ಅಭಿಮಾನಿಗಳ ಮನಗೆದ್ದ ಶಾಕುಂತಲೆ – ಸಮಂತಾ ಅಭಿನಯಕ್ಕೆ ಫ್ಯಾನ್ಸ್ ಫಿದಾ

ಅಭಿಮಾನಿಗಳ ಮನಗೆದ್ದ ಶಾಕುಂತಲೆ – ಸಮಂತಾ ಅಭಿನಯಕ್ಕೆ ಫ್ಯಾನ್ಸ್ ಫಿದಾ

ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ‘ಶಾಕುಂತಲಂ’ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಿದೆ. ಪೌರಾಣಿಕ ಪಾತ್ರದ ಮೂಲಕ ನಟಿ ಸಮಂತಾ ರುತ್ ಪ್ರಭು ಅಭಿಮಾನಿಗಳ ಮನಗೆದ್ದಿದ್ದಾರೆ. ಸಿನಿಮಾದಲ್ಲಿ ಶಾಕುಂತಲೆಯಾಗಿ ಕಾಣಿಸಿಕೊಂಡಿರುವ ಸಮಂತಾ ಪಾತ್ರ ಮತ್ತು ನಟನೆ ಅಭಿಮಾನಿಗಳಿಗೆ ಇಷ್ಟ ಆಗಿದೆ.

ಇದನ್ನೂ ಓದಿ: ಶಾಕುಂತಲೆಯಾದ ಸುಂದರಿ ಸಮಂತಾ  – ಟಾಲಿವುಡ್ ಬ್ಯೂಟಿ ಲುಕ್​ಗೆ ಫ್ಯಾನ್ಸ್ ಫಿದಾ..!

ಇತ್ತೀಚಿನ ವರ್ಷಗಳಲ್ಲಿ ಆ್ಯಕ್ಷನ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟಿ ಸಮಂತಾ ರುತ್ ಪ್ರಭು ಅವರು ಈ ಬಾರಿ ಪೌರಾಣಿಕ ಕಥೆ ಆಯ್ದುಕೊಂಡಿದ್ದಾರೆ. ಸಂಸ್ಕೃತದ ನಾಟಕ ‘ಅಭಿಜ್ಞಾನ ಶಾಕುಂತಲಂ’ ಆಧರಿಸಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿದೆ. ಶಾಕುಂತಲೆ ಹಾಗೂ ರಾಜ ದುಶ್ಯಂತ ಮಧ್ಯೆ ಪ್ರೀತಿ ಹುಟ್ಟುತ್ತದೆ. ಇದರ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರವನ್ನು ಗುಣಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ಅವರು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಮಂತಾ ನಟನೆ ಜನರಿಗೆ ಇಷ್ಟವಾಗಿದೆ. ನಟಿ ಸಮಂತಾ ರುತ್ ಪ್ರಭು ಅವರದ್ದು ಅದ್ಭುತ ಅಭಿನಯ. ಮೋಹನ್ ಬಾಬು, ಜಿಶ್ಶು ಸೇನ್ಗುಪ್ತಾ, ಗೌತಮಿ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದುಶ್ಯಂತ ರಾಜನಾಗಿ ದೇವ್ ಮೋಹನ್ ಗಮನ ಸೆಳೆದಿದ್ದಾರೆ. ಸಿನಿಮಾದ ಗ್ರಾಫಿಕ್ಸ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ‘ಇದು ಎಪಿಕ್. ಕಾಳಿದಾಸ ಕಾವ್ಯ ನನಗೆ ಸ್ಫೂರ್ತಿ ನೀಡಿದೆ. ಸಮಂತಾ ನಟನೆ ಎಕ್ಸಲೆಂಟ್. ದೇವ್ ಮೋಹನ್ ಹಾಗೂ ವಿಎಫ್ಎಕ್ಸ್ ಉತ್ತಮವಾಗಿದೆ. ಒಂದೊಳ್ಳೆಯ ಸಿನಿಮಾ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ಇನ್ನೂ ಕೆಲವರು ಸಿನಿಮಾ ಬಗ್ಗೆ ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ.

suddiyaana