ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಟ್ರೇಲರ್ ರಿಲೀಸ್ – ಕ್ರೇಜ್ ಹುಟ್ಟಿಸಿದ ಹೊಂಬಾಳೆಯ ಹೊಸ ಸಿನಿಮಾ

ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಟ್ರೇಲರ್ ರಿಲೀಸ್ – ಕ್ರೇಜ್ ಹುಟ್ಟಿಸಿದ ಹೊಂಬಾಳೆಯ ಹೊಸ ಸಿನಿಮಾ

ಪವನ್ ಕುಮಾರ್ ನಿರ್ದೇಶನದ ‘ಧೂಮಂ’ ಟ್ರೇಲರ್ ರಿಲೀಸ್ ಆಗಿದೆ. ವಿಜಯ್ ಕಿರಗಂದೂರು ಒಡೆತನದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ನಿರ್ಮಾಣದ ‘ಧೂಮಂ’ ಸಿನಿಮಾ ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿದೆ. ಇದೀಗ ‘ಧೂಮಂ’ ಸಿನಿಮಾ ಕೂಡ ಡಿಫರೆಂಟ್ ಆಗಿ ಮೂಡಿಬರಲಿದೆ ಅನ್ನೋದನ್ನು ಟ್ರೇಲರ್ ಮೂಲಕ ಚಿತ್ರತಂಡ ತೋರಿಸಿಕೊಟ್ಟಿದೆ. ಫಹಾದ್ ಫಾಸಿಲ್ ನಟನೆಯ ಈ ಚಿತ್ರದ ಟ್ರೇಲರ್ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ.

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಗಿಫ್ಟ್ – ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಹೀರೋ (ಫಹಾದ್) ಆ್ಯಡ್ ಏಜೆನ್ಸಿಯಲ್ಲಿ ಉದ್ಯೋಗ ಮಾಡುತ್ತಿರುತ್ತಾನೆ. ತಂಬಾಕು ಜಾಹೀರಾತನ್ನು ಹೊಸ ರೀತಿಯಲ್ಲಿ ಕಟ್ಟಿಕೊಡಬೇಕು ಅನ್ನೋದು ಆತನ ಕನಸು. ಬಳಿಕ ಹಣ ಮಾಡಲು ಬೇರೆ ದಾರಿ ಹಿಡಿಯುತ್ತಾನೆ. ಆಗ ಆತ ಟ್ರ್ಯಾಪ್ ಆಗುತ್ತಾ ಹೋಗುತ್ತಾನೆ. ಇದನ್ನೆಲ್ಲಾ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಜೂನ್ 23ರಂದು ಸಿನಿಮಾ ತೆರೆಗೆ ಬರುತ್ತಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಇನ್ನು, ಫಹಾದ್ ಫಾಸಿಲ್ ಅವರು ತಮ್ಮ ನಟನೆ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ‘ಧೂಮಂ’ ಚಿತ್ರದಲ್ಲಿ ಫಹಾದ್ ನಟಿಸುತ್ತಿರುವುದರಿಂದ ಸಹಜವಾಗಿಯೇ ಅಭಿಮಾನಿಗಳು ರಿಲೀಸ್ ಡೇಟ್‌ಗಾಗಿ ಕಾಯುತ್ತಿದ್ದಾರೆ. ಮೂರೇ ತಿಂಗಳಲ್ಲಿ ‘ಧೂಮಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ‘ಧೂಮಂ’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆ ರೋಷನ್ ಮ್ಯಾಥೀವ್, ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ.

suddiyaana