ಮಾಸ್ ಆ್ಯಂಡ್ ಕ್ಲಾಸ್ ಲುಕ್‌ನಲ್ಲಿ ಮೆಗಾಸ್ಟಾರ್ ಜಿರಂಜೀವಿ – ‘ಭೋಲಾ ಶಂಕರ್’ ಸಿನಿಮಾದ ಟ್ರೇಲರ್‌ಗೆ ಫ್ಯಾನ್ಸ್ ಫಿದಾ

ಮಾಸ್ ಆ್ಯಂಡ್ ಕ್ಲಾಸ್ ಲುಕ್‌ನಲ್ಲಿ ಮೆಗಾಸ್ಟಾರ್ ಜಿರಂಜೀವಿ – ‘ಭೋಲಾ ಶಂಕರ್’ ಸಿನಿಮಾದ ಟ್ರೇಲರ್‌ಗೆ ಫ್ಯಾನ್ಸ್ ಫಿದಾ

ಟಾಲಿವುಡ್‌ನ ಬಹುನಿರೀಕ್ಷೆಯ ‘ಭೋಲಾ ಶಂಕರ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಆ್ಯಕ್ಷನ್, ಎಮೋಷನ್, ಕಾಮಿಡಿ ದೃಶ್ಯಗಳಿರುವ ಟ್ರೇಲರ್‌ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಮನಗೆದ್ದಿದೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೇಲರ್ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಕೂಡ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್..!

ಆ್ಯಕ್ಷನ್ ಹಾಗೂ ಕಾಮಿಡಿ ಶೈಲಿಯಲ್ಲಿ ‘ಭೋಲಾ ಶಂಕರ್’ ಟ್ರೇಲರ್ ಮೂಡಿ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಮಾಸ್ ಡೈಲಾಗ್ ಮತ್ತು ಆ್ಯಕ್ಷನ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಕೂಡ ಗಮನ ಸೆಳೆಯುತ್ತಿದೆ. ‘ನನ್ನ  ಹಿಂದೆ ಮಾಫಿಯಾ ಇದೆ’ ಎಂದು ರವಿಶಂಕರ್ ಹೇಳುತ್ತಾರೆ. ‘ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ’ ಎಂದು ರವಿಶಂಕರ್‌ಗೆ ತಿರುಗೇಟು ನೀಡುವ ಚಿರು ಡೈಲಾಗ್ ಕೂಡಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ ಆ್ಯಂಡ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ವೆನ್ನೆಲ ಕಿಶೋರ್ ಕೂಡ ಟ್ರೇಲರ್‌ನಲ್ಲಿ ಗಮನ ಸೆಳೆದಿದ್ದಾರೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ತಮನ್ನಾ ನಾಯಕಿಯಾಗಿ ನಟಿಸಿದ್ದಾರೆ. ಕೀರ್ತಿ ಸುರೇಶ್ ನಾಯಕನ ತಂಗಿಯ ಪಾತ್ರ  ನಿರ್ವಹಿಸಿದ್ದಾರೆ. ಚಿತ್ರ ಆಗಸ್ಟ್ 11ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸದ್ಯ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ ಟ್ರೇಲರ್.

suddiyaana