ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನಯಾನ ಭಾಗ್ಯ! – ರೈತನಿಂದ ಮಹಿಳೆಯರ ಕನಸು ನನಸು!

ಒಮ್ಮೆಯಾದ್ರೂ ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನೋದು ಬಡ ಹಾಗೂ ಮಧ್ಯಮ ವರ್ಗದವರ ಕನಸು.. ಆದ್ರೇನು ಮಾಡೋದು.. ದುಡಿದ ದುಡ್ಡು ಜೀವನಕ್ಕೆ ಸಾಕಾಗಲ್ಲ. ವಿಮಾನ ಪ್ರಯಾಣ ಕನಸಿನ ಮಾತು. ಆದೀಗ ಇಲ್ಲೊಬ್ಬ ರೈತ ತನ್ನ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯರನ್ನ ವಿಮಾನದಲ್ಲಿ ಕರೆದುಕೊಂಡು ಹೋಗಿ ಸುದ್ದಿಯಾಗಿದ್ದಾರೆ. ಇದ್ರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದನ್ನೂ ಓದಿ: ಉಕ್ರೇನ್ ಜೊತೆ ರಷ್ಯಾ ಮಾತುಕತೆಗೆ ರೆಡಿ- 3 ವರ್ಷಗಳ ಯುದ್ಧ ನಿಲ್ಲುತ್ತಾ?
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗನಹಳ್ಳಿ ರೈತರೊಬ್ಬರು ವಿಮಾನಯಾನ ಮಾಡಿಸಿದ್ದಾರೆ. ಶಿರಗನಹಳ್ಳಿ ರೈತ ವಿಶ್ವನಾಥ್‌ರಿಂದ ಹತ್ತು ಜನ ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸಿ ಆಸೆ ಪೂರೈಸಿದ್ದಾರೆ. ಇದ್ರಿಂದಾಗಿ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ.
ವಿಶ್ವನಾಥ್ ಅವರ ತೋಟಕ್ಕೆ ಮಹಿಳೆಯರು ಕೂಲಿ ಕೆಲಸಕ್ಕೆ ಬರುತ್ತಿದ್ದರು. ಒಂದು ದಿನ ನಾವು ಒಮ್ಮೆಯಾದ್ರೂ ವಿಮಾನದಲ್ಲಿ ಹೋಗ್ಬೇಕು ಅಂತಾ ಆಸೆ ವ್ಯಕ್ತಪಡಿಸಿದ್ರು. ಇದೀಗ ವಿಶ್ವನಾಥ್ ಮಹಿಳೆಯರ ಆಸೆ ಈಡೇರಿಸಿದ್ದಾರೆ. ಮಹಿಳಾ ಕಾರ್ಮಿಕರನ್ನು ಶಿವಮೊಗ್ಗ ಏರ್‌ಪೋರ್ಟ್ ಗೋವಾದವರೆಗೂ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಇದೀಗ ಮಹಿಳಾ ಕಾರ್ಮಿಕರಿಗೆ ವಿಮಾನಯಾನ ಭಾಗ್ಯ ನೀಡಿದ ರೈತನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.