ಬೆಂಗಳೂರು ಮತಗಟ್ಟೆಗಳಲ್ಲಿ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ – ಮತದಾನದ ಪ್ರಕ್ರಿಯೆ ಮತ್ತಷ್ಟು ಸಲೀಸು!

ಬೆಂಗಳೂರು ಮತಗಟ್ಟೆಗಳಲ್ಲಿ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ – ಮತದಾನದ ಪ್ರಕ್ರಿಯೆ ಮತ್ತಷ್ಟು ಸಲೀಸು!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಬುಧವಾರ ನಡೆಯಲಿದ್ದು, ಚುನಾವಣಾ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಬೆಂಗಳೂರಿನ ಮತಗಟ್ಟೆಗಳಲ್ಲಿ ಮುಖಗುರುತಿಸುವ ತಂತ್ರಜ್ಞಾವೊಂದನ್ನು ಬಳಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಿಗಳು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಬಳಸುತ್ತಿದ್ದಾರೆ. ಈ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಮತದಾನ ಪ್ರಕ್ರಿಯೆ ಹೆಚ್ಚು ಸರಳವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ: ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದ ಬಿಬಿಎಂಪಿ! – ಮತದಾನದಂದು ಫ್ರೀ ಊಟ, ತಿಂಡಿ ವಿತರಣೆಗೆ ನಿಷೇಧ!

ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಹಾಯದಿಂದ ರಚಿಸಲಾಗಿದೆ. ಮತದಾರರು ಉದ್ದನೆಯ ಸರತಿ ಸಾಲುಗಳನ್ನು ಬಿಟ್ಟು ನೇರವಾಗಿ ಮತ ಚಲಾಯಿಸಲು ಸಹಕಾರಿಯಾಗಿದೆ.

ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮತದಾರರು ಮೊದಲು ಚುನಾವಣೆ ಆಯೋಗದ ‘ಚುನಾವಣಾ’ ಮೊಬೈಲ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಮತದಾರರ ಫೋಟೊ ಗುರುತಿನ ಚೀಟಿ ನಂಬರ್‌ ಹಾಗೂ ಮೊಬೈಲ್‌ ನಂಬರ್‌ ಹಾಕಬೇಕು. ಇದಾದ ನಂತರ ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌  ನಮೂದಿಸಬೇಕು. ಹಾಗೆಯೇ, ಸೆಲ್ಫಿ ಅಪ್‌ಲೋಡ್‌ ಮಾಡಬೇಕು. ಇದಾದ ನಂತರ ಫೇಷಿಯಲ್‌ ರೆಕಗ್ನಿಷನ್‌ ವೇರಿಫಿಕೇಷನ್‌ ಆಗುತ್ತದೆ.

ಒಂದು ಸಲ ಫೇಷಿಯಲ್‌ ರೆಕಗ್ನಿಷನ್‌ ಪರಿಶೀಲನೆ ಮುಗಿದರೆ, ಮತದಾರರು ಮತಗಟ್ಟೆಗಳಿಗೆ ಹೋದಾಗ ಸಾಲಿನಲ್ಲಿ ಕಾಯುವ ಅವಶ್ಯಕತೆ ಇರುವುದಿಲ್ಲ. ಚುನಾವಣೆ ಆಯೋಗದ ಡೇಟಾಬೇಸ್‌ಗೆ ನಿಮ್ಮ ಫೋಟೊ ಮ್ಯಾಚ್‌ ಆದರೆ, ಅಧಿಕಾರಿಗಳಿಗೆ ನೀವು ಯಾವುದೇ ದಾಖಲೆ ನೀಡುವ ಪ್ರಮೇಯವೇ ಇರುವುದಿಲ್ಲ. ಇದರಿಂದ ಜನರ ಸಮಯ ಉಳಿಯುವ ಜತೆಗೆ ನಕಲಿ ಮತದಾನವನ್ನೂ ತಡೆಯಬಹುದು ಎಂದು ಸೂರ್ಯ ಸೇನ್ ಮಾಹಿತಿ ನೀಡಿದ್ದಾರೆ.

ಇಂತಹ ತಂತ್ರಜ್ಞಾನವನ್ನು ಬಳಸುವುದರಿಂದ ಆಗುವ ಅನುಕೂಲಗಳನ್ನು ವಿವರಿಸಿದ ಸೇನ್, ಇದು ಸರತಿ ಸಾಲುಗಳನ್ನು ಮತ್ತು ಮತದಾನಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಮತಗಟ್ಟೆಗಳಲ್ಲಿ ಮಾನವ ಶಕ್ತಿಬಳಕೆ ಕಡಿಮೆಯಗುತ್ತದೆ. ಆದ್ದರಿಂದ ಪ್ರತಿ ಬೂತ್‌ನಲ್ಲಿ ನಾಲ್ವರ ಬದಲಿಗೆ ಮೂರು ಅಥವಾ ಕಡಿಮೆ ಅಧಿಕಾರಿಗಳನ್ನು ಮಾತ್ರ ನಿಯೋಜಿಸಬಹುದು. ಆದರೂ ಅಂತಹ ಡೇಟಾಗೆ ಕೊನೆಯವರೆಗೆ ಭದ್ರತೆ ಇರಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

suddiyaana