ಮ್ಯಾಚ್ ಫಿನಿಶರ್ ರಿಂಕು ಸಿಂಗ್ ಬ್ಯಾಟಿಂಗ್ ನೋಡೋದೇ ಬೊಂಬಾಟ್ – ಮ್ಯಾಚ್ ಫಿನಿಶರ್ ಬ್ಯಾಟಿಂಗ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ

ರಿಂಕು ಸಿಂಗ್.. ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್. ತಮ್ಮ ಅದ್ಭುತ ಆಟದ ಮೂಲಕವೇ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ರಿಂಕು ಸಿಂಗ್ ಈಗ ಮ್ಯಾಚ್ ಫಿನಿಶರ್ ಅಂತಾನೇ ಕರೆಸಿಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಕಷ್ಟ ನನಗೆ ಮಾತ್ರ ಇರಲಿ, ಬೇರೆ ಬಡಪ್ರತಿಭೆಗಳೂ ಬೆಳೆಯಲಿ – ರಿಂಕು ಸಿಂಗ್ ರಿಯಲಿ ಗ್ರೇಟ್..!
ಟಿ-20 ಫಾರ್ಮೆಟ್ನಲ್ಲಿ ರಿಂಕು ಸಿಂಗ್ ಟೀಂನಲ್ಲಿ ಪರ್ಮನೆಂಟ್ ಪ್ಲೇಸ್ಮೆಂಟ್ ಪಡೆದುಕೊಂಡಿದ್ದಾರೆ. ಮುಂದಿನ ಟಿ-20 ವರ್ಲ್ಡ್ಕಪ್ಗೂ ರಿಂಕು ಸ್ಕ್ವಾಡ್ನಲ್ಲಿ ಸೆಲೆಕ್ಟ್ ಆಗೋದು ಗ್ಯಾರಂಟಿ. ಎಲ್ಲಾ ಮ್ಯಾಚ್ಗಳನ್ನ ಆಡೋದು ಕೂಡ ಗ್ಯಾರಂಟಿ. ನಿಜಕ್ಕೂ ರಿಂಕು ಸಿಂಗ್ ಗಿಫ್ಟೆಡ್ ಪ್ಲೇಯರ್ ಅಂತಾನೆ ಹೇಳಬಹುದು. ಯಾಕಂದ್ರೆ, ಪ್ರತಿ ಮ್ಯಾಚ್ನಲ್ಲೂ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎಂಥದ್ದೇ ಸಂದರ್ಭ ಇರಲಿ. ರಿಂಕು ಸಿಂಗ್ ಮಾತ್ರ ಹೊಡಿಬಡಿ ಆಟದಲ್ಲಿ ತಂಡದ ಸ್ಕೋರ್ ಜಾಸ್ತಿ ಮಾಡುತ್ತಲೇ ಇರುತ್ತಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿತಾದರೂ ಟೀಮ್ ಇಂಡಿಯಾದ ಯುವ ಫಿನಿಶರ್ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಇವರು ಸಿಡಿಸಿದ ಎರಡು ಸಿಕ್ಸರ್ ಕೂಡ ಅದ್ಭುತವಾಗಿತ್ತು. ಅದರಲ್ಲೂ ಒಂದು ಸಿಕ್ಸ್ ಪ್ರೆಸ್ ಬಾಕ್ಸ್‌ನ ಗಾಜಿಗೆ ತಾಗಿ ಒಡೆದು ಹೋಯಿತು. ರಿಂಕು ಸಿಂಗ್ ಕೇವಲ 39 ಬಾಲ್ಗಳಲ್ಲಿ 68 ರನ್ ಹೊಡೆದ್ರು. 9 ಬೌಂಡರಿ..2 ಸಿಕ್ಸರ್.. ಕಂಪ್ಲೀಟ್ ಕ್ಲಾಸ್ ಇನ್ನಿಂಗ್ಸ್. ಪಂದ್ಯದ ಬಳಿಕ ಮಾತನಾಡಿದ ರಿಂಕು ಸಿಂಗ್, ನಾನು ಹೊಡೆದ ಹೊಡೆತದಲ್ಲಿ ಚೆಂಡು ಮೀಡಿಯಾ ರೂಂಗೆ ತಾಗಿ ಗ್ಲಾಸ್ ಒಡೆದಿದೆ ಎಂದು ನನಗೆ ಗೊತ್ತಾಗಲಿಲ್ಲ. ಆದರೆ, ಡ್ರೆಸ್ಸಿಂಗ್ ಕೊಠಡಿಗೆ ಮರಳಿದ ಬಳಿಕ ಈ ವಿಷಯ ನನಗೆ ಗೊತ್ತಾಯಿತು. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ, ಎಂದು ಹೇಳಿದ್ದರು.
ಸ್ವಿಚ್ಯುವೇಷನ್ ಹೇಗೆಯೇ ಇದ್ರೂ ತುಂಬಾ ಕೂಲ್ ಆಗಿ, ಟೆನ್ಷನ್ ಫ್ರೀಯಾಗಿ ಆಡ್ತಾರೆ. ಇದು ನಿಜಕ್ಕೂ ರಿಂಕು ಸಿಂಗ್ರ ಸ್ಪೆಷಲಿ ಎಬಿಲಿಟಿ ಅಂತಾನೆ ಹೇಳಬಹುದು. ಮ್ಯಾಚ್ನಿಂದ ಮ್ಯಾಚ್ಗೆ ತುಂಬಾ ಮೆಚ್ಯೂರಿಟಿ ತೋರಿಸ್ತಿದ್ದಾರೆ. ರಿಂಕು ಕೇವಲ ಫಿನಿಷರ್ ಅಷ್ಟೇ ಅಲ್ಲ, ಡೆತ್ ಬ್ಯಾಟ್ಸ್ಮನ್ ಅಷ್ಟೇ ಅಲ್ಲ, ಮಿಡ್ಲ್ ಆರ್ಡರ್, ಟಾಪ್ ಆರ್ಡರ್ನಲ್ಲೂ ಬ್ಯಾಟಿಂಗ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ ಅನ್ನೋದು ಅವರ ಬ್ಯಾಟಿಂಗ್ನಲ್ಲೇ ಗೊತ್ತಾಗುತ್ತೆ. ಮುಂದಿನ ದಿನಗಳಲ್ಲಿ ರಿಂಕು ಸಿಂಗ್ ಕೇವಲ ಟಿ-20 ಮಾತ್ರವಲ್ಲ ವಂಡೇ ಜೊತೆಗೆ ಟೆಸ್ಟ್ ಟೀಮ್ಗೆ ಸೆಲೆಕ್ಟ್ ಆಗೋದು ಗ್ಯಾರಂಟಿ. ಆ ಮೆಚ್ಯೂರಿಟಿ ಅವರ ಆಟದಲ್ಲೇ ಕಾಣ್ತಾ ಇದೆ.