270 ರನ್ಸ್.. ಕೆರಳಿದ ಕಿಶನ್ – T-20I, ODI.. ಈಗ ಟೆಸ್ಟ್ ಗೂ ಟವೆಲ್
ಪಾಕೆಟ್ ಡೈನಮೋ ಫುಲ್ ಫೈಯರ್

270 ರನ್ಸ್.. ಕೆರಳಿದ ಕಿಶನ್ – T-20I, ODI.. ಈಗ ಟೆಸ್ಟ್ ಗೂ ಟವೆಲ್ಪಾಕೆಟ್ ಡೈನಮೋ ಫುಲ್ ಫೈಯರ್

2 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಿದ್ದ ಇಶಾನ್ ಕಿಶನ್ ಮೈದಾನದಲ್ಲಿ ಸಿಡಿಯುತ್ತಲೇ ಇದ್ದಾರೆ.  ಟಿ-20ಐನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಏಕದಿನ ತಂಡಕ್ಕೂ ಕಾಲಿಟ್ಟಿರೋ ಪಾಕೆಟ್ ಡೈನಮೋ ಇಶಾನ್ ಕಿಶನ್ ಈಗ ವೈಟ್ ಜೆರ್ಸಿಯಲ್ಲೂ ವಿರಾಟರೂಪ ತೋರಿಸಿದ್ದಾರೆ. ಕ್ಯಾಪ್ಟನ್ ಆಗಿ ಪ್ಲೇಯರ್ ಆಗಿ ಇನ್​​ಕ್ರೆಡಿಬಲ್ ಇನ್ನಿಂಗ್ಸ್ ಆಡಿದ್ದಾರೆ.

ಇದನ್ನೂ ಓದಿ : ಅಭಿ Vs ವೈಭವ್ Vs ಸಂಜು – AFG ಸರಣಿ ಓಪನರ್ಸ್ ಯಾರು?

ದುಲೀಪ್ ಟ್ರೋಫಿ.. ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ. ಟೀಂ ಇಂಡಿಯಾ ಸೆಲೆಕ್ಟರ್​ಗಳ ಗಮನ ಸೆಳೆಯೋಕೆ ಆಟಗಾರರಿಗೆ ಸಿಗುವ ಒಂದು ಸ್ಟೇಜ್. ಸದ್ಯ ಇಶಾನ್ ಕಿಶನ್ ಕ್ಯಾಪ್ಟನ್ಸಿ ಈಸ್ಟ್ ಝೋನ್ ಮತ್ತು ತಿಲಕ್ ವರ್ಮಾ ನಾಯಕತ್ವದ ಸೌತ್ ಝೋನ್ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಫಸ್ಟ್ ಇನ್ನಿಂಗ್ಸ್​ನಲ್ಲೇ ಈಸ್ಟ್ ಝೋನ್ ಕಂಪ್ಲೀಟ್ ಡಾಮಿನೇಷನ್ ಮಾಡಿದೆ. ಅದ್ರಲ್ಲೂ ಇಶಾನ್ ಕಿಶನ್ ಅಂತೂ ರನ್ ಮಳೆ ಸುರಿಸಿ ಬಿಗ್ ಸ್ಟೇಟ್​ಮೆಂಟ್ ಪಾಸ್ ಮಾಡಿದ್ದಾರೆ.

30 ಫೋರ್.. 7 ಸಿಕ್ಸರ್.. 270 ರನ್ಸ್.. ಕೆರಳಿದ ಕಿಶನ್!

ಈಸ್ಟ್ ಝೋನ್ ಕ್ಯಾಪ್ಟನ್ ಆಗಿರೋ ಇಶಾನ್ ಕಿಶನ್ ಪಂದ್ಯಕ್ಕೂ ಮುನ್ನ ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಅಭಿಮನ್ಯು ಈಶ್ವರನ್ ಮತ್ತು ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಶುರುಮಾಡ್ತಾರೆ. ಇಬ್ರೂ 100 ರನ್​ಗಳ ಜೊತೆಯಾಟವಾಡ್ತಾರೆ. ಅಭಿಮನ್ಯು 72, ವೈಭವ್ 44 ರನ್ಸ್ ಗಳಿಸಿದ್ರೆ ಶಿಖರ್ ಮೋಹನ್ 84 ರನ್ಸ್ ಸಿಡಿಸಿದ್ರು. ಅದ್ರಲ್ಲೂ ಇಶಾನ್ ಕಿಶನ್ 30 ಫೋರ್, 7 ಸಿಕ್ಸರ್​ಗಳೊಂದಿಗೆ 270 ರನ್ ಗಳಿಸಿದ್ರು. ಕುಮಾರ್ ಕುಶಾಗ್ರ 101 ರನ್ಸ್, ಅನುಕೂಲ್ ರಾಯ್ 45, ಕುರೇಶಿ 40 ಹೀಗೆ ಈಸ್ಟ್ ಝೋನ್ ಪರ ಎಲ್ರಿಂದಲೂ ರನ್ಸ್ ಬಂದಿದ್ರಿಂದ ಫಸ್ಟ್ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 708 ರನ್ ಗಳಿಸಿ ತಂಡ ಆಲೌಟ್ ಆಗಿದೆ. ಪವರ್ ಹಿಟ್ಟಿಂಗ್, ಅಗ್ರೆಸ್ಸಿವ್ ಬ್ಯಾಟಿಂಗ್​ಗೆ ಹೆಸರಾಗಿರೋ ಕಿಶನ್ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲೂ ಬಿಗ್ ಇನ್ನಿಂಗ್ಸ್ ಕಲೆಹಾಕಬಲ್ಲೆ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಭಾರತದ ಪರ ಟಿ-20ಐ, ಓಡಿಐಗೆ ಸೆಲೆಕ್ಟ್ ಮಾಡಿದಂತೆ ಟೆಸ್ಟ್ ತಂಡದಲ್ಲೂ ಚಾನ್ಸ್ ಕೊಡಿ ಎನ್ನುವಂತೆ ಬ್ಯಾಟ್​ನಲ್ಲೇ ಹೇಳಿದ್ದಾರೆ. ಹಾಗೇ ಈ ದಾಖಲೆಯ ಇನ್ನಿಂಗ್ಸ್​ ಮೂಲಕವೇ ಕಿಶನ್ ರಣತಂತ್ರವೂ ಬಯಲಾಗಿದೆ.

ಫಸ್ಟ್ ಇನ್ನಿಂಗ್ಸ್ ಲೀಡ್ ನಲ್ಲಿ ಟ್ರೋಫಿ ಗೆಲ್ತಾರಾ ಈಸ್ಟ್ ಝೋನ್?

ಲಾಂಗ್ ಡೇಜ್ ಕ್ರಿಕೆಟ್ ಅಂತಾ ಬಂದಾಗ ಫಸ್ಟ್ ಬ್ಯಾಟಿಂಗ್ ಮಾಡುವ ತಂಡ 500, 600+ ರನ್ಸ್ ಬಂತೂ ಅಂದ್ರೆ ಡಿಕ್ಲೇರ್ ಘೋಷಣೆ ಮಾಡಿಬಿಡ್ತಾರೆ. ಹಾಗೇ ಎದುರಾಳಿ ತಂಡವನ್ನ ಬೇಗ ಆಲೌಟ್ ಮಾಡಿಯೋ ಅಥವಾ ಫಾಲೋ ಆನ್ ಹೇರಿಯೋ ಪಂದ್ಯ ಗೆಲ್ಲೋಕೆ ನೋಡ್ತಾರೆ. ಈ ಅವಕಾಶ ಇಶಾನ್ ಕಿಶನ್​ಗೂ ಇತ್ತು. ಆದ್ರೆ ಕಿಶನ್ ಹಾಗೇ ಮಾಡಲಿಲ್ಲ.163 ಓವರ್‌ಗಳ ಕಾಲ ಕ್ರೀಸ್‌ ಕಚ್ಚಿ ಆಡಿದ ಪ್ಲೇಯರ್ಸ್ 2ನೇ ದಿನದಾಟದ ಅಂತ್ಯದವರೆಗೂ ಬ್ಯಾಟಿಂಗ್ ಮಾಡಿದ್ರು. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣ ಒಂದು ನಿಯಮ. ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್‌ನ ಫೈನಲ್ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಲೀಡ್ ಇದ್ದವ್ರಿಗೆ ಬೆನಿಫಿಟ್ ಇದೆ. 5 ದಿನಗಳ ಸುದೀರ್ಘ ಆಟದ ನಂತರವೂ ಪಂದ್ಯವು ಯಾವುದೇ ರಿಸಲ್ಟ್ ಬಾರದೆ ಡ್ರಾನಲ್ಲಿ ಕೊನೆಯಾದ್ರೆ  ಮೊದಲ ಇನಿಂಗ್ಸ್‌ನಲ್ಲಿ ಯಾವ ತಂಡ ಗರಿಷ್ಠ ರನ್ ಗಳಿಸಿ ಮುನ್ನಡೆ ಸಾಧಿಸಿರುತ್ತದೆಯೋ ಆ ತಂಡವನ್ನೇ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಸೋ ಈಗ ಈಸ್ಟ್ ಝೋನ್ ತಂಡ 708 ರನ್ ಗಳಿಸಿರೋದ್ರಿಂದ ಸೌತ್ ಜೋನ್ ಮೊದಲ ಇನ್ನಿಂಗ್ಸ್​ನಲ್ಲಿ ಇದಕ್ಕಿಂತ ಜಾಸ್ತಿ ರನ್ಸ್ ಕಲೆ ಹಾಕಬೇಕು. ಆದ್ರೆ ಅದು ಸುಲಭ ಇಲ್ಲ. ಆರಂಭದಲ್ಲೇ ವಿಕೆಟ್​ಗಳನ್ನ ಕಳ್ಕೊಂಡಿರೋ ತಂಡ ಹತ್ತಿರಕ್ಕೆ ಬರೋಕೆ ದೊಡ್ಡ ಮ್ಯಾಜಿಕ್ ನಡೀಬೇಕು. ಇದೇ ಕಾರಣಕ್ಕೆ ಇಶಾನ್ ಕಿಶನ್ ದೊಡ್ಡ ಮೊತ್ತ ಇದ್ರೂ ಆಲೌಟ್ ಆಗೋವರೆಗೂ ಬ್ಯಾಟಿಂಗ್ ಮುಂದುವರೆಸಿದ್ದು. ಕಿಶನ್​ನ ಈ ತಂತ್ರಗಾರಿಕೆಯೇ ಅವ್ರನ್ನ ಸೋಲರಿಯದ ನಾಯಕನನ್ನಾಗಿಸಿದೆ.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸೋಲರಿಯದ & ಅತ್ಯುತ್ತಮ ನಾಯಕ!

ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ಅತ್ಯುತ್ತಮ ಮತ್ತು ಸೋಲರಿಯದ ಕ್ಯಾಪ್ಟನ್ಸಿ ರೆಕಾರ್ಡ್ ಹೊಂದಿದ್ದಾರೆ. ನಾಯಕನಾಗಿ ಅವರು ಮುನ್ನಡೆಸಿದ ಯಾವುದೇ ಪಂದ್ಯದಲ್ಲಿ ಅವರ ತಂಡ ಇದುವರೆಗೆ ಸೋತಿಲ್ಲ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಒಟ್ಟಾರೆ 15 ಪಂದ್ಯಗಳಲ್ಲಿ ತಂಡವನ್ನ ಲೀಡ್ ಮಾಡಿದ್ದು ಅದ್ರಲ್ಲಿ 8 ಬಾರಿ ಗೆದ್ರೆ 7 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಇಶಾನ್ ಕಿಶನ್ ದೇಶಿ ಕ್ರಿಕೆಟ್‌ನಲ್ಲಿ ಜಾರ್ಖಂಡ್ ತಂಡವನ್ನು ಹಾಗೂ ದುಲೀಪ್ ಟ್ರೋಫಿಯಲ್ಲಿ ಈಸ್ಟ್ ಜೋನ್ (ಪೂರ್ವ ವಲಯ) ತಂಡವನ್ನು ಮುನ್ನಡೆಸಿದ್ದಾರೆ. ಇವರ ಅದ್ಭುತ ನಾಯಕತ್ವ ಮತ್ತು ಬ್ಯಾಟಿಂಗ್ ಶಕ್ತಿಯಿಂದಲೇ ಈಸ್ಟ್ ಜೋನ್ ತಂಡವು ದುಲೀಪ್ ಟ್ರೋಫಿ ಫೈನಲ್ ತಲುಪಿದ್ದಲ್ಲದೇ ಅಲ್ಲಿಯೂ ಅದ್ಭುತ ಪ್ರರದ್ಶನ ನೀಡಿದ್ದಾರೆ. ಇಲ್ಲಿಯೂ ಕೂಡ ಸೋಲರಿಯದೆ ಕಪ್ ಗೆಲ್ಲೋ ಎಲ್ಲಾ ಸಾಧ್ಯತೆಗಳೂ ಇವೆ.

ಇನ್ನು ಕಿಶನ್​ರ ಮತ್ತೊಂದು ಪ್ಲಸ್ ಪಾಯಿಂಟ್ ವಿಕೆಟ್ ಕೀಪಿಂಗ್. ಟಿ-20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿರುವ ಕಿಶನ್, ಫಾರ್ಮ್‌ನಲ್ಲಿದ್ದರೆ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ಆಯ್ಕೆಯಲ್ಲಿ ಮತ್ತೊಂದು ಬಲವಾದ ಆಯ್ಕೆಯಾಗಬಹುದು. ಆದರೆ ಟೀಂ ಇಂಡಿಯಾಗೆ ವಾಪಸ್ ಬರಲು ಕೇವಲ ಒಂದು ಟೂರ್ನಿಯ ಪ್ರದರ್ಶನ ಸಾಕಾಗುವುದಿಲ್ಲ. ನಿರಂತರವಾಗಿ ರನ್ ಗಳಿಸಬೇಕು.. ಫಿಟ್ನೆಸ್ ಕಾಪಾಡಿಕೊಳ್ಳಬೇಕು.. ದೇಶೀಯ ಕ್ರಿಕೆಟ್‌ನಲ್ಲಿ ಕನ್ಸಿಸ್ಟೆನ್ಸಿ ತೋರಿಸಬೇಕು.

Shantha Kumari

Leave a Reply

Your email address will not be published. Required fields are marked *