ಹಿಂಸಾಚಾರಕ್ಕೆ ತಿರುಗಿದ ಅನ್ನದಾತರ ಪ್ರತಿಭಟನೆ – 60ಕ್ಕೂ ಹೆಚ್ಚು ರೈತರಿಗೆ ಗಾಯ

ಹಿಂಸಾಚಾರಕ್ಕೆ ತಿರುಗಿದ ಅನ್ನದಾತರ ಪ್ರತಿಭಟನೆ – 60ಕ್ಕೂ ಹೆಚ್ಚು ರೈತರಿಗೆ ಗಾಯ

ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಖಾತ್ರಿ ಸೇರಿದಂತೆ ಹಲವು ಬೇಡಿಕೆಗಳಿಗೆ ಮಣಿಯುವಂತೆ ಕೇಂದ್ರವನ್ನು ಒತ್ತಾಯಿಸುವ ಉದ್ದೇಶದಿಂದ 200 ಕ್ಕೂ ಹೆಚ್ಚು ರೈತ ಸಂಘಗಳು `ದೆಹಲಿ ಚಲೋ’ಮೆರವಣಿಗೆಗಾಗಿ ರಾಷ್ಟ್ರ ರಾಜಧಾನಿಗೆ  ಬಂದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಶಂಭು ಗಡಿಯಲ್ಲಿ ರೈತರ ಗುಂಪು ಗಡಿ ದಾಟಿ ಬರುತ್ತಿದ್ದ ರೈತರನ್ನು ತಡೆಯಲು ಪೊಲೀಸರು ಪ್ರಯೋಗಿಸಿದ ಜಲಫಿರಂಗಿ ಹಾಗೂ ಅಶ್ರುವಾಯು ಶೆಲ್ ಬಳಸಿದ್ದರಿಂದ ಪ್ರತಿಭಟನಾನಿರತ 60ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪಂಜಾಬ್​​ಗೆ ಪೂರೈಕೆ ಆಗಬೇಕಿದ್ದ ಗ್ಯಾಸ್ ಹಾಗೂ ಡೀಸೆಲ್ ಪೂರೈಕೆ ಮೇಲೂ ಪ್ರತಿಭಟನೆ ಎಫೆಕ್ಟ್ ಬೀರಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಜಪಾನ್‌ ತಂತ್ರಜ್ಞಾನ! – ಇದರ ವಿಶೇಷ ಏನು?

ರೈತರನ್ನು ತಡೆಯಲು ಪೊಲೀಸರಿಂದ ಬ್ಯಾರಿಕೇಡ್ ಅಳವಡಿಕೆ, ಮಾರ್ಗ ಬದಲಾವಣೆಯಂತಹ ಕ್ರಮಗಳಿಂದ ದೆಹಲಿಯಲ್ಲಿ ಭಾರಿ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಅದರಲ್ಲೂ ಸಿಂಘು, ಟಿಕ್ರಿ ಗಡಿಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸದೆ. ಘಾಜಿಪುರ, ನೊಯ್ಡಾ, ಸೇರಿ ಹಲವು ಗಡಿಗಳಲ್ಲಿ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಇನ್ನು ಮುಂಜಾಗ್ರತಾ ಕ್ರಮವಾಗಿ ನವದೆಹಲಿಯ 8 ಮೆಟ್ರೋ ಗೇಟ್‌ಗಳನ್ನು ಮುಚ್ಚಲಾಗಿದೆ. ರಾಜೀವ್ ಚೌಕ್, ಮಂಡಿ ಹೌಸ್, ಜನಪಥ್ ಸೇರಿದಂತೆ 8 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

Shwetha M