ಹಿಂದೆಂದೂ ನೋಡದ ಸ್ಥಳಕ್ಕೆ ಪ್ರವಾಸಕ್ಕೆ ಹೋದ ಕುಟುಂಬ – ಬಂಗಲೆಯ ಗೋಡೆಯ ಮೇಲಿದ್ದ ಫೋಟೋ ಕಂಡು ವಾಪಸಾಗಿದ್ದೇಕೆ?

ಹಿಂದೆಂದೂ ನೋಡದ ಸ್ಥಳಕ್ಕೆ ಪ್ರವಾಸಕ್ಕೆ ಹೋದ ಕುಟುಂಬ – ಬಂಗಲೆಯ ಗೋಡೆಯ ಮೇಲಿದ್ದ ಫೋಟೋ ಕಂಡು ವಾಪಸಾಗಿದ್ದೇಕೆ?

ಕೆಲಸದ ಒತ್ತಡ, ದಿನನಿತ್ಯದ ಜಂಜಾಟದಿಂದ ದೂರ ಇರಲು ಪ್ರತಿಯೊಬ್ಬರು ಬಯಸುತ್ತಾರೆ. ಹೀಗಾಗಿ ಕೊಂಚ ಬಿಡುವು ಸಿಕ್ಕಿದ್ರೆ ತಮ್ಮಿಷ್ಟದ ಸ್ಥಳಕ್ಕೆ ಭೇಟಿ ನೀಡುವುದು, ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಇದೀಗ ಇಲ್ಲೊಬ್ಬಳು ಮಹಿಳೆ ಪ್ರವಾಸಿ ತಾಣಕ್ಕೆ ತನ್ನ ಕುಟುಂಬದೊಂದಿಗೆ ಹೋಗಿದ್ದಾಳೆ. ಮಕ್ಕಳೊಂದಿಗೆ ಟೈಮ್‌ ಸ್ಪೆಂಡ್‌ ಮಾಡಲು ಹೋದವಳಿಗೆ ದೊಡ್ಡ ಶಾಕ್‌ ವೊಂದು ಎದುರಾಗಿದೆ. ನೆಮ್ಮದಿಯಿಂದ ಕಾಲ ಕಳೆಯಲು ಹೋದವಳ ನೆಮ್ಮದಿಯೇ ಹಾಳಾಗಿದೆ.

ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕಾಗಿ ಒಂದಾದ HDK & ಸುಮಲತಾ – ಮಂಡ್ಯ ಗೆಲ್ಲಲು ‘ಕೈ’ ಪಡೆ ಮಹಾಗೇಮ್

ಅಷ್ಟಕ್ಕೂ ಆಗಿದ್ದೇನು?

ಜೆನ್ನಿ ಸ್ಟೀವನ್ಸ್​  ಎಂಬಾಕೆಯ ಕುಟುಂಬ ಎರಡು ವರ್ಷಗಳ ಹಿಂದಷ್ಟೇ ಯುಕೆಯಿಂದ ಸ್ವೀಡನ್​ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯ ಸ್ಥಳಗಳನ್ನು ನೋಡಬೇಕೆನ್ನುವ ಬಯಕೆಯಿಂದ ಹೊರಟಿದ್ದರು. ಹೀಗಾಗಿ ಈ ಮಹಿಳೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯ ಜತೆಗೆ ಹಿಂದೆಂದೂ ಹೋಗದ ಊರಿಗೆ ಹೋಗಿದ್ದರು. ಅಲ್ಲಿಯೇ ಇದ್ದು ಪತಿ, ಮಕ್ಕಳೊಂದಿಗೆ ಖುಷಿಯಿಂದ ಕಾಲ ಕಳೆಯಬೇಕು ಅಂತಾ ಅಂದು ಕೊಂಡಿದ್ದಳು. ಸ್ವಲ್ಪ ದಿನಗಳವರೆಗೆ ನಿರ್ಜನವಾಗಿದ್ದ ಸ್ಥಳದಲ್ಲಿ ಉಳಿದುಕೊಂಡಿದ್ದರು, ಇಲ್ಲಿಯೇ ಸ್ವಲ್ಪ ದಿನ ಆರಾಮವಾಗಿರೋಣ ಎಂದುಕೊಂಡಿದ್ದರು. ಆದರೆ ಗೋಡೆಯ ಮೇಲಿನ ಆ ಒಂದು ಚಿತ್ರವನ್ನು ಕಂಡು ಕೂಡಲೇ ಗಂಟು-ಮೂಟೆ ಕಟ್ಟಿಕೊಂಡು ವಾಪಸಾಗಿದ್ದಾರೆ.

ಜೆನ್ನಿಯ ಮಗಳು ಹಾಗೆಯೇ ಬಂಗಲೆಯೆಲ್ಲಾ ಒಂದು ಸುತ್ತು ಹಾಕಿಕೊಂಡು ಬರಬೇಕೆಂದು ಹೊರಟಿದ್ದಳು, ಆ ಬಂಗಲೆಯ ಗೋಡೆಯ ಮೇಲೆ ಆಕೆಯ ಸಹೋದರ ಅಂದರೆ ಜೆನ್ನಿಯ ಕಿರಿಯ ಮಗನ ಚಿತ್ರವು ಹೆಣ್ಣಿನ ರೂಪದಲ್ಲಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ.  ಕೂಡಲೇ ಆಕೆ ತಾಯಿಗೆ ವಿಷಯ ತಿಳಿಸಿದಾಗ ಜೆನ್ನಿ ಬಂದು ನೋಡಿದ್ದಾರೆ, ಹೌದು ಅಲ್ಲಿದ್ದಿದ್ದು ತನ್ನ ಮಗನ ಫೋಟೋ ಆದರೆ ಅಲ್ಲಿದ್ದಿದ್ದು ಹುಡುಗಿ ಎಂಬುದಷ್ಟೇ ವ್ಯತ್ಯಾಸ.

ಹಿಂದೆಂದೂ ಆ ಊರನ್ನು ನೋಡಿಯೇ ಇರದ ಕುಟುಂಬವು ಈ ಚಿತ್ರ ಕಂಡು ಹೌಹಾರಿದೆ. ತಕ್ಷಣವೇ ವಸ್ತುಗಳನ್ನು ಪ್ಯಾಕ್​ ಮಾಡಿ ಅಲ್ಲಿಂದ ಹೊರಟರು. ಈ ಘಟನೆ ಕುರಿತು ಜೆನ್ನಿ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ಜನರು ಕೂಡಲೇ ಅಲ್ಲಿಂದ ಹೊರಡುವಂತೆ ಸಲಹೆ ನೀಡಿದ್ದಾರೆ, ಇನ್ನೂ ಕೆಲವರು ಪುನರ್ಜನ್ಮದ ಕಥೆಯಿದ್ದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Shwetha M