ಕೆನಡಾದಲ್ಲಿ ನಕಲಿ ಶಿಕ್ಷಣ ಸಂಸ್ಥೆಯ ಕುತಂತ್ರ? – 700 ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಕೆನಡಾದಲ್ಲಿ ನಕಲಿ ಶಿಕ್ಷಣ ಸಂಸ್ಥೆಯ ಕುತಂತ್ರ? – 700 ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ನವದೆಲಿ: ಕೆನಡಾದಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿರುವ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ನಕಲಿ ಶಿಕ್ಷಣ ಸಂಸ್ಥೆಯ ಅಡ್ಮಿಶನ್‌ ಆಮಿಷಕ್ಕೆ ಬಲಿಯಾಗಿ ವಿದ್ಯಾ​ರ್ಥಿ​ಗಳು ಅತಂತ್ರ ಸ್ಥಿತಿ ಎದು​ರಿ​ಸು​ತ್ತಿ​ರುವ ಪ್ರಸಂಗ ಬೆಳ​ಕಿಗೆ ಬಂದಿದೆ. ಅಲ್ಲದೆ, ಈ ವಿದ್ಯಾ​ರ್ಥಿ​ಗಳು ಗಡಿ​ಪಾರು ಭೀತಿಯ​ಲ್ಲಿ​ದ್ದಾ​ರೆ.

ಇದನ್ನೂ ಓದಿ: ವಿಮಾನದಲ್ಲಿ ತೆರಳುವಾಗ ಬಾಂಬ್ ಎಂದ ಪ್ರಯಾಣಿಕ – ತಪಾಸಣೆ ವೇಳೆ ಬ್ಯಾಗ್‌ ನಲ್ಲಿ ಸಿಕ್ಕಿದ್ದು ತೆಂಗಿನಕಾಯಿ!

ಸುಮಾರು 700 ಭಾರತೀಯ ವಿದ್ಯಾರ್ಥಿಗಳನ್ನು ಅಕ್ರ​ಮ​ವಾಗಿ ಅಡ್ಮಿ​ಷನ್‌ ಮಾಡಿ​ಕೊ​ಳ್ಳ​ಲಾ​ಗಿತ್ತು. ಪಂಜಾ​ಬಿ​ಗಳೇ ಇವ​ರಲ್ಲಿ ಹೆಚ್ಚಿನ ಸಂಖ್ಯೆ​ಯ​ಲ್ಲಿ​ದ್ದಾ​ರೆ. ಇವರು ಕೆನ​ಡಾದ ಕಾಯಂ ನಿವಾ​ಸಿ​ಗ​ಳಾ​ಗಲು ಅರ್ಜಿ ಸಲ್ಲಿ​ಸಿ​ದಾಗ ಅಡ್ಮಿ​ಶನ್‌ ನಕಲಿ ಎಂದು ಬೆಳ​ಕಿಗೆ ಬಂದಿದೆ. ಇವರ ರಕ್ಷ​ಣೆಗೆ ಭಾರತ ಸರ್ಕಾರ ಧಾವಿ​ಸ​ಬೇಕು ಎಂದು ಪಂಜಾಬ್‌ ಎನ್‌​ಆ​ರ್‌ಐ ಖಾತೆ ಸಚಿವ ಕುಲ​ದೀಪ್‌ ಸಿಂಗ್‌ ಧಾಲಿ​ವಾಲ್‌ ಆಗ್ರ​ಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರ​ತದ ವಿದೇ​ಶಾಂಗ ಸಚಿವ ಎಸ್‌. ಜೈಶಂಕರ್‌, ನಮ್ಮ ಸಚಿ​ವಾ​ಲಯ ಹಾಗೂ ಕೆನಡಾ ದೂತಾ​ವಾ​ಸವು ಈ ವಿಷ​ಯ​ವನ್ನು ಕೆನಡಾ ಸರ್ಕಾ​ರದ ಮುಂದೆ ಇರಿ​ಸ​ಲಿದೆ. ಕೆನಡಾ ಸರ್ಕಾರ ವಿದ್ಯಾ​ರ್ಥಿ​ಗ​ಳಿಗೆ ನ್ಯಾಯ ದೊರ​ಕಿ​ಸಿ​ಕೊ​ಡುವ ವಿಶ್ವಾ​ಸ​ವಿ​ದೆ ಎಂದಿ​ದ್ದಾ​ರೆ.

suddiyaana