ಹುಷಾರಿಲ್ಲ ಅಂತಾ ಕೆಲಸಕ್ಕೆ ರಜೆ ಹಾಕುವಂತಿಲ್ಲ – ನಿಮ್ಮ ಧ್ವನಿಯಿಂದಲೇ ಬಯಲಾಗುತ್ತೆ ಸತ್ಯ.. ಹೇಗೆ ಗೊತ್ತಾ?
ಜನರು ಕೃತಕ ಬುದ್ಧಿಮತ್ತೆಯನ್ನು ಬಳಸುವ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ತಂತ್ರಜ್ಞಾನವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅನ್ವೇಷಿಸುತ್ತಿದ್ದಾರೆ. ಈ ನಡುವೆ ಕೆಲವು ಸಂಶೋಧಕರು ಕೃತಕ ಬುದ್ಧಿಮತ್ತೆಯು ಧ್ವನಿಯಿಂದ ವ್ಯಕ್ತಿಯ ಶೀತವನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ ಅನ್ನೋ ವಿಚಾರವನ್ನು ಹಂಚಿಕೊಂಡಿದ್ದಾರೆ. ಶೀತವನ್ನು ಪತ್ತೆಹಚ್ಚಲು ಜನರಿಗೆ ಸಹಾಯ ಮಾಡುವಲ್ಲಿ ಇದು ಸಹಕಾರಿಯಾದರೂ, ಕೆಲವೊಮ್ಮೆ ಸುಳ್ಳು ಹೇಳಿದರೂ ಗೊತ್ತಾಗುತ್ತದೆ. ಹೇಗೆಂದರೆ, ಸಂಪೂರ್ಣವಾಗಿ ಆರಾಮವಾಗಿದ್ದಾಗಲೂ ಶೀತದಿಂದ ಬಳಲುತ್ತಿರುವ ಕಾರಣವಿಟ್ಟು ಅನಾರೋಗ್ಯದ ಸುಳ್ಳು ನೆಪವೊಡ್ಡಿ ರಜೆ ಕೇಳುವ ಉದ್ಯೋಗಿಗಳು ಈ ಅನ್ವೇಷಣೆಿಯಿಂದ ಜಾಗೃತರಾಗಿರಬೇಕು.
ಇದನ್ನೂ ಓದಿ : ಬಿಸಿಲಿನಲ್ಲಿ ಬೇಯುತ್ತಿರುವ ಜನರಿಗೆ ಮತ್ತೊಂದು ಶಾಕ್ – ಮತ್ತಷ್ಟು ಹೆಚ್ಚಾಗುತ್ತೆ ತಾಪಮಾನ!
ಈ ತಂತ್ರಜ್ಞಾನವು ಭವಿಷ್ಯದಲ್ಲಿ ಮುಂದಿನ ದೊಡ್ಡ ವಿಷಯವಾಗಿ ಮಾರ್ಪಟ್ಟರೆ ಮತ್ತು ಮತ್ತೊಂದು ಕ್ರಾಂತಿಕಾರಿ ಉತ್ಪನ್ನದ ಅಭಿವೃದ್ಧಿಗೆ ಕಾರಣವಾಗಲಿದೆ. ಕಂಪನಿಗಳ ಮಾಲೀಕರು ಯಾರಿಗೆ ಶೀತ ಮತ್ತು ಯಾರಿಗೆ ಶೀತವಿಲ್ಲ ಎಂದು ತಮ್ಮ ಉದ್ಯೋಗಿಗಳ ಧ್ವನಿಯ ಮೂಲಕ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಧ್ವನಿಯಲ್ಲಿನ ಬದಲಾವಣೆಯ ಮೂಲಕ ಶೀತವನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆಯು ಸಮರ್ಥವಾಗಿದೆ. ಸೂರತ್‌ನ ಸರ್ದಾರ್ ವಲ್ಲಭಭಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು 630 ಜನರ ಗಾಯನ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಈ ಪೈಕಿ 111 ಜನರು ಶೀತದಿಂದ ಬಳಲುತ್ತಿದ್ದರು. ವಾಸ್ತವವಾಗಿ ಶೀತದಿಂದ ಬಳಲುತ್ತಿರುವ ಜನರನ್ನು ಗುರುತಿಸಲು ಗಾಯನ ಮಾದರಿಗಳನ್ನು ವಿಶ್ಲೇಷಿಸಲಾಗಿತ್ತು
ಜನರಲ್ಲಿ ಶೀತವನ್ನ ಪತ್ತೆಹಚ್ಚಲು ಸಂಶೋಧನೆಯು ಹಾರ್ಮೋನಿಕ್ಸ್ (ಮನುಷ್ಯ ಧ್ವನಿಯಲ್ಲಿನ ಗಾಯನ ಲಯ) ಅನ್ನು ಬಳಸಿದೆ. ಅವುಗಳ ಫ್ರಿಕ್ವೆನ್ಸಿ ಹೆಚ್ಚಾದಾಗ ಹಾರ್ಮೋನಿಕ್ಸ್ ಅಂಪ್ಲಿಟ್ಯೂಡ್ ಕಡಿಮೆಯಾಗುತ್ತದೆ ಮತ್ತು ಶೀತದಿಂದ ಬಳಲುತ್ತಿರುವ ವ್ಯಕ್ತಿಯು ಅದೇ ರೀತಿಯ ಅನಿಯಮಿತ ಮಾದರಿಯನ್ನು ತೋರಿಸಬಹುದು. ಅದೇ ವಿದ್ಯಮಾನವನ್ನು ಆಧರಿಸಿ ಸಂಶೋಧಕರು ವಿವಿಧ ವ್ಯಕ್ತಿಗಳ ವರ್ಧನೆಯ ವ್ಯತ್ಯಾಸಗಳನ್ನು ವಿಶ್ಲೇಷಿಸಲು ಮತ್ತು ಶೀತವನ್ನು ಹೊಂದಿರುವವರನ್ನು ಗುರುತಿಸಲು ಯಂತ್ರ-ಕಲಿಕೆ ಅಲ್ಗಾರಿದಮ್‌ಗಳನ್ನು ಬಳಸಿಕೊಂಡರು.
ವೈದ್ಯರ ಭೇಟಿಯ ಅಗತ್ಯವಿಲ್ಲದೇ ಒಬ್ಬ ವ್ಯಕ್ತಿಯು ಶೀತದಿಂದ ಬಳಲುತ್ತಿದ್ದರೆ ಅದನ್ನು ಗುರುತಿಸುವುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಈ ಅಧ್ಯಯನವು ಉದ್ಯೋಗದಾತರಿಗೆ ಸಹಾಯ ಮಾಡಬಹುದು ಎಂದು ಹೇಳುತ್ತದೆ. ಕೆಲಸದಿಂದ ರಜೆ ತೆಗೆದುಕೊಳ್ಳುವ ಸಲುವಾಗಿ ಅನಾರೋಗ್ಯಕ್ಕೆ ಒಳಗಾಗುವಂತೆ ನಟಿಸುವ ಉದ್ಯೋಗಿಗಳ ಮೇಲೆ ಇದು ಹೆಚ್ಚು ಪರಿಣಾಮ ಬೀಳಬಹುದು ಎಂದೂ ಹೇಳಲಾಗುತ್ತಿದೆ.