ಕೊರೊನಾಗಿಂತ ಡೇಂಜರ್ ಈ ವೈರಸ್! – ಕಣ್ಣಲ್ಲಿ ರಕ್ತ ತರುತ್ತೆ ಡೆಡ್ಲಿ ‘ಮಾರ್ಬರ್ಗ್’!
ಇದ್ರಿಂದ ಪಾರಾಗೋದು ಹೇಗೆ?
ಕೊರೊನಾ ಕಾಟದಿಂದ ತತ್ತರಿಸಿ ಹೋಗಿರೋ ಜಗತ್ತಿಗೆ ಮತ್ತೊಂದು ವೈರಸ್ ಕಾಟ ಶುರುವಾಗಿಗೆ. ಅದೇ ‘ಬ್ಲೀಡಿಂಗ್ ಐ’ ವೈರಸ್ ..ಈ ವೈರಸ್ ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿದ್ದು, ಹೆಚ್ಚಿನ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗ್ತಿದೆ. ಮಾರ್ಬರ್ಗ್ ಎಂದು ವೈದ್ಯಕೀಯವಾಗಿ ಕರೆಯಲಾಗುವ ಈ ‘ಬ್ಲೀಡಿಂಗ್ ಐ’ ವೈರಸ್‌ಗೆ ಈಗಾಗ್ಲೇ ರುವಾಂಡಾದಲ್ಲಿ 15 ಜನರು ಬಲಿಯಾಗಿದ್ದು, ನೂರಾರು ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಟೂರ್ನಿಯನ್ನೇ ಬಹಿಷ್ಕರಿಸುತ್ತಾ ಪಾಕಿಸ್ತಾನ? – ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್
ಬ್ಲೀಡಿಂಗ್ ಐ ವೈರಸ್ ಒಂದು ರೀತಿಯ ಸೋಂಕಾಗಿದ್ದು, ಇದು ಸಂಭವಿಸಿದಾಗ, ಕಣ್ಣುಗಳಿಂದ ರಕ್ತ ಹೊರಬರಬಹುದು. ಈಗಾಗ್ಲೇ ಎಂಫಾಕ್ಸ್ ವೈರಸ್‌ಗಳಿಂದ ಹೋರಾಡುತ್ತಿರುವ ಆಫ್ರಿಕನ್ ದೇಶಗಳಿಗೆ ಈ ರೋಗ ಬೇಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ದೈಹಿಕ ದ್ರವಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣೀರು, ಬೆವರು, ಮಲ, ಮೂತ್ರಗಳಿಂದ ಬರುತ್ತದೆ. ಅಲ್ಲದೇ ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳ ಮೂಲಕವೂ ಇನ್ನೊಬ್ಬರಿಗೆ ಹರಡುತ್ತದೆ. ಅಂದರೆ ಸೋಂಕಿತ ವ್ಯಕ್ತಿಯೊಂದಿಗೆ, ವ್ಯಕ್ತಿ ಬಳಸಿದ ವಸ್ತುಗಳ ಜೊತೆ ನೇರ ಸಂಪರ್ಕ ಮಾಡಿದರೆ ಮಾರ್ಬರ್ಗ್ ವೈರಸ್ ಹರಡುತ್ತದೆ. ಹಾಗಿದ್ರೆ ಈ ರೋಗ ಎಲ್ಲೆಲ್ಲಿ ಹರಡುತ್ತಿದೆ? ಇದರ ಲಕ್ಷಣಗಳೇನು ಅನ್ನೋದನ್ನ ನೋಡೋಣ ಬನ್ನಿ..
ಮಾರ್ಬರ್ಗ್ ವೈರಸ್‌ನ ಲಕ್ಷಣಗಳೇನು?
- ವ್ಯಕ್ತಿಯ ದೇಹ ಹೊಕ್ಕಿದ 21 ದಿನಗಳ ನಂತರ ವೈರಸ್ ಕೆಲಸ ಶುರುಮಾಡುತ್ತೆ
- ಇದ್ದಕ್ಕಿಂದ್ದಂತೆ ಹಾಗೇ ಮನುಷ್ಯನ ದೇಹವನ್ನು ಕಂಟ್ರೋಲ್ಗೆ ತೆಗೆದುಕೊಳ್ಳುತ್ತದೆ
- ಮೊದಲ ಎರಡು ದಿನ:ತೀವ್ರ ಜ್ವರ ಮತ್ತು ತೀವ್ರ ತಲೆನೋವು ಶುರುವಾಗುತ್ತೆ
- ಮೂರನೇ ದಿನ:ಅತಿಸಾರ, ಹೊಟ್ಟೆ ನೋವು, ಸ್ನಾಯು ಸೆಳೆತ, ವಾಕರಿಕೆ ಮತ್ತು ವಾಂತಿ
- ಕೆಲವು ಸಂದರ್ಭಗಳಲ್ಲಿ ಕಣ್ಣುಗಳಿಂದ ರಕ್ತವು ಹೊರಬರುತ್ತೆ
- 5 ಮತ್ತು 7 ದಿನಗಳ ನಡುವೆ: ರೋಗದ ಗಂಭೀರತೆ ಮತ್ತಷ್ಟು ಹೆಚ್ಚಾಗುತ್ತ ಹೋಗುತ್ತದೆ. ರಕ್ತಸ್ರಾವ, ಕಣ್ಣುಗಳಲ್ಲಿಯೂ ರಕ್ತ ಹೊರ ಬರುತ್ತದೆ.
- 8 ರಿಂದ 9 ದಿನಗಳ ನಡುವೆ: ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ನಂತರ ಸೋಂಕಿನ ತೀವ್ರತೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಇನ್ನೂ ಈ ಮಾರ್ಬರ್ಗ್ಗೆ ಪ್ರಸ್ತುತ ಅನುಮೋದಿತ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ವೈರಸ್ ಸೋಂಕಿತ ಜನರ ಸಂಪರ್ಕದಿಂದ ಹರಡುತ್ತದೆ. ಇದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವೈರಸ್ ಸೋಂಕಿತ ಪ್ರದೇಶಗಳಿಗೆ ಹೋಗಬಾರದು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಆಗಾಗ ಕೈ ತೊಳೆಯುವ ಮೂಲಕ ವೈರಸ್ನಿಂದ ದೂರ ಇರಬಹುದು. ಸೋಂಕಿತ ವ್ಯಕ್ತಿ ನೇರ ಸಂಪರ್ಕಕ್ಕೆ ಬರದಂತೆ ತಪ್ಪಿಸಿಕೊಳ್ಳಬೇಕು. ವೈರಸ್ನಿಂದ ಜೀವ ಕಳೆದುಕೊಳ್ಳುವ ಪ್ರಮಾಣ ಶೇಕಡಾ 50 ರಷ್ಟು ಇದೆ. ಆಫ್ರಿಕಾ ದೇಶಗಳಲ್ಲಿ ಬ್ಲೀಡಿಂಗ್ ಐ ವೈರಸ್‌ನ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ 17 ದೇಶಗಳಿಗೆ ಪ್ರಯಾಣಿಸೋರಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ಆರೋಗ್ಯ ಸುರಕ್ಷತೆ ಬಗ್ಗೆ ಎಚ್ಚರ ಇರಲಿ. ಇಂಗ್ಲೆಂಡ್ಗೆ ಹೋಗೋರು ಜಾಗೃತರಾಗಿರಬೇಕು ಎಂದಿದೆ. ಇದು ಕೊರೊನಾಕ್ಕಿಂತ ಭೀಕರವಾಗಿದ್ದು, ಈಗಲೇ ಅದನ್ನ ಹಿಮೆಟ್ಟಿಸುವ ಕೆಲಸ ಮಾಡಬೇಕಿದೆ.