916 ಗೋಲ್ಡ್ ನಲ್ಲಿ ಕಂಚು!! -ಹಾಲ್ ಮಾರ್ಕ್ ಚಿನ್ನ ಹೀಗೂ ಇರುತ್ತಾ?
ಚಿನ್ನದ ರೇಟು ಗಗನಕ್ಕೆ ಏರುತ್ತಿರುವಾಗಲೇ ಚಿನ್ನದಲ್ಲೂ ಮೋಸ ಮಾಡ್ತಿದ್ದಾರೆ. 916 ಹಾಲ್‌ಮಾರ್ಕ್ ಇದ್ರೆ ಅದು ಪರ್ಫೆಕ್ಟ್ ಚಿನ್ನ ಅಂತ ಸರ್ಕಾರ ಹೇಳುತ್ತೆ. ಆದ್ರೆ ಇಂತಹ ಹಾಲ್‌ಮಾರ್ಕ್ ಮೂಲಕವೇ ವಂಚಿಸುವ ಜಾಲವಿದೆ.
ನೀವು ಚಿನ್ನ ತಗೊಳ್ಳುವಾಗ ಹಾಲ್‌ಮಾರ್ಕ್ ಇದೆಯೇ ಎಂದು ಪರಿಶೀಲನೆ ಮಾಡ್ಕೊಳ್ಳಿ ಅಂತಾ ಸರ್ಕಾರ ಜಾಗೃತಿ ಮೂಡಿಸುತ್ತಿರುತ್ತದೆ. ಆದ್ರೆ ಇಂತ ಹಾಲ್‌ಮಾರ್ಕ್ ಅನ್ನು ಕಣ್ಣುಮುಚ್ಚಿ ನಂಬಿದ್ರೆ ಕೈಗೆ ಸಿಗೋದು ಚೊಂಬು ಎನ್ನುವುದು ಈ ವಂಚಕರ ಜಾಲದ ಕೃತ್ಯ ನೋಡಿದ್ರೆ ಗೊತ್ತಾಗುತ್ತದೆ. ಒಳಗೆ ಕಂಚನ್ನು ಇಟ್ಟು ಮೇಲಿಂದ ಚಿನ್ನದ ಕೋಟಿಂಗ್ ಕೊಟ್ಟು ಅದರ ಮೇಲೆ 916 ಹಾಲ್ ಮಾರ್ಕ್ ಮುದ್ರಿಸೋ ಮೋಸಗಾರರಿದ್ದಾರೆ.
ಇದು ನಡೆದಿರೋದು ಕೇರಳ ಕೋಯಿಕ್ಕೋಡ್ ನಲ್ಲಿ.. ಅಲ್ಲಿನ ಸಹಕಾರಿ ಬ್ಯಾಂಕ್ ನಲ್ಲಿ ಅಡವಿಟ್ಟ ಚಿನ್ನದಲ್ಲಿ ಈ ಮೋಸ ನಡೆದಿದೆ. ನಾರ್ಮಲ್ ಚೆಕಿಂಗ್ ವೇಳೆ ಚಿನ್ನವೇ ಎಂದು ಭಾವಿಸಿ ಬ್ಯಾಂಕ್‌ನವರು ಹಣ ಕೊಟ್ಡಿದ್ದಾರೆ. ಆದ್ರೆ ಚಿನ್ನದ ಆಭರಣದ ತೂಕ ಕಂಡು ಅನುಮಾನದಿಂದ ಡೀಟೈಲ್ ಆಗಿ ಪರಿಶೀಲಿಸಿದಾಗಲೇ ಇಲ್ಲಿ ನಡೆದ 24 ಕ್ಯಾರೆಟ್ ವಂಚನೆ ಗೊತ್ತಾಗಿದ್ದು. ಇಲ್ಲಿ ಕಂಚಿನಿಂದ ಆಭರಣ ಮಾಡಿ, ಅದಕ್ಕೆ ಚಿನ್ನದ ಕೋಟಿಂಗ್ ನೀಡಲಾಗಿತ್ತು. ಇದಾದ ಮೇಲೆ 916 ಹಾಲ್‌ಮಾರ್ಕ್ ಬೇರೆ ಹಾಕಲಾಗಿದ್ದು.. ಇಲ್ಲಿ ವಂಚಕರು ನೇರವಾಗಿ ಚಿನ್ನವನ್ನು ಅಡ ಇಟ್ಟಿರಲಿಲ್ಲ. ಬದಲಿಗೆ ಮಾಮೂಲಿಯಾಗಿ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ಗ್ರಾಹಕರನ್ನು ಬಳಸಿಕೊಂಡಿದ್ದಾರೆ.
ಇದರಿಂದಾಗಿ ಹೊಸ ಗ್ರಾಹಕರು, ಚಿನ್ನ ನೀಡಿದಾಗ ಎಲ್ಲಾ ರೀತಿಯಲ್ಲೂ ಪರಿಶೀಲಿಸುವ ಬ್ಯಾಂಕ್ ನ ಕ್ರಮದಿಂದ ತಪ್ಪಿಸಿಕೊಂಡಿದ್ದಾರೆ. ಈ ರೀತಿಯಾಗಿ ಆರು ಪ್ರಕರಣಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಹಣ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಒಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಇಡೀ ಜಾಲ ಬೇಧಿಸುವ ವಿಶ್ವಾಸದಲ್ಲಿದ್ದಾರೆ.. ಆದ್ರೆ ಈಪ್ರಕರಣದ ಮೂಲಕ, ಹಾಲ್ ಮಾರ್ಕ್ ಅನ್ನು ಕಣ್ಣುಮುಚ್ಚಿ ನಂಬದಂತಹ ಸ್ಥಿತಿಯಂತೂ ನಿರ್ಮಾಣವಾಗಿದೆ.