ಖ್ಯಾತ ನಟ ಕಮಲ್ ಹಾಸನ್ ಚುನಾವಣಾ ಕಣಕ್ಕೆ – ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ

ಖ್ಯಾತ ನಟ ಕಮಲ್ ಹಾಸನ್ ಚುನಾವಣಾ ಕಣಕ್ಕೆ –  ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ

ತಮಿಳು ನಟ ಕಮಲ್ ಹಾಸನ್ ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ನಟ ಕಮಲ್ ಹಾಸನ್ ಚುನಾವಣೆ ಕಣಕ್ಕೆ ಇಳಿಯುವುದು ಇದೇ ಮೊದಲ ಬಾರಿಯೇನಲ್ಲ. ಈಗಾಗಲೇ ಒಂದು ಬಾರಿ ಚುನಾವಣೆಯನ್ನು ಎದುರಿಸಿ ಸೋತಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಿಂದ ಕೊಯಮತ್ತೂರು ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಂಡಾಯ ನಾಯಕರಿಗೆ ಬಿಜೆಪಿ ರೆಡ್ ಕಾರ್ಪೆಟ್ – ಮಹಾರಾಷ್ಟ್ರದ ಸಿಎಂ ಪಟ್ಟಕ್ಕೇರುತ್ತಾರಾ ಅಜಿತ್ ಪವಾರ್?!

ಕಮಲ್ ಹಾಸನ್  ತಮ್ಮದೇ ಎಂ.ಎನ್.ಎಂ ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಪಕ್ಷದ ರಾಜ್ಯಮಟ್ಟದ ಪ್ರಚಾರದ ಅಭಿಯಾನವನ್ನು ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಆರಂಭಿಸಿದ್ದಾರೆ. ವಿಧಾನಸಭೆಯ ಒಟ್ಟು 234 ಕ್ಷೇತ್ರಗಳಲ್ಲೂ ಪ್ರಚಾರ ಮತ್ತು ಕಾರ್ಯಕರ್ತರ ಕುಂದುಕೊರತೆಗಳನ್ನು ಈ ಅಭಿಯಾನ ಪಟ್ಟಿ ಮಾಡಲಿದೆ. ಕೊಯಮತ್ತೂರು ಕ್ಷೇತ್ರದಿಂದಲೇ ಕಮಲ್ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮನವಿಯಾಗಿದೆಯಂತೆ. ಹೀಗಾಗಿ ಕಮಲ್ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಕಮಲ್ ಹಾಸನ್ ಅವರು 1,728 ಮತಗಳ ಅಲ್ಪ ಅಂತರದಿಂದ ಸೋತರು. ಆದರೆ, ಇಬ್ಬರ ಮಧ್ಯೆ ಸ್ಪರ್ಧೆ ಬಲವಾಗಿತ್ತು. ಈ ಕಾರಣದಿಂದಾಗಿ ಕಮಲ್ ಹಾಸನ್ ಜೊತೆ ಮೈತ್ರಿ ಮಾಡಿಕೊಂಡು ಕೊಯಮತ್ತೂರು ಸೀಟ್​ನ ನೀಡಲು ಡಿಎಂಕೆ ಆಸಕ್ತಿ ವಹಿಸಿದೆ ಎಂದು ಎಂಎನ್‌ಎಂ ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಕಮಲ್ ಹಾಸನ್ ಭಾನುವಾರ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಂಎನ್‌ಎಂನ ರಾಜ್ಯ ಮಟ್ಟದ ಪ್ರಚಾರ ಅಭಿಯಾನ ‘ಮಕ್ಕಲೋಡು ಮೈಯಂ’ ಉದ್ಘಾಟಿಸಿದರು.

suddiyaana