ಧೋನಿ ಅಬ್ಬರದ ಮುಂದೆ ಮಂಕಾದ ರೋಹಿತ್ ಶತಕ – ಮಾಹಿಯ ಹ್ಯಾಟ್ರಿಕ್ ಸಿಕ್ಸ್‌ಗೆ ಫ್ಯಾನ್ಸ್ ಫಿದಾ

ಧೋನಿ ಅಬ್ಬರದ ಮುಂದೆ ಮಂಕಾದ ರೋಹಿತ್ ಶತಕ – ಮಾಹಿಯ ಹ್ಯಾಟ್ರಿಕ್ ಸಿಕ್ಸ್‌ಗೆ ಫ್ಯಾನ್ಸ್ ಫಿದಾ

ನಿಜಕ್ಕೂ ಇದು ಧೋನಿಯ ಗೆಲುವು.. ಎಂಎಸ್‌ ಕ್ರೀಸ್‌ಗಿಳಿದ್ರು ಅಂದ್ರೆ ಆಟ ಯಾವ ದಿಕ್ಕಿಗೆ ಬೇಕಿದ್ದರೂ ಬದಲಾಗಬಹುದು ಎಂಬ ಅಭಿಮಾನಿಗಳ ವಿಶ್ವಾಸ ಮತ್ತೆ ಸಾಬೀತಾಗಿದೆ.. ಮುಂಬೈ ಗೆಲ್ಲುವ ಟ್ರ್ಯಾಕ್‌ನಲ್ಲೇ ಇತ್ತು.. ಆದ್ರೆ ಅವರ ಆಟವನ್ನು ಮುಳುಗಿಸಿದ್ದು ನಾಲ್ಕೇ ನಾಲ್ಕು ಎಸೆತಗಳು.. ಧೋನಿಯ ಬ್ಯಾಟ್‌ನಿಂದ ರಾಕೆಟ್‌ ವೇಗದಲ್ಲಿ ಬಾಲ್‌ಗಳು ಬೌಂಡರಿ ಗೆರೆಯಿಂದಾಚೆ ಹಾರಿ ಹೋಗಿದ್ದವು.. ರೋಹಿತ್‌ ಶರ್ಮಾ ಮತ್ತೆ ಹಿಟ್‌ ಮ್ಯಾನ್‌ ರೂಪ ತಾಳಿದ್ರೂ.. ದಾಖಲೆಗಳ ಮೇಲೆ ದಾಖಲೆ ಬರೆದರೂ ಧೋನಿಯ ನಾಲ್ಕು ಎಸೆತಗಳ ಆಟ ಪಂದ್ಯವನ್ನು ಮುಂಬೈ ಕೈಯಿಂದ ಕಸಿದುಕೊಂಡಿತ್ತು.. ಚೆನ್ನೈ ಈಗಲೂ ಮಾಹಿಯ ಶ್ರೀರಕ್ಷೆಯಲ್ಲೇ ಉಳ್ಕೊಂಡಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.. ಧೋನಿ ಇನ್ನೂ ಸ್ವಲ್ಪ ಬೇಗ ಕ್ರೀಸ್‌ಗಿಳಿಯುತ್ತಿದ್ದರೆ, ಗೆಲುವಿನ ಅಂತರ ಇನ್ನಷ್ಟು ಹಿಗ್ಗುವ ಅವಕಾಶ ಚೆನ್ನೈಗಿತ್ತು.. ಆದ್ರೆ ಅಂತಿಮವಾಗಿ ಮಹೀಶ ಪತಿರಾನಾ ಅದ್ಭುತ ಬೌಲಿಂಗ್‌ ನೆರವಿನೊಂದಿಗೆ ಚೆನ್ನೈ ಗೆದ್ದು ಬೀಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ರೋಚಕ ಗೆಲುವು

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೂ ಪಂದ್ಯದ ಮೇಲೆ ಮುಂಬೈ ಹಿಡಿತ ಹೊಂದಿತ್ತು.. ಓಪನರ್‌ ಆಗಿ ಬಂದಿದ್ದ ಅಜಿಂಕ್ಯಾ ರಹಾನೆ ಎರಡನೇ ಓವರ್‌ನಲ್ಲೇ ಪೆವಿಲಿಯನ್‌ಗೆ ನಡೆದ್ರು.. ಆದ್ರೆ ಕ್ಯಾಪ್ಟನ್‌ ಗಾಯಕ್ವಾಡ್‌ ಮತ್ತು ರಚಿನ್‌ ರವೀಂದ್ರ ಉತ್ತಮ ಇನ್ನಿಂಗ್‌ ಕಟ್ಟುವ ಭರವಸೆ ಮೂಡಿಸಿದ್ರು.. 7.5 ಓವರ್‌ಗಳಲ್ಲಿ ರಚಿನ್‌ ಔಟಾದಾಗ ತಂಡದ ಮೊತ್ತ ಕೇವಲ 60 ರನ್‌ ಮಾತ್ರ ಆಗಿತ್ತು.. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 183 ರನ್‌ಗಳ ಟಾರ್ಗೆಟ್‌ ಅನ್ನು ಕೇವಲ 16ನೇ ಓವರ್‌ನಲ್ಲೇ ಚೇಸ್‌ ಮಾಡಿ ಬಿಸಾಕಿದ್ದ ಮುಂಬೈಯನ್ನು ಸೋಲಿಸಬೇಕು ಅಂದ್ರೆ ಬಿಗ್‌ ಸ್ಕೋರ್‌ ಕಲೆಹಾಕಬೇಕಾದ ಅನಿವಾರ್ಯತೆಯಲ್ಲಿ ಚೆನ್ನೈ ತಂಡವಿತ್ತು.. ಗಾಯಕ್ವಾಡ್‌ ಮತ್ತು ಶಿವಂ ದುಬೆ ಕ್ರೀಸ್‌ನಲ್ಲಿದ್ದಾಗ ರನ್‌ರೇಟ್‌ಗೆ ಭಾರೀ ವೇಗ ಸಿಕ್ಕಿತ್ತು.. ಇಬ್ಬರೂ ಆಟಗಾರರು ಬೌಂಡರಿ ಸಿಕ್ಸರ್‌ ಸಿಡಿಸುತ್ತಲೇ, ನೋಡ ನೋಡುತ್ತಿದ್ದಂತೆ ಒಳ್ಳೆಯ ರನ್‌ ಕಲೆಹಾಕಲು ಶುರು ಮಾಡಿದ್ದರು.. 15.2 ಓವರ್‌ಗಳಲ್ಲಿ ಗಾಯಕ್ವಾಡ್‌ ಔಟಾಗುವಾಗ ಚೆನ್ನೈ 150 ರನ್ ಹೊಡೆದಿತ್ತು.. ಮುಂದೆ ಉಳಿದಿದ್ದು ಕೇವಲ 28 ಎಸೆತಗಳು ಮಾತ್ರ.. ಆಗ ಪ್ರೇಕ್ಷಕರು ನಿರೀಕ್ಷೆ ಮಾಡ್ತಾ ಇದ್ದಿದ್ದು ಧೋನಿ ಬ್ಯಾಟಿಂಗ್‌ಗೆ ಬರುತ್ತಾರೆ ಅಂತ.. ಧೋನಿ ಹತ್ತು ಹದಿನೈದು ಎಸೆತ ಎದುರಿಸಿದ್ದರೂ ಸಾಕಿತ್ತು.. ತಂಡಕ್ಕೆ ಕನಿಷ್ಠ 30ರಿಂದ ನಲ್ವತ್ತು ರನ್‌ ಸೇರಿಕೊಳ್ಳುವ ಸಾಧ್ಯತೆಯಿತ್ತು.. ಆದ್ರೆ ಧೋನಿ ಬದಲು ಯಥಾ ಪ್ರಕಾರ ಮಿಷಲ್‌ ಕ್ರೀಸ್‌ಗಿಳಿದಿದ್ದರು.. ಆದ್ರೆ ಮಿಷಲ್‌ ಬ್ಯಾಟಿಂಗ್‌ಗೆ ಬಂದಿದ್ದರಿಂದ ಚೆನ್ನೈ ಮತ್ತಷ್ಟು ಒತ್ತಡಕ್ಕೆ ಒಳಗಾಯಿತೇ ಹೊರತು, ಸ್ಕೋರ್‌ ಮೇಲಕ್ಕೆ ಹೋಗಲೇ ಇಲ್ಲ.. 14 ಎಸೆತ ಎದುರಿಸಿದ ಮಿಷಲ್‌ ಗಳಿಸಿದ್ದು ಕೇವಲ 17 ರನ್‌ಗಳು ಮಾತ್ರ.. ಆದ್ರೆ ಚೆನ್ನೈನ ಅದೃಷ್ಟಕ್ಕೆ ಇಪ್ಪತ್ತು ಓವರ್‌ ಮುಗಿಯಲು ಇನ್ನು ನಾಲ್ಕು ಎಸೆತಗಳು ಬಾಕಿ ಇದ್ದಾಗಲೇ ಮಿಷಲ್ ಔಟಾದರು..

ಆಗ ಬ್ಯಾಟಿಂಗ್‌ಗೆ ಇಳಿದಿದ್ದು ದಿ ಗ್ರೇಟ್‌ ಫಿನಿಶರ್‌ ಎಂ.ಎಸ್‌.ಧೋನಿ.. ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್‌ ಕೂಲ್‌ ಧೋನಿ ಕ್ರೀಸ್‌ಗಿಳಿದಾಗ ವಾಂಖೇಡೆ ಸ್ಟೇಡಿಯಂನಲ್ಲಿ 2011ರ ವಿಶ್ವಕಪ್‌ ಫೈನಲ್‌ ಪಂದ್ಯ ಗೆದ್ದ ಕ್ಷಣದಲ್ಲಿ ನಿರ್ಮಾಣವಾಗಿದ್ದಂತಹ ವಾತಾವರಣವಿತ್ತು.. ಧೋನಿ.. ಧೋನಿ ಎಂಬ ಕೂಗು ಕೇವಲ ಚೆನ್ನೈ ಫ್ಯಾನ್ಸ್‌ ಮಾತ್ರವಲ್ಲ  ಮುಂಬೈ ಫ್ಯಾನ್ಸ್‌ ಕೂಡ ಕೂಗ್ತಾ ಇದ್ರು.. ಧೋನಿ ಬ್ಯಾಟಿಂಗ್‌ ಇಳಿಯುವ ವೇಳೆಗೆ ಚೆನ್ನೈನ ಸ್ಕೋರ್‌ 186 ರನ್‌ಗಳಾಗಿದ್ದವು.. ಮುಂದಿನ ನಾಲ್ಕು ಎಸೆತಗಳಲ್ಲಿ ತಂಡಕ್ಕೆ ಅಬ್ಬಬ್ಬಾ ಅಂದ್ರೆ ಎಷ್ಟು ರನ್‌ ಬರಬಹುದು ಅಂತ ಎಲ್ಲರೂ ನೋಡ್ತಾ ಇದ್ರು.. ಸ್ಕೋರ್‌ 200 ರನ್‌ ದಾಟುತ್ತೆ ಎಂಬ ವಿಶ್ವಾಸ ಚೆನ್ನೈ ಅಭಿಮಾನಿಗಳಲ್ಲೂ ಇರಲಿಲ್ಲ.. ಆದ್ರೆ ಧೋನಿ ಮಾತ್ರ ಬೇರೆಯೇ ವಿಶ್ವಾಸದಲ್ಲಿದ್ದರು..

ಮೊದಲ ಎಸೆತವನ್ನು ರಾಕೆಟ್‌ ವೇಗದಲ್ಲಿ ಸಿಕ್ಸರ್‌ಗಟ್ಟಿದ ಧೋನಿ, ನಾನು ಬಂದಿರೋದೇ ಇದಕ್ಕೆ ಅಂತ ತೋರಿಸಿದ್ದರು.. ನಂತರ ಎರಡನೇ ಎಸೆತದಲ್ಲೂ ಸಿಕ್ಸರ್‌.. ಮೂರನೇ ಎಸೆತದಲ್ಲೂ ಸಿಕ್ಸರ್‌.. ಹೀಗೆ ಮುಂಬೈ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯಾಗೆ ಶಾಕ್‌ ಟ್ರೀಟ್‌ಮೆಂಟ್‌ ಕೊಟ್ಟು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು ಧೋನಿ.. ನಾಲ್ಕು ಎಸೆತಗಳಲ್ಲಿ ಧೋನಿ 20 ರನ್‌ ಬಾರಿಸಿದ್ದರಿಂದ ಚೆನ್ನೈ 206 ರನ್‌ ದಾಖಲಿಸುವಲ್ಲಿ ಯಶಸ್ವಿಯಾಯಿತು.. ಅಲ್ಲದೆ ಮುಂಬೈ ವಿರುದ್ಧ ಎಕ್ಸಾಕ್ಟ್‌ 20 ರನ್‌ಗಳ ಅಂತರದಲ್ಲಿ ಗೆಲ್ಲೋದಿಕ್ಕೆ ಸಾಧ್ಯವಾಯಿತು.. ಧೋನಿ ಇಲ್ದೇ ಇರುತ್ತಿದ್ದರೆ ಚೆನ್ನೈ ಕಥೆ ಏನಾಗ್ತಿತ್ತು ಎನ್ನುವುದಕ್ಕೆ ಇದೇ ಸಾಕ್ಷಿ..

ಇನ್ನು ಮುಂಬೈನ ಆರಂಭದ ಆಟ ಅಬ್ಬರದಿಂದಲೇ ಕೂಡಿತ್ತು.. ಮೊದಲ ವಿಕೆಟ್‌ಗೆ ಇಶಾಂತ್‌ ಕಿಶನ್‌ ಮತ್ತು ರೋಹಿತ್‌ ಶರ್ಮಾ ಸೇರಿ 7 ಓವರ್‌ಗಳಲ್ಲಿ 70 ರನ್‌ ಗಳಿಸಿದ್ದರು.. ಆದ್ರೆ ನಂತರ ರೋಹಿತ್‌ ಬಿಟ್ರೆ ಉಳಿದವರ್ಯಾರು ಸರಿಯಾಗ ಆಡಲೇ ಇಲ್ಲ.. ಅದರಲ್ಲೂ ಸೂರ್ಯಕುಮಾರ್‌ ಯಾದವ್‌ ಸಿಕ್ಸ್‌ ಹೊಡೆಯುವ ಭರದಲ್ಲಿದ್ದಾಗ ಮುಷ್ತಫಿಜುರ್‌ ರೆಹಮಾನ್‌ ಹಿಡಿದ ಅದ್ಭುತ ಕ್ಯಾಚ್‌ನಿಂದ ಸೊನ್ನೆಗೆ ಔಟಾದರು.. ಅಲ್ಲಿಂದ ನಂತರ ಮುಂಬೈ ಬ್ಯಾಟಿಂಗ್‌ ನೆಟ್ಟಗೆ ಆಗ್ಲಿಲ್ಲ.. ತಿಲಕ್‌ ವರ್ಮಾ ಸ್ವಲ್ಪ ಭರವಸೆ ಮೂಡಿಸುವ ರೀತಿಯಲ್ಲಿ ರೋಹಿತ್‌ಗೆ ಸಾಥ್‌ ಕೊಟ್ಟರೂ ಉಳಿದವರಿಂದ ಹೇಳಿಕೊಳ್ಳುವ ಆಟ ಬರಲಿಲ್ಲ.. ಜೊತೆಗೆ ಮಹೀಶ ಪತಿರನ ಅದ್ಭುತ ಬೌಲಿಂಗ್‌ನಿಂದಾಗಿ ಮುಂಬೈ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸುವುದೇ ಕಷ್ಟವಾಯ್ತು.. ಆದ್ರೆ ಮತ್ತೊಂದು ಎಂಡ್‌ನಲ್ಲಿ ರೋಹಿತ್‌ ಮಾತ್ರ ಕೂಲಾಗಿಯೇ ಆಟವಾಡುತ್ತಾ ಸೆಂಚುರಿ ಬಾರಿಸಿದ್ರು.. ತಂಡವನ್ನು ಗೆಲ್ಲಿಸಲು ಬೇಕಾದ ಎಲ್ಲಾ ಪ್ರಯತ್ನ ರೋಹಿತ್‌ ಮಾಡ್ತಿದ್ದರೆ, ಅವರಿಗೆ ಉತ್ತಮ ಸಾಥ್‌ ತಂಡದ ಇತರೆ ಆಟಗಾರರಿಂದ ಸಿಗಲೇ ಇಲ್ಲ.. ಇನ್ನು ರೋಹಿತ್‌ ಈ ಪಂದ್ಯದ ಮೂಲಕ ಹಲವು ದಾಖಲೆ ಕೂಡ ಬರೆದರು.. ಮುಂಬೈ ಪರವಾಗಿ ಐಪಿಎಲ್‌ನಲ್ಲಿ ಎರಡು ಸೆಂಚುರಿ ಬಾರಿಸಿದ ಏಕೈಕ ಆಟಗಾರ ಎಂಬ ದಾಖಲೆ ರೋಹಿತ್‌ ಹೆಸರಿಗೆ ಸೇರಿಕೊಂಡಿದೆ.. ಅಲ್ಲದೆ ಟಿ20ಯಲ್ಲಿ 500 ಸಿಕ್ಸ್‌ ಹೊಡೆದ ಏಕೈಕ ಭಾರತೀಯ ಬ್ಯಾಟ್ಸ್‌ಮನ್‌ ಕೂಡ ಈಗ ರೋಹಿತ್‌ ಶರ್ಮಾ.. ಆ ಮೂಲಕ ತನ್ನನ್ನು ಅಭಿಮಾನಿಗಳು ಹಿಟ್‌ ಮ್ಯಾನ್‌ ಎಂದು ಕರೆಯುವುದು ಯಾಕೆ ಎಂದು ರೋಹಿತ್‌ ತೋರಿಸಿಕೊಟ್ಟಿದ್ದಾರೆ.. ಇಷ್ಟಕ್ಕೂ 500ಕ್ಕಿಂತ ಹೆಚ್ಚು ಸಿಕ್ಸ್‌ ಬಾರಿಸಿದವರಲ್ಲಿ ಮೂವರು ವೆಸ್ಟಿಂಡೀಸ್‌ ಪ್ಲೇಯರ್‌ಗಳೇ ಇದ್ದಾರೆ.. ಅದರಲ್ಲೂ ಟಿ20 ಬಾಸ್‌.. ಕ್ರಿಸ್‌ ಗೇಲ್‌.. 1056 ಸಿಕ್ಸರ್‌ಗಳನ್ನು ಹೊಡೆದಿದ್ದು ಯಾರೂ ಮುರಿಯಲು ಸಾಧ್ಯವಾಗದಷ್ಟು ದೂರದಲ್ಲಿ ತಮ್ಮ ದಾಖಲೆಯನ್ನಿಟ್ಟಿದ್ದಾರೆ.. 500ಕ್ಕಿಂತ ಹೆಚ್ಚು ಸಿಕ್ಸರ್‌ ಹೊಡೆದವರಲ್ಲಿ ಈಗ ರೋಹಿತ್‌ ಶರ್ಮಾ ಐದನೆಯವರು.. ಇನ್ನು ಚೆನ್ನೈ ಹಾಗೂ ಮುಂಬೈನ ಮುಖಾಮುಖಿಯಲ್ಲಿ ಅತಿಹೆಚ್ಚು ರನ್‌ ಹೊಡೆದವರ ಸಾಲಿನಲ್ಲಿ ಮೂರನೇ  ಸ್ಥಾನದಲ್ಲಿದ್ದ ರೋಹಿತ್‌, ಈ ಸೆಂಚುರಿಯ ಮೂಲಕ ಸುರೇಶ್‌ ರೈನಾ ಹಾಗೂ ಎಂ.ಎಸ್‌.ಧೋನಿಯನ್ನು ಹಿಂದಿಕ್ಕಿ ನಂಬರ್‌ 1 ಸ್ಥಾನಕ್ಕೆ ಬಂದು ನಿಂತಿದ್ದಾರೆ.. ಹೀಗೆ ಮೂರು ಪ್ರಮುಖ ದಾಖಲೆಗಳನ್ನು ನಿರ್ಮಿಸಿದ ರೋಹಿತ್‌, ಟಿ20ಯಲ್ಲಿ ಒಟ್ಟು 8 ಸೆಂಚುರಿ ಬಾರಿಸಿ ವಿಶ್ವಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.. ಹೀಗೆ ದಾಖಲೆಗಳ ಮೇಲೆ ದಾಖಲೆ ಬರೆದ ರೋಹಿತ್‌ ಶರ್ಮಾ, ಮುಂದಿನ ಟಿ20 ವಿಶ್ವಕಪ್‌ಗೆ ಭರ್ಜರಿಯಾಗಿಯೇ ತಯಾರಾಗಿದ್ದೇನೆ ಎನ್ನುವುದನ್ನು ತೋರಿಸಿದ್ದಾರೆ.. ಅದರಲ್ಲೂ ಚೆನ್ನೈನ ವರ್ಲ್ಡ್‌ ಕ್ಲಾಸ್‌ ಬೌಲರ್‌ಗಳ ಎದುರು ಉತ್ತಮ ಬ್ಯಾಟಿಂಗ್ ಪ್ರಾಕ್ಟೀಸ್‌ ಮಾಡಿರುವ ರೋಹಿತ್‌ ಆಟ ಎಲ್ಲರ ಮನಗೆದ್ದಿದೆ.. ಆದ್ರೆ ಈ ಪಂದ್ಯದಲ್ಲಿ ಧೋನಿ ಆಡಿದ ವೈಖರಿ ಮಾತ್ರ ಎಂಎಸ್‌ಗೆ ವಯಸ್ಸೇ ಆಗಲ್ಲ ಎಂದು ತೋರಿಸಿಕೊಟ್ಟಿದೆ. ಮೊದಲು ಬ್ಯಾಟ್‌ ಮಾಡೋದು ಇರಲಿ.. ಚೇಸ್‌ ಮಾಡೋದು ಇರಲಿ.. ಧೋನಿ ಮಾತ್ರ ಗ್ರೇಟೆಸ್ಟ್‌ ಫಿನಿಷರ್‌ ಎಂದು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ.. ರೋಹಿತ್‌ ಸೆಂಚುರಿಯೂ ಧೋನಿಯ ಈ ಅಬ್ಬರ ಮುಂದೆ ಸ್ವಲ್ಪ ಮಂಕಾಗಿದ್ದು ಸುಳ್ಳಲ್ಲ.

Sulekha