‘ಟಿಕೆಟ್‌ಗಿಂತ ಕುಟುಂಬವೇ ಮುಖ್ಯ, ದೊಡ್ಡಗೌಡರ ತೀರ್ಮಾನಕ್ಕೆ ನಾನು ಬದ್ಧ’ – ಭವಾನಿ ರೇವಣ್ಣ

‘ಟಿಕೆಟ್‌ಗಿಂತ ಕುಟುಂಬವೇ ಮುಖ್ಯ, ದೊಡ್ಡಗೌಡರ ತೀರ್ಮಾನಕ್ಕೆ ನಾನು ಬದ್ಧ’ – ಭವಾನಿ ರೇವಣ್ಣ

ನಮ್ಮ ಕುಟುಂಬದಲ್ಲಿ ಯಾವುದೇ ಬಿರುಕು ಕಲಹ ಇಲ್ಲ. ಈ ಹಿಂದೆಯೂ ಇಲ್ಲ ಇನ್ನು ಮುಂದೆಯೂ ಇರೋದಿಲ್ಲ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. ಇವತ್ತು ನಮ್ಮ ಕುಟುಂಬಕ್ಕೆ ಊಟ ಕೊಡುತ್ತಿರುವುದು ಜೆಡಿಎಸ್ ಪಕ್ಷ. ಜೆಡಿಎಸ್ ವರಿಷ್ಠರಾದ ದೇವೇಗೌಡರು ನಮ್ಮ ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ತಂದೆ ಸ್ಥಾನದಲ್ಲಿ ಇರುವವರು. ದೇವೇಗೌಡರ ಆರೋಗ್ಯ ಮುಖ್ಯ. ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಯಿತು. ಅವರು ಆರೋಗ್ಯವಾಗಿದ್ದರೆ ಪಕ್ಷ ಇರುತ್ತದೆ. ಅಷ್ಟೇ ಅಲ್ಲ ಅವರು ಆರೋಗ್ಯವಾಗಿದ್ದರೆ ನನ್ನಂತಹ ಸಾವಿರಾರು ಭವಾನಿಗಳನ್ನು ಹುಟ್ಟುಹಾಕುತ್ತಾರೆ. ಹಾಗಾಗಿ ಇಲ್ಲಿ ನಮ್ಮ ಪಕ್ಷದ ಗೆಲುವು ಮುಖ್ಯ. ಸ್ವರೂಪ್ ರನ್ನು ಗೆಲ್ಲಿಸಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹಾಸನದಲ್ಲಿ ಭವಾನಿ ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಹಾಸನಕ್ಕೆ ಪತ್ನಿ.. ಹೊಳೆನರಸೀಪುರದಲ್ಲಿ ಪತಿ – ಹೆಚ್.ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಅಖಾಡಕ್ಕೆ?

ಹೊಳೆನರಸೀಪುರದಲ್ಲಿ ರೇವಣ್ಣ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿ ಶಾಸಕ ಪ್ರೀತಂಗೌಡ ವರ್ತನೆ ಸರಿಯಿಲ್ಲ. ಮಹಿಳೆ ಅನ್ನೋದನ್ನು ಲೆಕ್ಕಿಸದೇ ಪ್ರೀತಂಗೌಡ ಸವಾಲು ಹಾಕಿದ್ದರು. ಬೇರೆಯವರಿಗೆ ಚಾಲೆಂಜ್ ಹಾಕುವ ಸಂಸ್ಕಾರ ನಮಗೆ ಇಲ್ಲ. ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. ನಮ್ಮ ಕುಟುಂಬದಲ್ಲಿ ಯಾವತ್ತೂ ಬಿರುಕು ಮೂಡಲು ಸಾಧ್ಯವಿಲ್ಲ. ಹೆಚ್.ಡಿ. ದೇವೇಗೌಡರ ಕುಟುಂಬ ಒಗ್ಗಟ್ಟಿನಿಂದ ಇದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೆಲ್ಲಬೇಕು. ಈಗ ಜೆಡಿಎಸ್ ಪಕ್ಷದಿಂದ ಟಿಕೆಟ್ ಸ್ವರೂಪ್ ಗೆ ಆಗಿದೆ. ಹೀಗಾಗಿ ನಾನು ಸ್ವರೂಪ್ ಪರ ಕೆಲಸ ಮಾಡುತ್ತೇನೆ. ಅದೇ ನನಗೆ ಟಿಕೆಟ್ ಆಗಿದ್ದರೆ ನನ್ನ ಪರ ಸ್ವರೂಪ್ ಕೆಲಸ ಮಾಡುತ್ತಿದ್ದರು. ದೇವೇಗೌಡರು ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

suddiyaana