ್ ಜಗತ್ತಿನ ಕ್ರಶ್‌  

Sha’Carri ಚೆಂದಕ್ಕೆ ಜಲಸ್ ಯಾಕೆ..?  – ನೈಲ್ ಆರ್ಟ್, ಟ್ಯಾಟೂ, ಹೇರ್‌ ಸ್ಟೈಲ್ಶರವೇಗ ರಿಚರ್ಡ್‌ಸನ್ ಜಗತ್ತಿನ ಕ್ರಶ್‌  

ಪ್ಯಾರಿಸ್‌ ನಲ್ಲಿ ಒಲಿಂಪಿಕ್ಸ್‌ನಲ್ಲಿ ವೇಗದ ಓಟಗಾರ್ತಿ ಭಾರೀ ಸೌಂಡ್ ಮಾಡ್ತಿದ್ದಾರೆ. ನೋಡೋಕೆ ಜಿಂಕೆ ಮರಿ.. ಓಡೋಕೆ ಶುರುಮಾಡಿದ್ರೆ ಚಿರತೆಯ ವೇಗ.. ಶರವೇಗದ ಓಟಗಾರ್ತಿ ನೋಡಿದ್ರೆ ನಿಮ್ಗೆ ಉಸೇನ್ ಬೋಲ್ಟ್ ನೆನಪಾಗದೇ ಇರಲ್ಲ, ಅಷ್ಟೇ ಯಾಕೆ ಈಕೆಯೇ ಈಗ ಕ್ರೀಡಾ ಜಗತ್ತಿನ ಕ್ರಷ್.. ಸೋಶಿಯಲ್ ಮೀಡಿಯಾದಲ್ಲಿ ಇವಳದ್ದೇ ಹವಾ.. ನೋಡೋಕೆ ಸಿಕ್ಕಾಪಟ್ಟೆ ಬ್ಯೂಟಿ.. ಓಡೋಕೆ ಶುರುಮಾಡಿದ್ರೆ ಹಾಟ್ ಹಾಟ್ ಅಥ್ಲೀಟ್.. ಡಿಫರೆಂಟ್ ಹೇರ್ ಸ್ಟೈಲ್, ಉದ್ದನೆಯ ಉಗುರಲ್ಲೂ ವಿಭಿನ್ನ ಸ್ಟೈಲ್.. ಈಕೆ ಬೇರೆ ಯಾರು ಅಲ್ಲ ಶಾ ಕಾರಿ ರಿಚರ್ಡ್ಸನ್.. ವಿಶ್ವದ ಅತ್ಯಂತ ವೇಗದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ಶಾ ಕಾರಿ ಯಾರು?, ಈಕೆಯ ಓಟಕ್ಕೆ ಫ್ಯಾನ್ಸ್ ಬೆಚ್ಚಿಬೀಳೋದ್ಯಾಕೆ?, ಈಕೆಯ ನೋಟಕ್ಕೆ ಅಭಿಮಾನಿಗಳು ಹಾತೊರೆಯೋದ್ಯಾಕೆ?, ಈಕೆಯನ್ನ ಕಾಣಲು ಫ್ಯಾನ್ಸ್ ಕಾಯೋದ್ಯಾಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  KLಗೆ RCB ಬಾಗಿಲು ಬಂದ್? – ಫಾಫ್ OUT.. ಪಾಂಡ್ಯ CAPTAIN?

ಮಿಂಚಿನ ವೇಗ, ಫ್ಯಾನ್ಸ್ ನಿದ್ದೆ ಕೆಡಿಸುವ ಮೈಮಾಟ, ಚೂಪಾದ, ಉದ್ದನೆಯ ಉಗರು.. ಅದಕ್ಕೆ ಹೊಂದೋ ನೈಲ್ ಆರ್ಟ್.. ಮೈ ತುಂಬಾ ಟ್ಯಾಟು.. ಇದು ಶಾ ಕಾರಿ ರಿಚರ್ಡ್ಸನ್ ಲುಕ್.. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಯುಎಸ್ಎ ವೇಗದ ಓಟಗಾರ್ತಿ ಶಾ ಕಾರಿ ರಿಚರ್ಡ್ಸನ್ ಕಾಣಿಸಿಕೊಂಡಿದ್ದು ಹೀಗೆ.  ಅಮೆರಿಕದ ಶಾ ಕಾರಿ ರಿಚರ್ಡ್ಸನ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಓಟದಲ್ಲಿ ರನ್ನರ್ ಅಪ್ ಆಗಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿ ಗೆದ್ದು ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಂದ್ಹಾಗೆ ಶಾ ಕಾರಿ ರಿಚರ್ಡ್ಸನ್ ಫ್ಯಾಷನ್, ಕ್ರೀಡಾ ಜರ್ನಿ ರೋಚಕವಾಗಿದೆ.

ಶಾ ಕಾರಿ ರಿಚರ್ಡ್ಸನ್ 2000 ನೇಯ ಮಾರ್ಚ್‌ 25  ರಂದು ಯುಎಸ್‌ನಲ್ಲಿ ಜನಿಸಿದ್ರು.. ಅಮೆರಿಕಾದ ಟೆಕ್ಸಾಸ್‌ನ ಡಲ್ಲಾಸ್‌ ಇವರು ಹುಟ್ಟೂರು. ಸಣ್ಣ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿರುವ ಶಾ ಕಾರಿ, ಅಜ್ಜಿ, ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದಿದ್ರು. ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಇದ್ದ ಶಾ ಕಾರಿ ಹೈಸ್ಕೂಲ್‌ ಹಂತದಲ್ಲಿಯೇ ಅಥ್ಲೀಟ್‌ ಆಗಿ ಗುರುತಿಸಿಕೊಂಡಿದ್ರು. ಮಿಂಚಿನ ಓಟದ ಮೂಲಕ ಎಲ್ಲರ ಗಮನಸೆಳೆದಿದ್ರು. ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ಕೇವಲ 10.75 ಸೆಕೆಂಡುಗಳ ಸಮಯದೊಂದಿಗೆ 100 ಮೀಟರ್‌ಗಳಲ್ಲಿ ಜೂನಿಯರ್ ವಿಶ್ವ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಶಾಕಾರಿಯದ್ದು. 2019ರಲ್ಲಿ 100 ಮತ್ತು 200 ಮೀಟರ್‌ಗಳಲ್ಲಿ NCAA ಪ್ರಶಸ್ತಿಗಳನ್ನು ಗೆದ್ದುಕೊಂಡ ಓಟಗಾರ್ತಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಇಲ್ಲಿದಂಲೇ ತಮ್ಮ ವೃತ್ತಿಜೀವನ ಪ್ರಾರಂಭ ಮಾಡಿದ್ದರು. ಶಾ ಕಾರಿ ರಿಚರ್ಡ್ಸನ್ ಓಟದಲ್ಲಿ ಗುರಿ ಮುಟ್ಟುವಾಗ ತನ್ನ ಬೆರಳಿನ ಉಗುರುಗಳನ್ನ ಸಖತ್ ಸ್ಟೈಲಿಶ್ ಆಗಿ ಪ್ರದರ್ಶಿಸುತ್ತಾರೆ. ಶಾ ಕಾರಿ ಬೆರಳಿನ ನರ್ತನಕ್ಕೆ ಕ್ರೀಡಾಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು 2017 ರಲ್ಲಿ ನಡೆದ ಪ್ಯಾನ್ ಅಮೇರಿಕನ್ U20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಾ ಕಾರಿ ಪ್ರದರ್ಶನ ಇನ್ನೂ ಕೂಡಾ ಟ್ರೆಂಡಿಂಗ್‌ನಲ್ಲೇ ಇದೆ. 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನು ಗೆದ್ದ ಶಾಕಾರಿ ಆವತ್ತು ತನ್ನ ವೇಗದ ಮೂಲಕ ಜಗತ್ತನ್ನೇ ಗೆದ್ದಿದ್ದಳು

2021 ರಲ್ಲಿ ರಿಚರ್ಡ್‌ಸನ್ ಯುಎಸ್ ಒಲಿಂಪಿಕ್ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಿದರು, ಅಲ್ಲಿ ಅವರು 100-ಮೀಟರ್ ಡ್ಯಾಶ್‌ನಲ್ಲಿ 10.86 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನ ಪಡೆದರು. ಈ ಗೆಲುವು ಆಕೆಗೆ ಟರ್ನಿಂಗ್‌ ಪಾಯಿಂಟ್‌ ಅಂತಾನೇ ಹೇಳ್ಬೋದು.. ಯಾಕಂದ್ರೆ ಈ ಗೆಲುವಿನಿಂದಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಿಗುತ್ತೆ. ಈ ವೇಳೆ ಆಕೆ ಡ್ರಗ್ ಪರೀಕ್ಷೆಗೆ ಒಳಗಾಗಬೇಕಿತ್ತು. ಈ ಸಮಯದಲ್ಲಿ ಆಕೆ ಡ್ರಗ್ಸ್‌ಸೇವನೆ ಮಾಡಿರೋದು ದೃಢ ಪಟ್ಟಿತು. ಇದ್ರಿಂದ್ರಾಗಿ ಆಕೆಯನ್ನ ಒಲಿಂಪಿಕ್ಸ್‌ ನಿಂದ ಅಮಾನತು ಮಾಡಲಾಗುತ್ತೆ. ಆಕೆಯ ಸ್ಪರ್ಧೆಯ ಫಲಿತಾಂಶಗಳನ್ನು ಅನರ್ಹಗೊಳಿಸಲಾಯಿತು, ಅಂದರೆ ಟೋಕಿಯೊದಲ್ಲಿ ನಡೆದ 100-ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇನ್ನು ರಿಚರ್ಡ್‌ಸನ್ ಡ್ರಗ್ಸ್‌ ಸೇವನೆಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಶಾಕಾರಿ ಬಾಲ್ಯದಲ್ಲಿ ತಾಯಿಯನ್ನ ಕಳೆದುಕೊಳ್ತಾರೆ. ತಾಯಿಯ ನಿಧನದಿಂದಾಗಿ ರಿಚರ್ಡಸ್‌ನ್ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದ್ರಿಂದ ಹೊರ ಬರಲು ಗಾಂಜಾ ಸೇವನೆಯ ಮೊರೆ ಹೋಗುತ್ತಾರೆ. ತಾಯಿ ಇಲ್ಲದ ನೋವನ್ನ ಮರೆಯಲು ಗಾಂಜಾ ಸೇವನೆ ಮಾಡಿದ್ದಾಗಿ ಸ್ವತಃ ವೇಗದ ಓಟಗಾರ್ತಿಯೇ ಒಪ್ಪಿಕೊಂಡಿದ್ದಾರೆ.. ಯಾವಾಗ ಶಾ ಕಾರಿಯನ್ನ ಅಮಾನತು ಮಾಡಲಾಗುತ್ತೋ ಆ ಸಮಯದಲ್ಲೂ ಈ ಮಿಂಚಿನ ಓಟಗಾರ್ತಿ ಪರ ದೊಡ್ಡ ಹೋರಾಟವೇ ನಡೆದಿತ್ತು. ಅಮಾನತು ಮಾಡಿರುವುದಕ್ಕೆ ವಿರೋಧ ಕೂಡ ವ್ಯಕ್ತವಾಯ್ತು.. ಇಷ್ಟು ಟ್ಯಾಲೆಂಟ್ ಇರೋ ಅಥ್ಲೀಟ್ ನ್ನ ಅಮಾನತು ಮಾಡಿರುವುದು ನ್ಯಾಯಸಮ್ಮತವಲ್ಲ ಎಂಬ ಮಾತು ಕೂಡ ಕೇಳಿ ಬಂತು.. ಇದು ಶಾಕಾರಿಗೆ ದೊಡ್ಡ ಶಕ್ತಿ ತುಂಬಿತ್ತು.

ಬಳಿಕ 2021 ರಲ್ಲಿ ಒಲಿಂಪಿಕ್ಸ್ ನಂತರ, ರಿಚರ್ಡ್ಸನ್ ಪ್ರಿಫಾಂಟೈನ್ ಕ್ಲಾಸಿಕ್ನಲ್ಲಿ 100-ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು.. ಈ ಸ್ಪರ್ಧೆಯಲ್ಲಿ 11.14 ಸೆಕೆಂಡುಗಳಲ್ಲಿ ಓಡಿದ್ರು.. ಇಷ್ಟು ವೇಗವಾಗಿ ಓಡಿದ್ರು ಕೂಡ ಆಕೆ ಕೊನೆಯ ಸ್ಥಾನವನ್ನು ಅಲಂಕರಿಸಬೇಕಾಯ್ತು. ಇನ್ನು 2022 USATF ಹೊರಾಂಗಣ ಚಾಂಪಿಯನ್‌ಶಿಪ್‌ಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡ್ತಾ ಬಂದ್ರು.. 100 ಮೀಟರ್ ಮತ್ತು 200 ಮೀಟರ್‌ಗಳಲ್ಲಿ ಫೈನಲ್‌ಗೆ ತಲುಪುವಲ್ಲಿ ಕಂಪ್ಲೀಟ್‌ ಫೈಲ್‌ ಆದ್ರು.. ಹೀಗಾಗಿ 2022ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿರಲಿಲ್ಲ. ನಂತರ ಶಾಕಾರಿ ಗ್ರೇಟ್ ಕಂಬ್ಯಾಕ್ ಮಾಡಿದ್ದು 2023ರಲ್ಲಿ. ಜುಲೈನಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದರು. ಅಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಆ ವರ್ಷದ ನಂತರ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ದೆ ಮಾಡ್ತಾರೆ.. ಅಲ್ಲಿ ಶಾಕಾರಿಗೆ ಲಕ್‌ ಕೈ ಹಿಡಿಯುತ್ತೆ.. 100-ಮೀಟರ್ ಡ್ಯಾಶ್‌ನಲ್ಲಿ 10.65 ಸೆಕೆಂಡುಗಳಲ್ಲಿ ತನ್ನ ಗುರಿ ತಲುಪಿ ಚಿನ್ನದ ಪದಕವನ್ನು ಗೆಲ್ತಾರೆ..  ಇನ್ನು ರಿಚರ್ಡ್‌ಸನ್ 4 × 100-ಮೀಟರ್ ರಿಲೇಯಲ್ಲಿ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದರು ಮತ್ತು ಅವರು 200-ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಗಳಿಸ್ತಾರೆ.. ಸವಾಲುಗಳನ್ನ ಫೇಸ್‌ ಮಾಡಿ ಬಂದಿದ್ದ ಶಾ ಕಾರಿ  2024 ರಲ್ಲಿ  ಪ್ಯಾರಿಸ್ ಕ್ರೀಡಾಕೂಟಕ್ಕೆ ಸೆಲೆಕ್ಟ್‌ ಆಗ್ತಾರೆ..  2024 ರಲ್ಲಿ  ಪ್ಯಾರಿಸ್ ಕ್ರೀಡಾಕೂಟಕ್ಕಾಗಿ ಯುಎಸ್ ಒಲಿಂಪಿಕ್ ಟ್ರಯಲ್ಸ್‌ನಲ್ಲಿ , ರಿಚರ್ಡ್‌ಸನ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದರು. ಪ್ಯಾರಿಸ್‌ನಲ್ಲಿ ನಡೆದ 100 ಮೀಟರ್ ಸ್ಪರ್ಧೆಯಲ್ಲಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾದ್ರು.. ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ರು..  10.87 ಸೆಕೆಂಡ್ಸ್‌ಗಳಲ್ಲಿ ಓಡಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು..

ಇನ್ನು 24 ವರ್ಷದ ರಿಚರ್ಡ್ಸನ್‌ ಸೌಂದರ್ಯ ಪ್ರಿಯೆ.. ಉಗುರಿನ ಮೇಲೆ ವಿಶೇಷ ಪ್ರೀತಿ, ಟ್ಯಾಟೂ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್, ಇನ್ನು ರಿಚರ್ಡ್‌ಸನ್ ಹೇರ್‌ ಸ್ಟೈಲ್‌ ಯಾವಾಗ್ಲೂ ಡಿಫರೆಂಟ್ ಆಗಿಯೇ ಇರುತ್ತೆ. ಈ ಬಗ್ಗೆಯೂ ಆಕೆ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ.. ನಮ್ಮದು ತುಂಬು ಕುಟುಂಬ.. ಮನೆ ತುಂಬಾ ಹೆಣ್ಣು ಮಕ್ಕಳಿದ್ದಾರೆ.. ಹೀಗಾಗಿಯೇ ಫ್ಯಾಷನ್‌ ಮೇಲೆ ನನಗೆ ಇಷ್ಟೊಂದು ಆಸಕ್ತಿ ಹುಟ್ಟಿಕೊಳ್ಳಲು ಕಾರಣ ಅಂತಾ ಹೇಳಿಕೊಂಡಿದ್ದಾರೆ..

ಶಾಕಾರಿ ಫ್ಯಾನ್ಸ್ ಉಸೇನ್ ಬೋಲ್ಟ್ ವೇಗಕ್ಕೆ ಹೋಲಿಸುತ್ತಾರೆ. ಇದಕ್ಕೆ ಕಾರಣವೂ ಇದೆ. ಈಕೆ ಓಟ ಮಿಂಚು ಹರಿಸುತ್ತದೆ. ಈಕೆ ಬರೀ ಎದುರಾಳಿಗಳನ್ನ ಮಾತ್ರವಲ್ಲ, ತನ್ನ ಓಟದಿಂದಲೇ ನೋಡುಗರನ್ನೂ ಬೆಚ್ಚಿ ಬೀಳಿಸುತ್ತಾಳೆ. ತನ್ನ ಮೊನಚು ಉಗುರು.. ಅದಕ್ಕೆ ಹಾಕುವ ವಿಭಿನ್ನ ಕಲರ್.. ಬೆರಳುಗಳಲ್ಲಿ ನರ್ತನ ಮಾಡೋ ಶೈಲಿ, ಜೊತೆಗೆ ಕಲರ್ ಕಲರ್ ಹೇರ್ ಸ್ಟೈಲ್.. ಮಾಮೂಲಿಯಾಗಿ ಅಥ್ಲೀಟ್‌ಗಳು ಗುರಿ ಮುಟ್ಟಲು ಪ್ರಯತ್ನಿಸುತ್ತಾರೆ. ಆದ್ರೆ, ಶಾಕಾರಿ ಇವರೆಲ್ಲರಿಗಿಂತ ಡಿಫರೆಂಟ್.. ಈಕೆ ಬರೀ ಪದಕ ಬೇಟೆ ಮಾತ್ರ ಮಾಡಲ್ಲ. ಹೇರ್ ಸ್ಟೈಲ್, ಮೇಕಪ್, ಉಗುರಿನ ಕಲರ್ ಮೂಲಕ ಅನೇಕ ಬ್ರ್ಯಾಂಡ್‌ಗಳ ಬಗ್ಗೆ ಪ್ರಚಾರ ಮಾಡುತ್ತಾ ಸ್ಪರ್ಧಿಸುತ್ತಾರೆ. ಆದ್ರೆ, ಓಡುವಾಗ ಮಾತ್ರ ಈಕೆಯದ್ದು ಗೆಲುವಿನ ಓಟವೇ.

Shwetha M

Leave a Reply

Your email address will not be published. Required fields are marked *