ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ – ಬ್ಯಾಡ್ಮಿಂಟನ್ ಬೆಡಗಿ ವಿದಾಯ ಹೇಳು ಕಾರಣವೇನು ಗೊತ್ತಾ?

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಬ್ಯಾಡ್ಮಿಂಟನ್ ಅಂಗಳಕ್ಕೆ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ: KL ಕಡೆಗಣಿಸಿ ಕೆಟ್ಟ BCCI – ಗಿಲ್ ಗೆ ಕ್ಯಾಪ್ಟನ್ಸಿ ಕೊಟ್ಟಿದ್ದೇ ತಪ್ಪಾ?
ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಬ್ಯಾಡ್ಮಿಂಟನ್ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ಎರಡು ವರ್ಷಗಳ ಹಿಂದೆಯೇ ಆಟವಾಡುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವುದರ ಕಾರಣ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ ಆಟದಿಂದ ದೂರವಿದ್ದರು. ಇದೀಗ ಅಧಿಕೃತವಾಗಿ ಬ್ಯಾಡ್ಮಿಂಟನ್ ಅಂಗಳದಿಂದ ನಿವೃತ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ನೆಹ್ವಾಲ್ ಅವರು 2023ರ ಸಿಂಗಾಪುರ ಓಪನ್ ನಲ್ಲಿ ಕೊನೆಯದಾಗಿ ಆಡಿದ್ದರು. ಅದಾದ ಬಳಿಕ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿರಲಿಲ್ಲ. ಇನ್ನು ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ ನೆಹ್ವಾಲ್ ಅವರು, ಕ್ರೀಡೆಯನ್ನು ನಾನು ನನ್ನ ಇಚ್ಛೆಯಂತೆ ಪ್ರವೇಶಿಸಿದೆ, ಹಾಗೆಯೇ ನನ್ನ ಇಚ್ಛೆಯಂತೆ ಬಿಡುತ್ತಿದ್ದೇನೆ. ಆದ್ದರಿಂದ ಪ್ರತ್ಯೇಕ ವಿದಾಯ ಘೋಷಣೆ ಮಾಡುವ ಅಗತ್ಯ ನನಗೆ ತೋರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಮೊಣಕಾಲಿನ ತೀವ್ರ ನೋವು ಮತ್ತು ಸಂಧಿವಾತದ ಸಮಸ್ಯೆಯಿಂದಾಗಿ ನಿರಂತರ ಹಾಗೂ ಹೆಚ್ಚಿನ ತೀವ್ರತೆಯ ತರಬೇತಿ ಸಾಧ್ಯವಾಗದ ಕಾರಣ ಈ ನಿರ್ಧಾರ ಅನಿವಾರ್ಯವಾಯಿತು ಎಂದು ನೆಹ್ವಾಲ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೇ ಗಾಯಗಳೊಂದಿಗೆ ಕಾಲ ಕಳೆದ ಸೈನಾ, ವೈದ್ಯಕೀಯ ಪರೀಕ್ಷೆಗಳ ಬಳಿಕ ತಮ್ಮ ಮೊಣಕಾಲಿನ ಕಾರ್ಟಿಲೆಜ್ ಸಂಪೂರ್ಣವಾಗಿ ಕ್ಷೀಣಿಸಿದೆ ಎಂಬ ಮಾಹಿತಿ ದೊರಕಿದ್ದಾಗಿ ತಿಳಿಸಿದ್ದಾರೆ. ನಿಮ್ಮ ಮೊಣಕಾಲಿನ ಕಾರ್ಟಿಲೆಜ್ ಸಂಪೂರ್ಣವಾಗಿ ನಾಶವಾಗಿದೆ. ನಿಮಗೆ ಸಂಧಿವಾತವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯ ನನ್ನ ಹೆತ್ತವರಿಗೆ, ನನ್ನ ತರಬೇತುದಾರರಿಗೂ ತಿಳಿದಿದ್ದೇನೆ ಎಂದಿದ್ದಾರೆ.
ನನ್ನ ನಿವೃತ್ತಿ ಘೋಷಿಸುವುದು ಅಷ್ಟು ದೊಡ್ಡ ವಿಷಯ ಎಂದು ನಾನು ಭಾವಿಸಲಿಲ್ಲ. ನನ್ನ ಸಮಯ ಮುಗಿದಿದೆ ಎಂಬುದನ್ನು ನಾನು ಸ್ವತಃ ಅರಿತುಕೊಂಡಿದ್ದೆ. ನಾನು ನನ್ನ ದೇಹವನ್ನು ಹಿಂದಿನಂತೆ ತಳ್ಳಲು ಸಾಧ್ಯವಾಗಲಿಲ್ಲ ಎಂದು ನೆಹ್ವಾಲ್ ಹೇಳಿದ್ದಾರೆ. ಸೈನಾ ನೆಹ್ವಾಲ್ ಅವರ ನಿವೃತ್ತಿಯೊಂದಿಗೆ, ಭಾರತೀಯ ಬ್ಯಾಡ್ಮಿಂಟನ್ ಒಂದು ಯುಗವನ್ನು ಕಳೆದುಕೊಂಡಿದೆ.

ನೋಡಿರಿ

