8 ವರ್ಷ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ – ನಿವೃತ್ತಿ ಹೊಂದಿದ ಏಂಜಲ್‌ಗೆ ಆತ್ಮೀಯ ಬೀಳ್ಕೊಡುಗೆ..!
2015ರಿಂದ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಿದ ಏಂಜಲ್ ಶ್ವಾನ ಮೇ 1ರಂದು ಸೇವೆಯಿಂದ ನಿವೃತ್ತಿ ಹೊಂದಿದೆ. ತನ್ನ ಸೇವೆಯಿಂದ ನಿವೃತ್ತಿಹೊಂದಿದ ಶ್ವಾನವನ್ನು ಪೊಲೀಸರು ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ಪೊಲೀಸರು ಇಂಥಾ ಒಂದು ಭಾವುಕ ದೃಶ್ಯಕ್ಕೆ ಸಾಕ್ಷಿಯಾಗಿದ್ದರು.
ಇದನ್ನೂ ಓದಿ: 99 ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಆನೆಗೆ ನಿವೃತ್ತಿ – ಭಾವುಕ ದೃಶ್ಯ ಸೆರೆ
ಏಂಜಲ್ ಅನ್ನುವ ಶ್ವಾನ ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಿತ್ತು. 2015 ಮಾರ್ಚ್ 13ರಂದು ಸೇವೆಗೆ ಸೇರಿದ್ದ ಲ್ಯಾಬ್ರಡಾರ್ ತಳಿಯ ಹೆಣ್ಣು ಶ್ವಾನ ಏಂಜಲ್, ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿತ್ತು. . ಏ.30ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಕರ್ತವ್ಯ ನಿರ್ವಹಿಸಿತ್ತು. ಹಾಗೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ, ಕೇಂದ್ರದ ಮಂತ್ರಿಗಳು, ಹತ್ತಾರು ಗಣ್ಯ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಏಂಜಲ್ ಕಾರ್ಯ ನಿರ್ವಹಿಸಿ ಸೈ ಅನ್ನಿಸಿಕೊಂಡಿದೆ. ತನ್ನ ಕರ್ತವ್ಯನಿರ್ವಹಿಸಿ ನಿವೃತ್ತಿಹೊಂದಿರುವ ಏಂಜಲ್ ಶ್ವಾನವನ್ನು ಎಸ್ಪಿ ಧರಣಿದೇವಿ ಸನ್ಮಾನ ಮಾಡಿ ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ. ಜೊತೆಗೆ ಕೆಜಿಎಫ್ ಪೊಲೀಸರು ಕೂಡಾ ನಿವೃತ್ತಿ ಹೊಂದಿದ ಶ್ವಾನವನ್ನು ಸನ್ಮಾನಿಸಿದರು. ನಂತರ ಪೊಲೀಸರ ಸಮ್ಮುಖದಲ್ಲಿ ಏಂಜಲ್‌ಗೆ ಬೀಳ್ಕೊಡುಗೆ ನೀಡಲಾಯ್ತು.