ಅಭಿಮಾನಿಗಳಿಗೆ ಶಾಕ್ ಕೊಟ್ಟ ಅರಿಜಿತ್ ಸಿಂಗ್ – ಹಾಡು ನಿಲ್ಲಿಸಿದ ಖ್ಯಾತ ಗಾಯಕ ಅರಿಜಿತ್ ಸಿಂಗ್

ಖ್ಯಾತ ಗಾಯಕ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಅರಿಜಿತ್ ಸಿಂಗ್ ಹಾಡುವುದನ್ನೇ ನಿಲ್ಲಿಸುವುದಾಗಿ ದಿಢೀರ್ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಮಲ್ಲಮ್ಮಗೆ ಖುಲಾಯಿಸಿತು ಅದೃಷ್ಠ! – ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಸಿಕ್ಕಿತು ಚಾನ್ಸ್!
ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಗಾಯಕ ಅರಿಜಿತ್ ಸಿಂಗ್ ಅವರು ಏಕಾಏಕಿ ನಿವೃತ್ತಿ ಘೋಷಿಸಿದ್ದಾರೆ. ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಅರಿಜಿತ್ ಸಿಂಗ್ ಅವರು ನಿವೃತ್ತಿ ಘೋಷಿಸಿರುವುದು ಏಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅರಿಜಿತ್ ಸಿಂಗ್ ಅವರು ಸೋಶಿಯಲ್ ಮೀಡಿಯಾ ಮೂಲಕ ಈ ನಿರ್ಧಾರ ತಿಳಿಸಿದ್ದಾರೆ. ‘ಇದನ್ನು ನಿಲ್ಲಿಸುತ್ತಿದ್ದೇನೆ. ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಪ್ರಯಾಣ ಅದ್ಭುತವಾಗಿತ್ತು’ ಎಂದು ಅರಿಜಿತ್ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.
‘ದೇವರು ನನಗೆ ಕರುಣಾಮಯನಾಗಿದ್ದ. ನಾನು ಒಳ್ಳೆಯ ಸಂಗೀತದ ಅಭಿಮಾನಿ. ಮುಂದಿನ ದಿನಗಳಲ್ಲಿ ಹೆಚ್ಚು ಕಲಿಯುತ್ತೇನೆ. ಚಿಕ್ಕ ಕಲಾವಿದನಾಗಿ ಇನ್ನಷ್ಟು ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಈಗಾಗಲೇ ಒಪ್ಪಿಕೊಂಡ ಕೆಲಸಗಳನ್ನು ನಾನು ಮುಗಿಸಬೇಕಿದೆ. ಅವುಗಳನ್ನು ಪೂರ್ಣಗೊಳಿಸುತ್ತೇನೆ. ಹಾಗಾಗಿ ಈ ವರ್ಷ ನಿಮಗೆ ಕೆಲವು ಹೊಸ ಹಾಡುಗಳು ಸಿಗುತ್ತವೆ. ಆದರೆ ಒಂದು ಸ್ಪಷ್ಟನೆ, ಸಂಗೀತದ ಕೆಲಸವನ್ನು ನಾನು ನಿಲ್ಲಿಸುವುದಿಲ್ಲ’ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.
ಕನ್ನಡದಲ್ಲಿ ಬಂದ ನಿನ್ನಿಂದಲೇ ಹಾಡಿಗೆ ಅರಿಜಿತ್ ಸಿಂಗ್ ಅವರು ಧ್ವನಿಯಾಗಿದ್ದರು. 38 ವರ್ಷದ ಗಾಯಕ ಅರಿಜಿತ್ ಸಿಂಗ್ ಅವರ ಕಂಠದಲ್ಲಿ ಮೂಡಿ ಬಂದಿರುವ ಅಗರ್ ತುಮ್ ಸಾಥ್ ಹೋ, ಲೆಹರಾ ದೋ, ಹಮಾರಿ ಅಧುರಿ ಕಹಾ ಸೇರಿದಂತೆ ಅನೇಕ ಹಾಡುಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.

ನೋಡಿರಿ

