ಜೇಡ ಕಚ್ಚಿದ್ದರಿಂದ ಖ್ಯಾತ ಗಾಯಕ ವಿಧಿವಶ – 28 ವರ್ಷಕ್ಕೆ ಬದುಕಿನ ಗಾನ ನಿಲ್ಲಿಸಿದ ಫೇಮಸ್ ಸಿಂಗರ್

ಜೇಡ ಕಚ್ಚಿದ್ದರಿಂದ ಖ್ಯಾತ ಗಾಯಕ ವಿಧಿವಶ – 28 ವರ್ಷಕ್ಕೆ ಬದುಕಿನ ಗಾನ ನಿಲ್ಲಿಸಿದ ಫೇಮಸ್ ಸಿಂಗರ್

15ನೇ ವರ್ಷಕ್ಕೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ. ಈಗಿನ್ನೂ ಕೇವಲ 28 ವರ್ಷವಷ್ಟೇ. ಸಂಗೀತಲೋಕದಲ್ಲಿ ಸಾಧನೆ ಮಾಡುವುದು ಬೆಟ್ಟದಷ್ಟು ಇತ್ತು. ಕನಸು ಕೂಡಾ ಸಾಗರದಷ್ಟು ಇತ್ತು. ಆದರೆ, ವಿಧಿಯಾಟದ ಮುಂದೆ ಎಲ್ಲರೂ ತಲೆಬಾಗಲೇಬೇಕು. ಸಾವಿನ ರೂಪದಲ್ಲಿ ಬಂದ ಜೇಡವೊಂದು ಗಾಯಕನ ಬದುಕನ್ನೇ ಮುಗಿಸಿಬಿಟ್ಟಿತ್ತು.

ಇದನ್ನೂ ಓದಿ:ಹುಲಿ ಉಗುರು ಪ್ರಕರಣ, ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳದ ದರ್ಶನ್ – ನಟಿ ಪವಿತ್ರಗೌಡ ಮಗಳ ಬರ್ತ್‌ಡೇನಲ್ಲಿ ಫುಲ್ ಡ್ಯಾನ್ಸ್

ಬ್ರೆಜಿಲಿಯನ್ ಗಾಯಕ ಡಾರ್ಲಿನ್ ಮೊರೈಸ್ ಇನ್ನಿಲ್ಲ. ಕೇವಲ 28 ವರ್ಷದಲ್ಲೇ ಸಂಗೀತ ಲೋಕವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಮೊರೈಸ್ ಅವರ ಮುಖಕ್ಕೆ ಜೇಡವೊಂದು ಕಚ್ಚಿತ್ತು. ಇದರಿಂದ ಅವರ ದೇಹದಲ್ಲಿ ಬದಲಾವಣೆ ಕಂಡು ಬರಲು ಆರಂಭವಾಯಿತು. ಜೇಡ ಕಚ್ಚಿದ ದಿನವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೂಡ ಪಡೆದಿದ್ದರು. ಮನೆಗೆ ಬಂದ ಬಳಿಕ ತೀವ್ರ ಆಯಾಸದಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಅವರ ದೇಹದ ಬಣ್ಣ ಕೂಡ ಬದಲಾಗುತ್ತಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 3ರಂದು ಸಂಪೂರ್ಣ ಗುಣಮುಖವಾಗಿದ್ದರು ಎಂಬ ಸುದ್ದಿ ಕೇಳಿ ಗಾಯಕನ ಅಭಿಮಾನಿಗಳು ಸಂತಸಪಟ್ಟಿದ್ದರು. ಆದರೆ, ಮೊರೈಸ್ ಅಂದು ಸಾವನ್ನು ಗೆದ್ದು ಬಂದಿದ್ದರೂ ಆ ಖುಷಿ ಬರೀ ಕೆಲ ದಿನಗಳಿಗಷ್ಟೇ ಸೀಮಿತವಾಗಿತ್ತು. ಮೊರೈಸ್ ಅವರ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುತ್ತಿದ್ದಂತೆ ಭಾನುವಾರ ಅವರನ್ನು ಪಾಲ್ಮಾಸ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಕೂಡಾ ಗಾಯಕನನ್ನು ಉಳಿಸಲು ಸತತ ಪ್ರಯತ್ನಪಟ್ಟರೂ ಕೂಡಾ ಸೋಮವಾರ ಅವರು ವಿಧಿವಶರಾದರು. ಮೊರೈಸ್ ಅವರ ಪತ್ನಿ ಜುಲ್ಲಿಯೆನ್ನಿ ಲಿಸ್ಬೋವಾ ಅವರೇ ಈ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದರು.

ಅತೀ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಧುಮುಕಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ಗಾಯಕ ಡಾರ್ಲಿನ್ ಮೊರೈಸ್ ಜೇಡ ಕಚ್ಚಿದ್ದರಿಂದ ಸಾವನ್ನಪ್ಪಿದ್ದು ನಿಜಕ್ಕೂ ವಿಪರ್ಯಾಸವೇ.

ಡಾರ್ಲಿನ್ ಮೊರೈಸ್ ಜಬುಂಬಾ ಸೇರಿದಂತೆ ಹಲವು ವಾದ್ಯಗಳನ್ನು ನುಡಿಸುತ್ತಿದ್ದರು. ವಾದ್ಯ ಮತ್ತು ಹಾಡಿನ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಅಗಲಿದ ನೆಚ್ಚಿನ ಗಾಯಕನಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಅವರ 18 ವರ್ಷದ ಮಲ ಮಗಳಿಗೂ ಜೇಡ ಕಚ್ಚಿದೆ. ಮಲಮಗಳ ಪಾದಕ್ಕೆ ಜೇಡ ಕಚ್ಚಿದ್ದು, ಆಕೆಯನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Sulekha