ವಿಮೆ ಹಣ ಪಡೆಯುವುದಕ್ಕಾಗಿ ತನ್ನ ಎರಡೂ ಕಾಲನ್ನು ಕತ್ತರಿಸಿಕೊಂಡ..! – ಕಾಲು ಕಳೆದುಕೊಂಡ ಮೇಲೆ ಆಗಿದ್ದೇ ಬೇರೆ..!

ವಿಮೆ ಹಣ ಪಡೆಯುವುದಕ್ಕಾಗಿ ತನ್ನ ಎರಡೂ ಕಾಲನ್ನು ಕತ್ತರಿಸಿಕೊಂಡ..! – ಕಾಲು ಕಳೆದುಕೊಂಡ ಮೇಲೆ ಆಗಿದ್ದೇ ಬೇರೆ..!

ನಮ್ಮ ಜೀವನದಲ್ಲಿ ಯಾವಾಗ ಬೇಕಾದರು ಅಪಾಯಗಳು ಎದುರಾಗಬಹುದು. ಅದರಲ್ಲೂ ಆರೋಗ್ಯದಲ್ಲಿ ಯಾವಾಗ ಬೇಕಾದರು ಏರುಪೇರಾಗಿ ಆಸ್ಪತ್ರೆ ಸೇರಬಹುದು. ಹೀಗಾಗಿ ಈ ಸಮಸ್ಯೆಗಳಿಂದ ಪಾರಾಗಲು ನಾವು ವಿಮೆ ಮಾಡಿಸಿರುತ್ತೇವೆ. ವಾಹನ ವಿಮೆ, ಆರೋಗ್ಯ ವಿಮೆ ಹೀಗೆ ಹತ್ತಾರು ರೀತಿಯ ವಿಮೆಗಳಿವೆ. ಇತ್ತೀಚೆಗೆ ಈ ವಿಮೆ ಹಣ ಪಡೆಯುವುದಕ್ಕಾಗಿ ನಾನಾ ರೀತಿಯ ವಂಚನೆಗಳನ್ನು ಮಾಡುತ್ತಿದ್ದಾರೆ. ಇದೀಗ ಇಲ್ಲೊಬ್ಬ ಪುಣ್ಯಾತ್ಮ ಹಣ ಪಡೆಯಲು ತನ್ನ ಕಾಲುಗಳನ್ನೇ ಕತ್ತರಿಸಿಕೊಂಡಿದ್ದಾನೆ.

ಇದನ್ನೂ ಓದಿ: ಭಾರತದ ಗಗನಯಾತ್ರಿಗಳ ಹೆಸರು ಅಧಿಕೃತ ಘೋಷಣೆ – ನಾಲ್ವರು ಅದೃಷ್ಟಶಾಲಿಗಳು ಯಾರು ಗೊತ್ತಾ?

ಈ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಮಿಸೌರಿಯಲ್ಲಿ ನೆಲೆಸಿರುವ 60ವರ್ಷದ ವ್ಯಕ್ತಿಯೊಬ್ಬರು ಆರೋಗ್ಯ ವಿಮೆ ಹಣವನ್ನು ಪಡೆಯಲು ತನ್ನ ಎರಡು ಕಾಲುಗಳನ್ನು ಕತ್ತರಿಸಿದ್ದಾರೆ. ಬಳಿಕ ಆ ಕಾಲುಗಳಲ್ಲಿ ಅಡಗಿಸಿಟ್ಟು ಯಾಮಾರಿಸಿದ್ದಾನೆ ಎಂದು  ಪ್ರಕರಣದ ತನಿಖಾಧಿಕಾರಿ ಹೊವೆಲ್ ಕೌಂಟಿ ಶೆರಿಫ್ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈತ ತನ್ನ ಎರಡೂ ಕಾಲುಗಳನ್ನು ಕತ್ತರಿಸಿದ್ದ. ಇದಲ್ಲದೇ ವಿಮೆ ಹಣ ಪಡೆಯಲು ಟ್ರ್ಯಾಕ್ಟರ್‌ನ ಹಿಂಬದಿಯಲ್ಲಿ ಅಳವಡಿಸಿದ್ದ ಮೊವರ್‌ನಿಂದ ಅವರ ಕಾಲು ತುಂಡಾಗಿದೆ ಎಂದು ಹೇಳಿದ್ದರು. ಆದರೆ, ಈ ಅಪಘಾತದ ನಂತರ ಅವರ ಕಾಲು ಎಲ್ಲಿಯೂ ಪತ್ತೆಯಾಗಿರಲ್ಲಿಲ್ಲ. ಇದಲ್ಲದೇ ಕಾಲಿನ ಗಾಯ ಮೊವರ್‌ನಿಂದ ಕಾಲು ಕತ್ತರಿಸಿದಂತೆ ಕಾಣಿಸುತ್ತಿರಲಿಲ್ಲ. ಇದರಿಂದ ಪೊಲೀಸರಲ್ಲಿ ಅನುಮಾನ ಹುಟ್ಟಿಕೊಂಡಿದೆ.

ತನಿಖೆ ಪ್ರಾರಂಭಿಸಿದಾಗ ವ್ಯಕ್ತಿ ಪಾರ್ಶ್ವವಾಯುವಿನಿಂದ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿ ಟ್ರ್ಯಾಕ್ಟರ್ ಹೇಗೆ ಚಲಾಯಿಸಿದ ಎಂಬ ಮತ್ತೊಂದು ಪ್ರಶ್ನೆ ಪೊಲೀಸರಲ್ಲಿ ಹುಟ್ಟಿಕೊಂಡಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಸತ್ಯಾಂಶ ತಿಳಿದು ಗಾಬರಿಯಾಗಿದೆ. ವಿಮೆ ಹಣ ಪಡೆಯಲು ಈ ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಅಡಗಿಸಿಟ್ಟಿದ್ದ. ಬಳಿಕ ಆಕ್ಸಿಡೆಂಟ್​​​​​ ಆಗಿದೆ ಸುಳ್ಳು ಕಥೆ ಹೇಳಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ಪಾರ್ಶ್ವವಾಯುವಿಗೆ ಒಳಗಾದ ತನ್ನ ಕಾಲಿನಿಂದ ಯಾವುದೇ ಪ್ರಯೋಜನವಾಗದ ಕಾರಣ, ಅದನ್ನು ಕತ್ತರಿಸುವ ಮೂಲಕ ಹಣ ಪಡೆಯಲು ಬಯಸಿದ್ದರು. ಬಳಿಕ ಕತ್ತರಿಸಿದ ಕಾಲುಗಳನ್ನು ಸಂಬಂಧಿಕರೊಬ್ಬರ ಸಹಾಯದಿಂದ ಬಕೆಟ್‌ನಲ್ಲಿ ಇರಿಸಿ ಅದರ ಮೇಲೆ ಟೈಯರ್​​​ನಿಂದ ಮುಚ್ಚಿ ಅಡಗಿಸಿಟ್ಟಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.

Shwetha M