ಹೆಂಡ್ತಿ ಹೊಡಿತಾಳೆ ಎಂದು ದೂರು ಕೊಟ್ಟ ಕನ್ನಡದ ಖ್ಯಾತ ನಟ- ಪೊಲೀಸ್ ಠಾಣೆ ಮೆಟ್ಟಿಲೇರಿದ ನಟನ ಸಂಸಾರದ ಗೋಳು

ಹೆಂಡ್ತಿ ಹೊಡಿತಾಳೆ ಎಂದು ದೂರು ಕೊಟ್ಟ ಕನ್ನಡದ ಖ್ಯಾತ ನಟ- ಪೊಲೀಸ್ ಠಾಣೆ ಮೆಟ್ಟಿಲೇರಿದ ನಟನ ಸಂಸಾರದ ಗೋಳು

ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ ನಟ ಧನುಷ್ ರಾಜ್ ಈಗ ತನ್ನನ್ನು ಹೆಂಡತಿಯಿಂದ ರಕ್ಷಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಹೆಂಡತಿಯ ಕಾಟ ತಾಳಲಾರದೇ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ ಧನುಷ್. ಮತ್ತೊಂದೆಡೆ ಪತ್ನಿ ಕೂಡಾ ನಟನ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ:ದಾಸನಿಗೆ ಜೈಲಿನಲ್ಲಿ ಸಾಲು ಸಾಲು ಸಂಕಷ್ಟ! – ಕೋರ್ಟ್‌ ಆದೇಶವಿದ್ರೂ ದರ್ಶನ್‌ಗೆ ಮನೆಯ ಬ್ಲಾಂಕೆಟ್‌ ಸಿಗಲ್ಲ!  

ಕನ್ನಡದ ಶಿವಾಜಿ ಸುರತ್ಕಲ್ ಚಿತ್ರದ ನಟ ಧನುಷ್ ರಾಜ್​​ ಪತ್ನಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಮೇಲೆ ಹೆಂಡತಿ ಅನುಮಾನ ಪಡುತ್ತಾಳೆ. ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ನಟ ಧನುಷ್​ ರಾಜ್ ಗಿರಿನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ನಟನ ಪತ್ನಿ ಕೂಡ ಪ್ರತಿದೂರು ನೀಡಿದ್ದಾರೆ.  ಒಂಭತ್ತು ತಿಂಗಳ ಹಿಂದಷ್ಟೇ ಧನುಷ್ ಹಾಗೂ ಅಶ್ರಿತಾ ಮದುವೆಯಾಗಿದ್ದರು.

ನಟ ಧನುಷ್​ ರಾಜ್​,  ನಾನು ಸುಳ್ಳು ಹೇಳಿ ಬೇರೆ ಯುವತಿ ಜೊತೆ ವಿದೇಶಕ್ಕೆ ಹೋಗಿದ್ದೆ ಎಂದು ಹೆಂಡತಿ ನನಗೆ ಹೊಡೆದಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ವಿದೇಶಕ್ಕೆ ಹೋಗಿದ್ದ ನಟ ಧನುಷ್ ರಾಜ್. ಕೆಲ ದಿನಗಳ ಹಿಂದಷ್ಟೇ ವಾಪಾಸ್ ಆಗಿದ್ದಾರೆ. ಬಂದ ಮೇಲೆ ಪತ್ನಿ ಅಶ್ರಿತಾ ಗೂಂಡಗಳ ಜೊತೆ ಸೇರಿಕೊಂಡು ಹಲ್ಲೆ ನಡೆಸಿ, ಕೊಲೆ ಮಾಡೋದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಧನುಷ್ ದೂರು ಕೊಟ್ಟಿದ್ದಾರೆ. ಇನ್ನು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದೆ ಎಂದು ನಟ ಧನುಷ್ ರಾಜ್ ಹೇಳಿದ್ರೂ ನಂಬದ ಪತ್ನಿ ಅಶ್ರಿತಾ, ಗಂಡನ ಮೇಲೆ ಅಕ್ರಮ ಸಂಬಂಧದ ಆರೋಪ ಮಾಡಿದ್ದು, ಇಷ್ಟೇ ಅಲ್ಲದೇ ಬಾತ್ ರೂಮಿನ ಗಾಜು ಹೊಡೆದು ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಳು ಎಂದು ನಟ ಆರೋಪಿಸಿದ್ದಾರೆ. ಇತ್ತ ಗಂಡನ ವಿರುದ್ಧ ಪತ್ನಿ ಅಶ್ರಿತಾ ಕೂಡಾ ಪ್ರತಿದೂರು ನೀಡಿದ್ದಾರೆ. ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ಕೊಟ್ಟಿದ್ದು, ನಟ ಧನುಷ್​ ರಾಜ್​ ವರದಕ್ಷಿಣೆ ಕಿರುಕುಳ ನೀಡಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.

Sulekha