ಫೇಮಸ್ ಬಾಡಿ ಬಿಲ್ಡರ್ ದುರಂತ ಸಾವು! – ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಗಳಿಸಬೇಕೆಂಬ ಹುಚ್ಚೇ ಮುಳುವಾಯ್ತಾ?
ಆಕೆ ಫೇಮಸ್ ಬಾಡಿ ಬಿಲ್ಡರ್. ಚಿಕ್ಕವಯಸ್ಸಿನಿಂದಲೇ ಬಾಡಿ ಬಿಲ್ಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಆಕೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರೀಯವಾಗಿದ್ದಳು. ಆದ್ರೆ ಇದೀಗ ಆಕೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.
ನ್ಯೂಜಿಲೆಂಡ್‌ನ ಖ್ಯಾತ ಬಾಡಿಬಿಲ್ಡರ್ ಮಹಿಳೆ ರೇಚೆಲ್ ಚೇಸ್ ತನ್ನ 41 ನೇ ವಯಸ್ಸಿನಲ್ಲಿ ನಿಧನರಾಗಿದ್ದಾಳೆ. 5 ಮಕ್ಕಳ ತಾಯಿಯಾಗಿದ್ದ ಚೇಸ್ ಫೇಸ್‌ಬುಕ್‌ನಲ್ಲಿ 1.4 ಮಿಲಿಯನ್ ಫಾಲೋವರ್ಸ್‌ಗಳನ್ನ ಹೊಂದಿದ್ದಳು. ಸದ್ಯ ಆಕೆ ಸಾವನ್ನಪ್ಪಿರುವುದಾಗಿ ಮಗಳು ಸ್ಪರ್ಶ ತಿಳಿಸಿದ್ದಾರೆ. ಆಕೆಯ ಸಾವಿಗೆ ಕಾರಣವೇನು ಎಂಬುವುದು ಇನ್ನು ತಿಳಿದುಬಂದಿಲ್ಲ. ನ್ಯೂಜಿಲೆಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ ಕಣಕ್ಕಿಳಿದ ಅಮೆರಿಕ – ಉಗ್ರರ ಕ್ಷಿಪಣಿಗಳನ್ನ ಹೊಡೆದುರುಳಿಸಿದ ಯುಎಸ್ ಕ್ಷಿಪಣಿಗಳು
ಇನ್ನೂ ಈ ಬಗ್ಗೆ ಮಾತನಾಡಿರುವ ಮಗಳು ಸ್ಪರ್ಶ, ಹೆಚ್ಚು ಅಭಿಮಾನಿಗಳನ್ನು ಗಳಿಸಬೇಕೆಂಬ ಹುಚ್ಚು ಅವರಿಗಿತ್ತು. ವಿಶ್ವದಾದ್ಯಂತ ಲಕ್ಷಾಂತರ ಜನರು ನನ್ನ ಅಮ್ಮನ ಬಾಡಿಬಿಲ್ಟಿಂಗ್‌ನಿಂದ ಪ್ರೇರಣೆ ಪಡೆದಿದ್ದರು. ಆದ್ರೆ ಅಮ್ಮನನ್ನು ಕಳೆದುಕೊಂಡಿರುವುದು ತುಂಬಾ ದುಃಖವಾಗುತ್ತಿದೆ. ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ ಎಂದು ಹೇಳಿದ್ದಾಳೆ.
ರೇಚೆಲ್ ಚೇಸ್, ಕ್ರಿಸ್ ಚೇಸ್ ಎಂಬಾತನನ್ನ ಮದುವೆಯಾಗಿದ್ದಳು. ಆದ್ರೆ ಪತಿ ಕ್ರಿಸ್ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, 10 ವರ್ಷಗಳ ಕಾಲ ಜೈಲಿನಲ್ಲಿದ್ದರು. ಹಾಗಾಗಿ ಪತಿಗೆ 2016 ರಲ್ಲಿ ಡಿವೋರ್ಸ್ ನೀಡಿದರು ಎಂದು ಮೂಲಗಳು ತಿಳಿಸಿವೆ.
ಇನ್ನೂ ಚಿಕ್ಕವಯಸ್ಸಿನಿಂದಲೇ ಬಾಡಿ ಬಿಲ್ಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ರೇಚಲ್ ಚೇಸ್ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದಿದ್ದಳು. 2011 ರಲ್ಲಿ, ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಒಲಂಪಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನ್ಯೂಜಿಲೆಂಡ್‌ನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಳು.