‘ಒಎಂಜಿ 2’ ಚಿತ್ರವನ್ನು ಮೆಚ್ಚಿಕೊಂಡ ಫ್ಯಾನ್ಸ್ – ಅಕ್ಷಯ್‌ಕುಮಾರ್‌ಗ ಅಭಿಮಾನಿಗಳ ಜೈ

‘ಒಎಂಜಿ 2’ ಚಿತ್ರವನ್ನು ಮೆಚ್ಚಿಕೊಂಡ ಫ್ಯಾನ್ಸ್ – ಅಕ್ಷಯ್‌ಕುಮಾರ್‌ಗ ಅಭಿಮಾನಿಗಳ ಜೈ

ಬಾಲಿವುಡ್ ಸ್ಟೈಲ್‌ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ‘ಒಎಂಜಿ 2’ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಕ್ಷಯ್ ಕುಮಾರ್‌ಗೆ ಗೆಲುವು ತಂದುಕೊಡುವುದು ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ. ಈ ಚಿತ್ರ ನೋಡಿದ ಅಭಿಮಾನಿಗಳು ಕೂಡಾ ಅಕ್ಕಿಬಾಯ್ ಗೆ ಜೈ ಎನ್ನುತ್ತಿದ್ದಾರೆ.

ಇದನ್ನೂ ಓದಿ: ‘ಒಎಂಜಿ2’ ಸಿನಿಮಾಕ್ಕೆ ‘ಎ’ ಸರ್ಟಿಪಿಕೇಟ್ ಸಿಕ್ಕಿದ್ಯಾಕೆ? – ಟ್ರೇಲರ್‌ನಲ್ಲಿ ರಿವೀಲ್ ಆಗಿರುವ ಸತ್ಯವೇನು?

ತನ್ನ ಮಗನನ್ನು ಅಶ್ಲೀಲತೆಯ ಆಧಾರದ ಮೇಲೆ ಶಾಲೆಯಿಂದ ಹೊರಹಾಕಿದ ನಂತರ ಪಂಕಜ್ ತ್ರಿಪಾಠಿಯು ನೈತಿಕತೆ, ಧರ್ಮ ಮತ್ತು ಲೈಂಗಿಕತೆಯ ಬಗ್ಗೆ ತನ್ನದೇ ಆದ ಆಲೋಚನೆಗಳು ಮತ್ತು ಸಾಮಾಜಿಕ ಮಾನದಂಡಗಳನ್ನು ಪ್ರಶ್ನೆ ಮಾಡಲು ಆರಂಭಿಸುತ್ತಾನೆ. ಈ ಕುರಿತು ಸಿನಿಮಾ ಸಾಗುತ್ತದೆ. ಪಾಲಕರು, ಮಕ್ಕಳ ನಡುವೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚೆಯಾಗಲೀ, ಮಾತುಕತೆ ಆಗೋದಿಲ್ಲ. ಆದರೆ ಇವು ಆಗಬೇಕಾದ ಅನಿವಾರ್ಯತೆ ಇದೆ ಎನ್ನೋದನ್ನು ಸಿನಿಮಾ ಮೂಲಕ ಹೇಳಲಾಗಿದೆ. ಎಷ್ಟು ಮಕ್ಕಳು ಪಾಲಕರ ಮುಂದೆ ಲವ್, ರೊಮ್ಯಾನ್ಸ್ ದೃಶ್ಯಗಳನ್ನು ನೋಡಲು ಎಷ್ಟು ಕಂಫರ್ಟ್ ಆಗಿದ್ದಾರೆ? ಋತುಸ್ರಾವದ ಬಗ್ಗೆ ಶಾಲೆಯಲ್ಲಿ ಯಾಕೆ ಚರ್ಚೆ ಆಗಲ್ಲ? ಅಶ್ಲೀಲ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಲಭ್ಯ ಆಗುತ್ತವೆ?. ಆದರೆ ಶಾಲೆಯಲ್ಲಿ ಯಾಕೆ ಲೈಂಗಿಕ ಶಿಕ್ಷಣ ನೀಡೋದಿಲ್ಲ? ಪುರುಷರು ತಮ್ಮ ಲೈಂಗಿಕ ಅಗತ್ಯಗಳು ಮತ್ತು ಗಡಿಗಳ ಬಗ್ಗೆ ಹೆಚ್ಚು ತಿಳಿದಿದ್ದರೆ ಮಹಿಳೆಯರು ಬಹುಶಃ ದೇಶದಲ್ಲಿ ಸುರಕ್ಷಿತವಾಗಿರಬಹುದೇ ಈ ಎಲ್ಲ ವಿಷಯಗಳ ಬಗ್ಗೆ ಸಿನಿಮಾವಿದೆ.

ಈ ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ. ಅನೇಕರು ಎಲ್ಲರೂ ನೋಡಲೇಬೇಕಾದ ಚಿತ್ರ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅಕ್ಷಯ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

suddiyaana